ತಂದೆಯನ್ನೇ ಕೊಂದ ಇಬ್ಬರು ಮಕ್ಕಳಿಗೆ ಜೀವಾವಧಿ ಶಿಕ್ಷೆ

Contributed bytvlbdr@gmail.com|Vijaya Karnataka

ಬೀದರ್‌ನಲ್ಲಿ ತಂದೆಯ ಹತ್ಯೆ ಪ್ರಕರಣದಲ್ಲಿ ಇಬ್ಬರು ಮಕ್ಕಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಕುಟುಂಬ ಕಲಹದಿಂದಾಗಿ 2020ರ ಡಿಸೆಂಬರ್ 31ರಂದು ಈ ಘಟನೆ ನಡೆದಿತ್ತು. ಆರೋಪಿಗಳು ತಂದೆಯ ದೇಹವನ್ನು ತುಂಡರಿಸಿ, ಚೆಕ್‌ ಡ್ಯಾಂನಲ್ಲಿ ಎಸೆದಿದ್ದರು. ತಲೆ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಸುಟ್ಟುಹಾಕಿದ್ದರು. ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಇತರ ಮೂವರು ಆರೋಪಿಗಳನ್ನು ಬಿಡುಗಡೆ ಮಾಡಿದೆ.

fathers murder two sons sentenced to life imprisonment

ವಿಕಸುದ್ದಿಲೋಕ ಬೀದರ್ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿರುವುದು ಸಾಬೀತಾಗಿದ್ದರಿಂದ ಅಪರಾಧಿ ಮಕ್ಕಳಿಗೆ ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಜತೆಗೆ ತಲಾ 5000 ರೂ. ದಂಡ ವಿಧಿಸಿದ್ದು, ಅದು ನೀಡಲು ತಪ್ಪಿದ್ದಲ್ಲಿಒಂದು ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ಪ್ರಕರಣದಲ್ಲಿಇನ್ನುಳಿದ ಮೂವರು ಆರೋಪಿಗಳಿಗೆ ಸಾಕ್ಷಾತ್ರ್ಯಧಾರಗಳ ಕೊರತೆಯಿಂದ ನ್ಯಾಯಲಯ ಬಿಡುಗಡೆ ಮಾಡಿದೆ. ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದ ಸೈಯದ್ ಬಲಿಗುರ್ ರೆಹಮಾನ್ ಅವರು ಗುರುವಾರ ತೀರ್ಪು ಪ್ರಕಟಿಸಿದ್ದು, ಆರೋಪಿಗಳಾದ ಕೊರವಾ ಸಂತೋಷ ತಂದೆ ವೈಜನಾಥ ಹಾಗೂ ಕೊರವಾ ಅನುಕೇತ ವೈಜನಾಥ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ, ತೀರ್ಪು ಪ್ರಕಟಿಸಿದ್ದಾರೆ. ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಕೆ.ವೈಜನಾಥ ತಂದೆ ಬಾಳಪ್ಪ ಎಂಬಾತನನ್ನು ಕುಟುಂಬ ಕಲಹದಿಂದಾಗಿ ಆತನ ಮಕ್ಕಳೇ, 2020ರ ಡಿ. 31ರಂದು ಭೀಕರವಾಗಿ ಕೊಲೆ ಮಾಡಿದ್ದರು. ಅಂಗಾಂಗಳನ್ನು ಬೇರ್ಪಡಿಸಿ, ಬೈಕ್ ಮೇಲೆ ತೆಲಂಗಾಣದ ಬಸಂತಪುರ ಸೀಮೆಯಲ್ಲಿರುವ ಚೆಕ್ ಡ್ಯಾಂನಲ್ಲಿಬೇರೆ ಬೇರೆ ಕಡೆಗಳಲ್ಲಿಬೀಸಾಕಿದ್ದರು. ಬಳಿಕ ಮೃತನ ತಲೆ, ಕೃತ್ಯಕ್ಕೆ ಬಳಸಿದ್ದ ಚಾಕು ಇತರೆ ಸಾಮಾನುಗಳನ್ನು ಮನ್ನಳ್ಳಿಯಿಂದ ಬಗದಲ್ ಗೆ ಹೋಗುವ ದಾರಿಯ ತಡಪಳ್ಳಿ ಸೀಮೆಯಲ್ಲಿನ ಅರಣ್ಯದಲ್ಲಿಬೀಸಾಡಿ, ಪೆಟ್ರೋಲ್ ನಿಂದ ಬೆಂಕಿ ಹಚ್ಚಿ ಸುಟ್ಟಿದ್ದರು. ಬಳಿಕ ಮೃತನನ್ನು ಹುಡುಕಾಡುತ್ತಾ ಹೋದಾಗ ಬಸಂತಪುರದ ಚೆಕ್ ಡ್ಯಾಂ ಬಳಿ ಅಂಗಾಂಗಳು ಪತ್ತೆಯಾಗಿದ್ದವು. ಈ ಕುರಿತು ಮನ್ನಳ್ಳಿ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನಾ ಪರವಾಗಿ ಸರಕಾರಿ ಅಭಿಯೋಜಕ ನಾಗಪ್ಪ ಸಿ ನಾಕಮನ್ ವಾದ ಮಂಡಿಸಿದ್ದಾರೆ.