ಟೈಟಲ್ ವಿವಾದದಲ್ಲಿತಿಕ್ಲುರಾಮ
ಗಾಯಕ, ಸಂಗೀತ ಸಂಯೋಜಕ ಮಂಜುಕವಿ ನಿರ್ದೇಶನದ ‘ತಿಕ್ಲುರಾಮ’ ಸಿನಿಮಾ ಶೀರ್ಷಿಕೆ ವಿವಾದಕ್ಕೆ ಒಳಗಾಗಿದೆ. ಸಿನಿಮಾದ ಶೀರ್ಷಿಕೆ ಸರಿಯಿಲ್ಲವೆಂದು ಹಿಂದೂಪರ ಸಂಘಟನೆಗಳು ದೂರು ನೀಡಿವೆ.
ಕಥೆ ಬರೆದು ಶೀರ್ಷಿಕೆ ಹೆಸರಿನ ಪಾತ್ರದಲ್ಲಿನಟಿಸುತ್ತಿರುವ ಡಾ.ರಾಜ್ ವೀರ್ ಶೀರ್ಷಿಕೆ ವಿವಾದಕ್ಕೆ ಪ್ರತಿಕ್ರಿಯಿಸಿ, ‘ರಾಮ ಮತ್ತು ಹನುಮನ ಹೆಸರಿಗೆ ಧಕ್ಕೆ ತರುವ, ಅವಹೇಳನ ಮಾಡುವ ಉದ್ದೇಶ ಇಲ್ಲ. ಸಿನಿಮಾದಲ್ಲಿಉತ್ತಮ ಸಂದೇಶ ಇದೆ. ತಿಕ್ಲುರಾಮ ಸಾಮಾಜಿಕ ಕೆಲಸದಲ್ಲಿತೊಡಗಿಕೊಂಡು, ಪರಿಸರ ಕಾಪಾಡುತ್ತಾ, ಜೀವನ ನಡೆಸುತ್ತಿರುವಾಗ ಆತನ ಬದುಕಲ್ಲಿಏನೆಲ್ಲಾಆಗುಹೋಗುಗಳು ಆಗುತ್ತವೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದಿದ್ದಾರೆ.
ತಾರಾಗಣದಲ್ಲಿಸುಚೇಂದ್ರ ಪಸ್ರಾದ್ , ಜಹಾಂಗೀರ್ , ಚೈತ್ರರಾಮ್ , ಹಾಸ್ಯ ನಟ ಗಿರೀಶ್ , ವಿನೋದ್ ಪವಿತ್ರ, ಮಧು ಭೈರಪ್ಪ, ಶ್ರಾವ್ಯ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ವಿನು ಮನಸು ಹಿನ್ನಲೆ ಸಂಗೀತ,ರಾಜ್ ಕಡೂರು - ಭರತ್ ಛಾಯಾಗ್ರಹಣ, ಅಲ್ಟಿಮೇಟ್ ಶಿವು-ಮಾಸ್ ಮಾದು ಸಾಹಸ ನಿರ್ದೇಶನ, ಜಗ್ಗು ನೃತ್ಯ ನಿರ್ದೇಶನವಿದೆ.

