ದಿನಭವಿಷ್ಯ 2 ಮೇ 2026
ಶ್ರೀಪತಿ ಭಟ್ | ಬೆಂಗಳೂರು
=============
(ಮೇಷ, ಸಿಂಹ, ಕುಂಭ-ಈ ರಾಶಿಯವರಿಗೆ ಈ ದಿನ ತ್ರಿಗ್ರಹ ಯೋಗ)
ಧಿಧಿಧಿಧಿ--------------------
ಮೇಷ : ಬದುಕಿನಲ್ಲಿಹೊಸ ವ್ಯಕ್ತಿಯ ಪ್ರವೇಶವಾಗಲಿದ್ದು, ಅವರಿಂದ ದೊರೆಯುವ ಸಲಹೆ-ಸಹಕಾರ ಮರೆಯಲಾಗದಂತೆ ಇರುವುದು. ವೃತ್ತಿಪರ ಕಾರ್ಯದಲ್ಲಿನಿರ್ದಾಕ್ಷಿಣ್ಯವಾಗಿ ವ್ಯವಹರಿಸಿ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಆಕಾಶ ನೀಲಿ)
----------
ವೃಷಭ : ಕರ್ತವ್ಯದಂತಿರುವ ಧಾರ್ಮಿಕ ಕೆಲಸವನ್ನು ಮಾಡುವ ಬಗ್ಗೆ ತೀರ್ಮಾನಿಸುವುದರಿಂದ ಧರ್ಮ ಕಾರ್ಯದಲ್ಲಿಆಸಕ್ತಿ ಮೂಡುವುದು. ಮಾಧ್ಯಮಗಳಲ್ಲಿಕೆಲಸ ಮಾಡುವವರಿಗೆ ಉತ್ತಮ ದಿನ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಗುಲಾಬಿ)
-----------
ಮಿಥುನ: ಭೂ ಸಂಬಂಧದ ವ್ಯವಹಾರದಲ್ಲಿಹಣ ಹೂಡಿಕೆ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸಿ. ನಿಯಮಿತ ಕೆಲಸಕ್ಕೆ ಸೂಕ್ತ ಪ್ರಶಂಸೆ ಸಿಗಲಿದೆ. ಆರೋಗ್ಯದ ಕಡೆಗೆ ಗಮನವಿರಲಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಹಸಿರು)
--------------
ಕಟಕ : ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ಆಲೋಚನೆಗಳು ದಾರಿ ತಪ್ಪಿಸಲಿವೆ. ರಾಜಕೀಯ ವ್ಯಕ್ತಿಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವರು.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಳದಿ)
----------
ಸಿಂಹ : ನವದಂಪತಿಗೆ ಹರ್ಷದ ಸಮಾಚಾರ ಕೇಳಿ ಬರುವುದರಿಂದ ಮನಸ್ಸಿಗೆ ನೆಮ್ಮದಿ. ಸಮಸ್ಯೆಯನ್ನು ಸಾಧ್ಯವಾದಷ್ಟೂ ಮಟ್ಟಿಗೆ ಸಂಧಾನದ ಅಥವಾ ಷರತ್ತುಗಳ ಮೂಲಕ ಬಗೆಹರಿಸಿಕೊಳ್ಳಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಸುವರ್ಣ)
----------
ಕನ್ಯಾ : ವಿಶೇಷ ವ್ಯಕ್ತಿಗಳ ಭೇಟಿ ಸಂತೋಷ ತರುವುದಲ್ಲದೆ ನಿಮ್ಮ ಹೊಸ ಯೋಜನೆಗಳಿಗೆ ಚೈತನ್ಯ ತುಂಬುವುದು. ಕಾರ್ಯಸಾಧಕರ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಕಂಚು)
-------------
ತುಲಾ : ವೈಯಕ್ತಿಕ ವಿಚಾರಗಳಲ್ಲಿಸೃಷ್ಟಿಯಾದ ಸಣ್ಣಪುಟ್ಟ ಬದಲಾವಣೆಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ವಸ್ತ್ರ ವಿನ್ಯಾಸಕರಿಗೆ ವಿಶೇಷ ಪರಿಣಿತಿಯ ಅಗತ್ಯವಿದೆ. ಸಾಮಗ್ರಿಗಳ ಖರೀದಿಯಿಂದ ಖರ್ಚು ಬರಲಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಬೂದು)
----------
ವೃಶ್ಚಿಕ : ಅಹಂಕಾರ ಭಾವದ ನಡವಳಿಕೆಯಿಂದ ಸೋಲು ಸಂಭವಿಸುವುದು. ಕುಟುಂಬದ ಸದಸ್ಯರ ಆರೋಗ್ಯ ವಿಷಯದಲ್ಲಿನ ಚಿಂತೆ ತಪ್ಪಿದ್ದಲ್ಲ. ಆಡಳಿತ ವರ್ಗದವರಿಗೆ ಸಿಬ್ಬಂದಿಯವರಿಂದ ಪ್ರಶಂಸೆ ದೊರೆಯುತ್ತದೆ.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ನೇರಳೆ)
----------
ಧನು : ಇಂದಿನವರೆಗೂ ಲೌಕಿಕ ಜೀವನವನ್ನು ಯಾವುದೇ ಯೋಚನೆ ಇಲ್ಲದೇ ನಡೆಸುತ್ತಿದ್ದ ನಿಮಗೆ ಇಂದಿನಿಂದ ಮುಕ್ತಿ ಹಾಗೂ ಅದಕ್ಕೆ ಸಂಬಂಧಪಟ್ಟಂತಹ ವಿಚಾರದಲ್ಲಿಆಸಕ್ತಿ ಬರಲಿದೆ.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಕೆಂಪು)
--------------
ಮಕರ: ಗೃಹೋಪಕರಣ ಖರೀದಿ ಅಥವಾ ಹಲವಾರು ಯೋಜನೆಗಳಲ್ಲಿಎಡವಿದ ಅನುಭವ ಆಗಲಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿಉತ್ಸಾಹವಿರುತ್ತದೆ. ಇದರಿಂದ ವಿದ್ಯಾ ಪ್ರಗತಿಗೆ ತೊಂದರೆಯಾಗಬಹುದು.
(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ನೀಲಿ)
-----------
ಕುಂಭ :ವ್ಯವಹಾರದಲ್ಲಿಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತ. ಆಸೆಗಳು ಬಹುಮಟ್ಟಿಗೆ ಈಡೇರುವುದರಿಂದ ಹೊಸ ಹುರುಪು ಮೂಡಲಿದೆ. ಧರ್ಮ ಕಾರ್ಯಗಳಲ್ಲಿಆಸಕ್ತಿ ಹೆಚ್ಚುವುದು.
(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಕೇಸರಿ)
-------------
ಮೀನ : ಹಣಕಾಸಿನ ವ್ಯವಹಾರಗಳೆಲ್ಲಸುಗಮವಾಗಿ ಸಾಗುತ್ತಿರುವುದರಿಂದ ಮನಸ್ಸು ನಿರಾಳವಾಗಿರುವುದು. ಹೂಗಳ ರಫ್ತು ವ್ಯಾಪಾರದಲ್ಲಿನಿರೀಕ್ಷೆಗೂ ಮೀರಿದ ಲಾಭ ಪಡೆಯಬಹುದು. ಕೃಷಿಕರಿಗೆ ಕೆಲಸಗಳು ಪ್ರಾರಂಭವಾಗಲಿವೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕಪ್ಪು)

