ಚಂದನ್ ಶæಟ್ಟಿ-ಲೀಡ್

Contributed byshubha.hegde@timesgroup.com|Vijaya Karnataka

ಕನ್ನಡದ ಜನಪ್ರಿಯ ಗಾಯಕ ಚಂದನ್ ಶೆಟ್ಟಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ. ಅವರು ಮೊದಲ ಬಾರಿಗೆ ಇಂಗ್ಲಿಷ್ ಹಾಡೊಂದನ್ನು ರಚಿಸಿ, ನಟಿಸಿ, ಹಾಡುವ ಮೂಲಕ ಗ್ಲೋಬಲ್‌ ಮ್ಯೂಸಿಕ್‌ ಮಾರ್ಕೆಟ್‌ಗೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಮೈಸೂರಿನ ಡಯಾನಾ ಎಂಬ ಪಾಪ್ ತಾರೆಯನ್ನು 'ಡೈನಾಮೈಟ್' ಹಾಡಿನ ಮೂಲಕ ಪರಿಚಯಿಸಿದ್ದಾರೆ. ಈ ಹಾಡಿನ ನಿರ್ಮಾಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಗುರಿಯನ್ನು ಚಂದನ್ ಶೆಟ್ಟಿ ಹೊಂದಿದ್ದಾರೆ.

chandan shetty the only kannada singer with an english song in hollywood

ಹಾಲಿವುಡ್ ಮ್ಯೂಸಿಕ್ ಮಾರ್ಕೆಟ್ ಗೆ ಚಂದನ್ ಶೆಟ್ಟಿ ಎಂಟ್ರಿ

ಇಂಟ್ರೋ

ನಟ, ರಾರ ಯಪ್ ಸಿಂಗರ್ , ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ಇಂಗ್ಲಿಷ್ ಸಾಂಗ್ ಮಾಡುವ ಮೂಲಕ ಇಂಟರ್ ನ್ಯಾಷನಲ್ ಮ್ಯೂಸಿಕ್ ಮಾರ್ಕೆಟ್ ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ಚಂದನ್ ಮಾತನಾಡಿದ್ದಾರೆ.

ಕಿರಣ್

ಕನ್ನಡದ ಜನಪ್ರಿಯ ರಾರ ಯಪ್ ಸಿಂಗರ್ ಮತ್ತು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಈಗ ಪ್ರಾದೇಶಿಕ ಗಡಿಯನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿಸದ್ದು ಮಾಡಲು ಸಜ್ಜಾಗಿದ್ದಾರೆ. ಮೊದಲ ಬಾರಿಗೆ ಇಂಗ್ಲಿಷ್ ಸಾಂಗ್ ಮಾಡುವ ಮೂಲಕ ಅವರು ಗ್ಲೋಬಲ್ ಮ್ಯೂಸಿಕ್ ಮಾರ್ಕೆಟ್ ನಲ್ಲಿಗುರುತಿಸಿಕೊಳ್ಳುವ ಸಡಗರದಲ್ಲಿಇದ್ದಾರೆ.

ಮೈಸೂರಿನ ಡಯಾನಾ ಈಗ ಡೈನಾಮೈಟ್

ಮೈಸೂರು ಮೂಲದ ಡಯಾನಾ ಅವರನ್ನು ಪಾಪ್ ತಾರೆಯಾಗಿ ‘ಡೈನಾಮೈಟ್ ’ ಹಾಡಿನ ಮೂಲಕ ಪರಿಚಯಿಸಿದ್ದಾರೆ. ಈ ಹಾಡಿನಲ್ಲಿಚಂದನ್ ಶೆಟ್ಟಿ ಕೂಡ ನಟಿಸಿ, ಮೊದಲ ಬಾರಿಗೆ ಇಂಗ್ಲಿಷ್ ನಲ್ಲಿಹಾಡಿದ್ದಾರೆ. ಹಾಲಿವುಡ್ ಜತೆಗೆ ಪೈಪೋಟಿ ನೀಡಿರುವ ಅವರು ಹಾಡಿನ ಮೇಕಿಂಗ್ , ರೆಕಾರ್ಡಿಂಗ್ ಎಲ್ಲವನ್ನು ಉನ್ನತ ಮಟ್ಟದಲ್ಲೇ ಮಾಡಿದ್ದಾರೆ.

‘ ಡಯಾನಾ ನೋಡಲು ವಿದೇಶಿ ಹುಡುಗಿಯಂತೆ ಕಾಣುತ್ತಿದ್ದು, ಅವರ ಆಟಿಟ್ಯೂಡ್ ಇಂಟರ್ ನ್ಯಾಷನಲ್ ಮಟ್ಟದಲ್ಲಿದೆ. ಡಯಾನಾ ಅವರ ಹೆಸರಿಗೆ ಹೊಂದುವಂತೆ ಹಾಡಿಗೆ ‘ಡೈನಾಮೈಟ್ ’ ಎಂದು ಹೆಸರಿಡಲಾಗಿದೆ’ ಎಂದು ಚಂದನ್ ತಿಳಿಸಿದ್ದಾರೆ.

