ನಾನಾ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

Contributed byprakashvkhsn@gmail.com|Vijaya Karnataka

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 70 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಶಾಸಕ ಸಿಮೆಂಟ್‌ ಮಂಜು ಅವರು ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಕಾರ್ಯಾಲಯದ ಬಳಿಯಿಂದ ಪ್ರಕೃತಿ ನಗರ ರಸ್ತೆ ಅಭಿವೃದ್ಧಿ, ಸುಣ್ಣದಬೀದಿ ರಸ್ತೆ, ಕಾಂಕ್ರಿಟ್‌ ರಸ್ತೆ, ಡಾಂಬರೀಕರಣ, ಸಿಸಿ ರಸ್ತೆ, ಹಳೆ ಸಂತೆ ಬೀದಿ ರಸ್ತೆ ಕಾಮಗಾರಿಗಳು ನಡೆಯಲಿವೆ. ಸರಕಾರಿ ಆಸ್ಪತ್ರೆ ಬಳಿ ಚರಂಡಿಗಳಿಗೆ ಕವರಿಂಗ್‌ ಸ್ಲಾಬ್‌ ನಿರ್ಮಾಣ ಹಾಗೂ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುವುದು.

groundbreaking ceremony for new development projects worth 70 lakhs in hassan alur town

ವಿಕ ಸುದ್ದಿಲೋಕ ಹಾಸನ

ಆಲೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ವಾರ್ಡ್ ಗಳಲ್ಲಿಸುಮಾರು 70 ಲಕ್ಷ ರೂ. ವೆಚ್ಚದಲ್ಲಿರಸ್ತೆ, ಚರಂಡಿ ಕಾಮಗಾರಿ ಮಾಡಲಾಗುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಪಟ್ಟಣದ 4ನೇ ವಾರ್ಡ್ ನಲ್ಲಿಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘‘ಪುರಸಭೆ ಕಾರ್ಯಾಲಯದ ಪಕ್ಕದಿಂದ ದೊಡ್ಡಿಬೀದಿ ಮುಖಾಂತರ ಪ್ರಕೃತಿ ನಗರ ರಸ್ತೆ ಅಭಿವೃದ್ಧಿ, 4ನೇ ವಾರ್ಡ್ ನ ಸುಣ್ಣದಬೀದಿ ರಸ್ತೆ, ವಾರ್ಡ್ 1ಮತ್ತು 2ರಲ್ಲಿಕಾಂಕ್ರಿಟ್ ರಸ್ತೆ ಕಾಮಗಾರಿ, ವಾಡ್ ನಂ.3ರಲ್ಲಿಡಾಂಬರೀಕರಣ ರಸ್ತೆ ಅಭಿವೃದ್ಧಿ ಕಾಮಗಾರಿ, 11ರಲ್ಲಿಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ, 9ರಲ್ಲಿಹಳೆ ಸಂತೆ ಬೀದಿ ರಸ್ತೆ ಕಾಮಗಾರಿ, ಬಿ.ಎಂ. ರಸ್ತೆ ಸರಕಾರಿ ಆಸ್ಪತ್ರೆ ಹತ್ತಿರ ಚರಂಡಿಗಳಿಗೆ ಕವರಿಂಗ್ ಸ್ಲಾತ್ರ್ಯಬ್ ನಿರ್ಮಾಣ ಮತ್ತು ವಾರ್ಡ್ ನಂ.10ರಲ್ಲಿರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ಮಾಡಲಾಗುವುದು,’’ ಎಂದು ಹೇಳಿದರು.

ಕಾರ ್ಯಕ್ರಮದಲ್ಲಿಪಪಂ ಮುಖ್ಯಾಧಿಕಾರಿ ಮಂಜುನಾಥ್ , ಸ್ಥಳೀಯ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

ಫೋಟೊ

ಆಲೂರು ಪಪಂ ವಾರ್ಡ್ ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿಪೂಜೆ ನೆರವೇರಿಸಿದರು.