ಕಾಸರಗೋಡು : ಚೆಮ್ಮಟ್ಟಂವಯಲ್ ಕುತ್ತಿಕ್ಕೋಲ್ ಗದ್ದೆಯಲ್ಲಿನಡೆದ ಕೊಯ್ಲುತ್ಸವವನ್ನು ಕಣ್ಣೂರು ಕ್ರೈ ಬ್ರಾಂಚ್ ಡಿವೈಎಸ್ ಪಿ ಸಿ. ಕೆ. ಸುನಿಲ್ ಕುಮಾರ್ ಉದ್ಘಾಟಿಸಿದರು.
ಬಲ್ಲಕೃಷಿಕೂಟ ಅಧ್ಯಕ್ಷ ಪಿ. ತಂಬಾನ್ ಅಧ್ಯಕ್ಷತೆ ವಹಿಸಿದ್ದರು. ನವಕೇರಳ ಮಿಶನ್ ಜಿಲ್ಲಾಸಂಯೋಜಕ ಕೆ. ಬಾಲಕೃಷ್ಣ, ಕೆ. ವಿ. ರತೀಶ್ , ಎ. ಪ್ರದೀಪ್ ಕುಮಾರ್ , ಎನ್ . ಗೋಪಿ, ಎನ್ . ಮುರಳಿ, ಮಧು ಕವ್ವಾಯಿ, ಎಂ. ಮನೋಜ್ ಕುಮಾರ್ , ಕೆ. ವಿ. ಶ್ರೀನಿವಾಸನ್ ಮಾತನಾಡಿದರು.
ಐಟಿ ಪ್ರೊಫೆಶನಲ್ ಗಳು, ಅನಿವಾಸಿಗಳು, ಸರಕಾರಿ ಸಿಬ್ಬಂದಿಗಳು, ವ್ಯಾಪಾರಿಗಳನ್ನೊಳಗೊಂಡ ಒಕ್ಕೂಟವು ಬಲ್ಲಕೃಷಿ ಕೂಟವಾಗಿದೆ. ಕಾಞಂಗಾಡು ಕೃಷಿ ಕಾರ್ಮಿಕ ಸಂಘಟನೆಯ ಬಲ್ಲಗ್ರಾಮ ಸಮಿತಿಯ ಅಧೀನದಲ್ಲಿಕೃಷಿಕೂಟವು ಕಾರ್ಯಾಚರಿಸುತ್ತಿದೆ. ವಿಷುವಿಗೆ ವಿಷರಹಿತವಾದ ಊರ ಅಕ್ಕಿ ಎಂಬ ಧ್ಯೇಯದೊಂದಿಗೆ ಕೊಯ್ಲುನಡೆಯಿತು. ಬಲ್ಲರೈಸ್ ಎಂಬ ಹೆಸರಿನಲ್ಲಿಬ್ರ್ಯಾಂಡ್ ಮಾಡಿ ಅಕ್ಕಿಯನ್ನು ಮಾರುಕಟ್ಟೆಗೆ ತಲುಪಿಸಲಾಗುವುದು. ಗದ್ದೆಗೆ ಎಸೆದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ ಶುಚೀಕರಿಸಿ ಅವರು ಗದ್ದೆಯಲ್ಲಿಭತ್ತಕೃಷಿ ನಡೆಸಿರುವುದಾಗಿದೆ. ಬಳಿಕ ಬೀಜ ಬಿತ್ತನೆ ನಡೆಯಿತು. ಇದು ಮೂರನೇಬಾರಿಯ ಕೊಯ್ಲುಆಗಿದೆ.
ಚಿತ್ರ: 5ಕೆಎಸ್ ಎಲ್ ಕೊಯ್ಲು- ಕೊಯ್ಲುತ್ಸವವನ್ನು ಕಣ್ಣೂರು ಕ್ರೆತ್ರೖಬ್ರಾಂಚ್ ಡಿವೈಎಸ್ ಪಿ ಸಿ. ಕೆ. ಸುನಿಲ್ ಕುಮಾರ್ ಉದ್ಘಾಟಿಸಿದರು.

