ಬಿಜೆಪಿ ಪ್ರತಿಭಟನೆ

Contributed bysidduswami25@gmail.com|Vijaya Karnataka

ಸೇಡಂನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿತು. ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್ ಗೆ ಮಹಿಳೆಯರು ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸಂತೋಷಿರಾಣಿ ರಾಜಕುಮಾರ ಪಾಟೀಲ್ ತೆಲ್ಕೂರ್ ಹೇಳಿದರು. ಶಾಸಕ ಶರಣಪ್ರಕಾಶ್ ಪಾಟೀಲ್ ಮಹಿಳಾ ಅಭಿವೃದ್ಧಿ ವಿರೋಧಿ ಎಂದು ಆರೋಪಿಸಿದರು. ಕೊತ್ತಲ ಬಸವೇಶ್ವರ ದೇವಾಲಯದಿಂದ ಅಂಬೇಡ್ಕರ್ ಪುತ್ಥಳಿ ವರೆಗೆ ಮೆರವಣಿಗೆ ನಡೆಯಿತು.

bjp mahila morcha protests against congress

ಚಿತ್ರ : (30-ಸೇಡಂಏಪ್ರಿಲ…-02)

ಸೇಡಂ ನಗರದಲ್ಲಿಬಿಜೆಪಿ ಮಹಿಳಾ ಮೋರ್ಚಾದಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

*****

ಸೇಡಂನಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿ

ವಿಕ ಸುದ್ದಿಲೋಕ ಸೇಡಂ

ಕೇಂದ್ರ ಸರಕಾರ ಐತಿಹಾಸಿಕವಾಗಿ ಜಾರಿಗೆ ತರಲು ಉದ್ದೇಶಿಸಿದ್ದ ಶೇ.33 ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸಂತೋಷಿರಾಣಿ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

ನಗರದಲ್ಲಿಬಿಜೆಪಿ ಮಹಿಳಾ ಘಟಕದಿಂದ ಕಾಂಗ್ರೆಸ್ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿಮಾತನಾಡಿದರು. ದೇಶದ ಜನಸಂಖ್ಯೆಯಲ್ಲಿಅರ್ಧದಷ್ಟು ಇರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಾಗಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಈ ಮಸೂದೆಗೆ ಅಡ್ಡಗಾಲು ಹಾಕುವ ಮೂಲಕ ತಮ್ಮ ಮಹಿಳಾ ವಿರೋಧಿ ಧೋರಣೆ ಪ್ರದರ್ಶಿಸುತ್ತಿವೆ ಎಂದರು.

ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಡಿಸಿಸಿ ಬ್ಯಾಂಕ್ ಮೂಲಕ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವ ಯೋಜನೆ ತಡೆಯಲು ಶಾಸಕರು ಪತ್ರ ಬರೆದಿದ್ದಾರೆ. ಇದು ಅವರು ಮಹಿಳಾ ಅಭಿವೃದ್ಧಿಯ ವಿರೋಧಿ ಎಂಬುದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ,ತಾಲೂಕು ಅಧ್ಯಕ್ಷ ಶರಣು ಶಂಕರ ಮೆಡಿಕಲ…, ಎಸ್ ಸಿ,ಎಸ್ ಟಿ ಘಟಕದ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ,ಓಂಪ್ರಕಾಶ್ ಪಾಟೀಲ್ , ತಿರುಪತಿ ಶಾಬಾದಕರ್ , ನಾಗಪ್ಪ ಕೊಳ್ಳಿ, ರಾಜು ಕಟ್ಟಿ, ಸಂಗಪ್ಪ ಕುಂಬಾರ,ಶರಣಪ್ಪ ಕೊಳ್ಳಿ, ಸಿದ್ದು ಊಡಗಿ, ಮಹಾವೀರ ಅಳ್ಳೊಳ್ಳಿ, ವಿಜಯ ಕುಮಾರ ಪಾಟೀಲ್ , ರಾಮು ಕಣೆಕಲ್ , ವಿರೇಶ ಹೂಗಾರ, ರಾಘವೇಂದ್ರ ಮೆಕ್ಯಾನಿಕ್ , ವಿನೋದ ಸಾಹುಕಾರ್ , ಮಹಾದೇವಪ್ಪ ಗೋಣಿ, ಬಾಲರಾಜ ಕೊಡಸಾ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಗೌರಿ ಚಿತಕೊಟಿ, ತಾಲೂಕಾಧ್ಯಕ್ಷ ಶೈಲಜಾ ಹಿತ್ತಲ,ಮಹಾನಂದ, ಚನ್ನಮ್ಮ ಪಾಟೀಲ್ , ಶಿಲ್ಪಾ ಮಾಲಿ ಪಾಟೀಲ್ , ಭಾಗ್ಯಶ್ರೀ ನಾಯಿಕೊಡಿ ಸೇರಿ ಅನೇಕರಿದ್ದರು.ಇದಕ್ಕೂ ಮುನ್ನ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ರೈಲು ನಿಲ್ದಾಣದ ಬಳಿಯ ಡಾ.ಬಿ.ಆರ್ .ಅಂಬೇಡ್ಕರ್ ಪುತ್ಥಳಿ ವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು.

***ಕೋಟ್ ...

ನಮಗೆ ಯಾರ ಅನುಕಂಪವೂ ಬೇಕಿಲ್ಲ. ನಮ್ಮ ಹಕ್ಕು ನಮಗೆ ಬೇಕು. ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆ ತಂದಿರುವ ಕಾಂಗ್ರೆಸ್ ಸರಕಾರ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ನಿಲ್ಲದು.

-ಸಂತೋಷಿರಾಣಿ ಪಾಟೀಲ ತೆಲ್ಕೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