ಜೆಸಿಬಿಯಿಂದ ‘ಎಕ್ಸ್ ಚೇಂಜ್ ’ ವಸ್ತು ತೆರವು!

Contributed byravi.gosavi@timesofindia.com|Vijaya Karnataka

ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದರು. ಕ್ಲಬ್‌ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದ ಎಲೆಕ್ಟ್ರಾನಿಕ್‌ ಮಳಿಗೆಯ 'ಎಕ್ಸ್‌ಚೇಂಜ್‌' ವಸ್ತುಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ಎಚ್ಚರಿಕೆ ನೀಡಿದರೂ ವಸ್ತುಗಳನ್ನು ತೆರವು ಮಾಡದ ಕಾರಣ ಈ ಕ್ರಮ ಕೈಗೊಳ್ಳಲಾಯಿತು. ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ಡಬ್ಬಿ ಅಂಗಡಿಗಳನ್ನೂ ತೆರವು ಮಾಡಲಾಯಿತು. ಉಪ ಆಯುಕ್ತೆ ರೇಷ್ಮಾ ನಿಪ್ಪಾಣಿಕರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

traffic disruption in belgaum clearing operation with jcb

- ವಾಹನ ಸಂಚಾರಕ್ಕೆ ಅಡಚಣೆಮಾಡಿದ ಮಳಿಗೆಗೆ ಪಾಠ

ವಿಕ ಸುದ್ದಿಲೋಕ ಬೆಳಗಾವಿ

ನಗರದಲ್ಲಿಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು , ಗುರುವಾರ ರಸ್ತೆಯಲ್ಲಿಇಟ್ಟಿದ್ದ ವಸ್ತುಗಳನ್ನು ಎತ್ತಿಕೊಂಡು ಹೋಗಿ ಅತಿಕ್ರಮಣಕಾರರ ಮಳಿಗೆ ಎದುರು ಎಸೆದು ಬಿಸಿ ಮುಟ್ಟಿಸಿದ್ದಾರೆ.

‘ಎಕ್ಸ್ ಚೇಂಜ್ ’ಗಾಗಿ ತಂದ ಹಳೆಯ ಫ್ರಿಡ್ಜ್ , ಟ್ರಜರಿ, ವಾಷಿಂಗ್ ಮಷಿನ್ ಗಳನ್ನು ನಗರದ ಕ್ಲಬ್ ರಸ್ತೆಯ ಎಲೆಕ್ಟ್ರಾನಿಕ್ ಮಳಿಗೆ ಎದುರು ಇಡಲಾಗಿತ್ತು. ಇವುಗಳನ್ನು ರಸ್ತೆ ಮೇಲೆ ಇಟ್ಟಿದ್ದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಎಚ್ಚರಿಕೆ ನೀಡಿದರೂ ಮಳಿಗೆಯವರು ವಸ್ತುಗಳನ್ನು ತೆರವು ಮಾಡಿರಲಿಲ್ಲ. ಹೀಗಾಗಿ ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ಈ ವಸ್ತುಗಳನ್ನು ಮಳಿಗೆ ಎದುರು ರಾಶಿ ಹಾಕಿದರು. ಬಳಿಕ ರಸ್ತೆ ಪಕ್ಕ ವ್ಯಾಪಾರ ನಡೆಸುತ್ತಿದ್ದ ಡಬ್ಬಿ ಅಂಗಡಿಗಳನ್ನು ತೆರವು ಮಾಡಿಸಿದರು. ಹಲವು ಸಾರಿ ಎಚ್ಚರಿಕೆ ಕೊಟ್ಟರೂ ವ್ಯಾಪಾರಿಗಳು ಕ್ರಮ ಕೈಗೊಳ್ಳದ ಕಾರಣ, ಡಬ್ಬಿ ಅಂಗಡಿಗಳನ್ನು ಜೆಸಿಬಿ ಯಂತ್ರದಿಂದ ತೆರವು ಮಾಡಿಸಿದರು.

ಪಾಲಿಕೆ ಉಪ ಆಯುಕ್ತೆ ರೇಷ್ಮಾ ನಿಪ್ಪಾಣಿಕರ ನೇತೃತ್ವದ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಅತಿಕ್ರಮಣ ತೆರವು ಮಾಡಿದರು.

*ಫೋಟೋ-30ರವಿಜಿ8

ಕ್ಲಬ್ ರಸ್ತೆಯಲ್ಲಿಅತಿಕ್ರಮಣ ತೆರವು ಕಾರ್ಯಾಚರಣೆ.