‘ಈ ಹಾಡಿಗೆ ನಾವೇ ಲಿರಿಕ್ಸ್ ಬರೆದುಕೊಂಡು, ನಂತರ ಎಐ ಸಹಾಯದಿಂದ ಫೈನ್ ಟ್ಯೂನ್ ಮಾಡಿಕೊಂಡಿದ್ದೇವೆ. ಸದ್ಯ ಜಗತ್ತಿನಲ್ಲಿಚಾಲ್ತಿಯಲ್ಲಿರುವ ಟಾಪ್ ಟೆಕ್ನಾಲಜಿಗಳನ್ನು ಈ ಹಾಡಿನ ಪ್ರೊಡಕ್ಷನ್ ನಲ್ಲಿಬಳಸಿಕೊಂಡಿದ್ದೇವೆ. ಇದು ಡಯಾನಾ ಅವರ ಇಂಟ್ರಡಕ್ಷನ್ ಸಾಂಗ್ ’ ಎಂದಿದ್ದಾರೆ.

ಇಂಗ್ಲಿಷ್ ಹಾಡಿನ ಆಯ್ಕೆ ಏಕೆ?

ಕೇವಲ ಪ್ರಾದೇಶಿಕ ಭಾಷೆಗೆ ಸೀಮಿತವಾಗದೆ ವಿಶ್ವವ್ಯಾಪಿ ಗುರುತಿಸಿಕೊಳ್ಳುವುದು ಚಂದನ್ ಅವರ ಉದ್ದೇಶ. ‘ಪ್ಯಾನ್ ಇಂಡಿಯಾ ಸಿನಿಮಾಗಳು ಆಯಾ ಭಾಷೆಯ ಕಾರಣಕ್ಕೆ ಹಿಟ್ ಆಗುತ್ತವೆ. ಆದರೆ ಸಂಗೀತವನ್ನು ಎಲ್ಲಾಭಾಷೆಗಳಲ್ಲಿಪ್ರತ್ಯೇಕವಾಗಿ ಪ್ರಚಾರ ಮಾಡುವುದು ಕಷ್ಟ. ಇಂಗ್ಲಿಷ್ ನಲ್ಲಿಹಾಡು ಮಾಡಿದಾಗ ಅದು ಜಗತ್ತಿನಾದ್ಯಂತ ತಲುಪುತ್ತದೆ’ ಎಂದಿದ್ದಾರೆ ಚಂದನ್ .

ಬಾಕ್ಸ್

ಸಂಗೀತ ಉದ್ದಿಮೆ ಗರಿಮೆ

‘ಸಂಗೀತ ಉದ್ಯಮ ಕಳೆ ಕಳೆದುಕೊಂಡಿದೆ ಎಂಬ ಮಾತಿದೆ. ಮುಂಚಿನ ಹಾಗೆ ಇಂದಿಗೆ ಕ್ಯಾಸೆಟ್ , ಸಿಡಿಗಳು ಬರುತ್ತಿಲ್ಲ. ಹಾಗಂತ ಸಂಗೀತ ಉದ್ಯಮ ವಿನಾಶದ ಹಂತ ತಲುಪಿಲ್ಲ. ಇನ್ನಷ್ಟು ಹೊಸ ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಹಾಡಿನ ಕ್ವಾಲಿಟಿ ಉತ್ಕೃಷ್ಟವಾಗಿದೆ. ಡಿಜಿಟಲ್ ವೇದಿಕೆಗಳ ಮೂಲಕ ಕಲಾವಿದರಿಗೆ ನಿರಂತರವಾಗಿ ರೆವಿನ್ಯೂ ಬರುತ್ತಿದೆ’ ಎನ್ನುವುದು ಚಂದನ್ ಅಭಿಪ್ರಾಯ.

ಕೋಟ್

ನಾನು ಅಮೆರಿಕದ 15 ರಾಜ್ಯಗಳಲ್ಲಿಪ್ರದರ್ಶನ ನೀಡಿದ್ದೇನೆ. ಕನ್ನಡಿಗನೊಬ್ಬ ಇಂಗ್ಲಿಷ್ ಹಾಡು ಮಾಡುತ್ತಿರುವುದಕ್ಕೆ ಅನಿವಾಸಿ ಕನ್ನಡಿಗರಿಂದ ಭರ್ಜರಿ ಬೆಂಬಲ ಸಿಗುತ್ತಿದೆ. ನಾವು ಕೂಡ ಜಾಗತಿಕ ಮಾರುಕಟ್ಟೆಯಲ್ಲಿಸ್ಪರ್ಧಿಸಬಲ್ಲೆವು ಎಂದು ತೋರಿಸುವುದೇ ನನ್ನ ಗುರಿ.

ಚಂದನ್ ಶೆಟ್ಟಿ| ನಟ-ಸಂಗೀತಗಾರ