ಕ್ವಾಂಟಂ ಸಿಟಿ

Contributed byKeerthi Kolgar|Vijaya Karnataka

ಬೆಂಗಳೂರಿನಲ್ಲಿ ದೇಶದ ಮೊದಲ ಕ್ವಾಂಟಂ ಸಿಟಿ ಸ್ಥಾಪನೆಯಾಗಲಿದೆ. ಇದು ಕ್ವಾಂಟಂ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಮೀಸಲಾಗಿದೆ. ಸಂಶೋಧನಾ ಸಂಸ್ಥೆಗಳು, ಸ್ಟಾರ್ಟಪ್‌ಗಳು ಮತ್ತು ಕಂಪನಿಗಳು ಒಂದೇ ಸೂರಿನಡಿ ಬರಲಿವೆ. ಕ್ವಾಂಟಂ ಕಂಪ್ಯೂಟಿಂಗ್‌ಗೆ ಪೂರಕ ಮೂಲಸೌಕರ್ಯ ಒದಗಿಸಲಿದೆ. ಭಾರತವನ್ನು ಜಾಗತಿಕ ಕ್ವಾಂಟಂ ಭೂಪಟದಲ್ಲಿ ಮುಂಚೂಣಿಗೆ ತರುವುದು ಇದರ ಗುರಿಯಾಗಿದೆ. ಸೈಬರ್‌ ಭದ್ರತೆ, ಔಷಧ ಸಂಶೋಧನೆ ಸುಧಾರಣೆಗೆ ವೇದಿಕೆ ಕಲ್ಪಿಸಲಿದೆ.

indias first quantum city a new wave for science and technology

‘ಕ್ವಾಂಟಂ ಸಿಟಿ’ ಎಂಬುದು ಕ್ವಾಂಟಂ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗಾಗಿ ಮೀಸಲಾದ ಒಂದು ವಿಶೇಷ ನಗರಾಭಿವೃದ್ಧಿ ಯೋಜನೆಯಾಗಿದೆ. ಕ್ವಾಂಟಂ ಕ್ಷೇತ್ರದಲ್ಲಿಕಾರ್ಯನಿರ್ವಹಿಸುತ್ತಿರುವ ಸಂಶೋಧನಾ ಸಂಸ್ಥೆಗಳು, ಸ್ಟಾರ್ಟಪ್ ಗಳು ಮತ್ತು ಬೃಹತ್ ಕಂಪನಿಗಳನ್ನು ಒಂದೇ ಸೂರಿನಡಿ ಸೇರಿಸಿ, ಕ್ವಾಂಟಂ ಕಂಪ್ಯೂಟಿಂಗ್ ಗೆ ಪೂರಕವಾದ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಇದನ್ನು ‘ಕ್ವಾಂಟಂ ಸಿಟಿ’ ಎಂದು ಕರೆಯಲಾಗುತ್ತದೆ. ಕ್ವಾಂಟಂ ಟೆಕ್ನಾಲಜಿಯಿಂದ ಸಂಕೀರ್ಣ ಕೆಲಸಗಳು ತ್ವರಿತ ಗತಿಯಲ್ಲಿಆಗುತ್ತವೆ. ಸಾಂಪ್ರದಾಯಿಕ ವ್ಯವಸ್ಥೆಗಳಿಗಿಂತ ಹೆಚ್ಚಿನ ನಿಖರತೆ ಮತ್ತು ದಕ್ಷತೆ ಈ ತಂತ್ರಜ್ಞಾನದ ಮತ್ತೊಂದು ವೈಶಿಷ್ಟ್ಯ. ಕರ್ನಾಟಕ ಸರಕಾರ ಬೆಂಗಳೂರಿನಲ್ಲಿಸ್ಥಾಪಿಸಲು ಉದ್ದೇಶಿಸಿರುವ ದೇಶದ ಮೊದಲ ಕ್ವಾಂಟಂ ಸಿಟಿಯು, ಭಾರತವನ್ನು ಜಾಗತಿಕ ಕ್ವಾಂಟಂ ಭೂಪಟದಲ್ಲಿಮುಂಚೂಣಿಗೆ ತರುವ ಉದ್ದೇಶವನ್ನು ಹೊಂದಿದೆ. ಜೊತೆಗೆ ಸೈಬರ್ ಭದ್ರತೆ , ಔಷಧ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳ ಸುಧಾರಣೆಗೆ ವೇದಿಕೆ ಕಲ್ಪಿಸಲಿದೆ. ಐಟಿ ಕ್ಷೇತ್ರದಲ್ಲಿನ ರಾಜ್ಯದ ತಾಂತ್ರಿಕ ಸಾಮರ್ಥ್ಯವನ್ನು ಬಳಸಿಕೊಂಡು ‘ಕ್ವಾಂಟಂ ಎಕಾನಮಿ’ಯನ್ನು ಸೃಷ್ಟಿಸುವುದು ಇದರ ಗುರಿ. ಅಮೆರಿಕದ ಶಿಕಾಗೊ, ಕೆನಡಾದ ಕ್ಯಾಲ್ಗರಿ ಮತ್ತು ನೆದರ್ಲೆಂಡ್ಸ್ ನ ಡೆಲ್ ್ಫ$್ಟ ವಿಶ್ವದ ಕ್ವಾಂಟಂ ನಗರಿಗಳ ಪೈಕಿ ಸೇರಿವೆ. ಭವಿಷ್ಯದ ಆರ್ಥಿಕತೆ ಮತ್ತು ತಾಂತ್ರಿಕ ಶಕ್ತಿಯನ್ನು ನಿರ್ಧರಿಸುವ ನಿಟ್ಟಿನಲ್ಲಿಕ್ವಾಂಟಂ ನಗರಗಳು ಮುಖ್ಯ ಪಾತ್ರ ನಿರ್ವಹಿಸಲಿವೆ.