ಐ ವಿಟ್ನೆಸ್ -ರಿಯಲ್ ಚಾಜ್ ರ್ ಶೀಟ್
ವೆಂಕಟ್ ಭಾರದ್ವಾಜ್ ನಿರ್ದೇಶನದ ನೈಜ ಘಟನೆ ಆಧರಿತ ಸಿನಿಮಾ‘ಚಾಜ್ ರ್ ಶೀಟ್ 03-08’.
ನಿವೃತ್ತ ಪೊಲೀಸ್ ಅಧಿಕಾರಿ .ಎಸ್ .ಕೆ. ಉಮೇಶ್ ಅವರ ಕೃತಿ ‘ಐ ವಿಟ್ನಿಸ್ ’ನಲ್ಲಿಬರೆದಿರುವ ಅವರ ಜೀವನದ ಒಂದು ನೈಜ ಪ್ರಕರಣವನ್ನೇ ಸಿನಿಮಾವಾಗಿ ತೆರೆಗೆ ತರಲು ತಯಾರಿ ನಡೆದಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ , ‘2003ರ ಸುಮಾರಿನಲ್ಲಿನಡೆದ ಒಂದು ಹುಡುಗಿಯ ಮಿಸ್ಸಿಂಗ್ ಕೇಸ್ ಸಿನಿಮಾದ ತಿರುಳು. ಉಮೇಶ್ ಅವರು ಆಗ ನಡೆಸಿದ ತನಿಖೆ, ಆಗಿನ ಕಾಲಕ್ಕೆ ಸಾಕ್ಷ್ಯಗಳನ್ನು ಹುಡುಕಲು ಇದ್ದ ಸವಾಲುಗಳು, ಮಿಸ್ಸಿಂಗ್ ಕೇಸ್ ನಲ್ಲಾದ ಬದಲಾವಣೆಗಳು, ಹುಡುಗಿ ಹೇಗೆ ಪತ್ತೆಯಾದಳು ಎಂಬ ರೋಚಕ ಕ್ರೈಂ ಡ್ರಾಮಾ ಈ ಚಿತ್ರದಲ್ಲಿಇರಲಿದೆ. ಪೋಷಕರು ವಯಸ್ಸಿನ ಮಕ್ಕಳನ್ನು ಹೇಗೆ ಬೆಳೆಸಬೇಕು, ಹೇಗೆ ಅವರಿಗೆ ಸರಿತಪ್ಪುಗಳನ್ನು ತಿಳಿಸಿಕೊಡಬೇಕು ಎಂಬ ಸಂದೇಶವನ್ನು ಹೇಳಲಿದೆ’ ಎಂದಿದ್ದಾರೆ.
ಬೆಂಗಳೂರು, ಕನಕಪುರ ಸುತ್ತಮುತ್ತ ಸಿನಿಮಾದ ಶೂಟಿಂಗ್ ನಡೆದಿದೆ. ಈ ಚಿತ್ರದಲ್ಲಿಹಿರಿಯ ನಟ ಸುಂದರ್ ರಾಜ್ , ಹರ್ಷಾರ್ಜುನ್ , ಅಮರ್ , ಸತ್ಯಶ್ರೀ, ಚೇತನಾ ಖೋಟ್ , ಡಾ. ಪ್ರಮೋದ್ ಹಿರೇಮಠ್ , ಡಾ. ಸುಧಾಕರ್ ಶೆಟ್ಟಿ, ರೂಪೇಶ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ಸಮೀರ್ ಕುಲಕರ್ಣಿ ಸಂಗೀತ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಶಮೀಕ್ ವಿ ಭಾರದ್ವಾಜ್ ಸಂಕಲನವಿದೆ.

