ಕುಂಡಂಗುಳಿ: ಮಂಞಂಪೊದಿ ಶ್ರೀ ವೀರಮಾರುತಿ ದೇವಸ್ಥಾನದಲ್ಲಿಹನುಮ ಜಯಂತಿಯನ್ನು ಭಕ್ತಿ ಮತ್ತು ಗೌರವದಿಂದ ಆಚರಿಸಲಾಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸ್ವಾಮಿ ಗುರುದೇವಾನಂದ ಅವರಿಂದ ಆಶೀರ್ವಚನ, ಸನಾತನ ಧರ್ಮಶಾಲೆ ಸಂಯೋಜಕ ರಾಜೇಶ್ ನಾದಾಪುರಂ ಅವರ ಆಧ್ಯಾತ್ಮಿಕ ಪ್ರವಚನ, ತುಳಸಿಕಾತಿರ್ ಜಯಕೃಷ್ಣನ್ ಪತ್ತನಂತಿಟ್ಟ ಅವರಿಂದ ಸಂಗೀತ ಸಂಜೆ ಭಕ್ತರಿಗೆ ಹೊಸ ಅನುಭವ ನೀಡಿತು.
ದೇವಸ್ಥಾನದ ಬ್ರಹ್ಮಶ್ರೀ ಎಡಮನ ಈಶ್ವರನ್ ತಂತ್ರಿ ಹಾಗೂ ಎಡಮನ ಶ್ರೀಧರನ್ ನಂಬೂದಿರಿ ಪೂಜೆ ಹಾಗೂ ಕರ್ಮಕ್ಕೆ ಚಾಲನೆ ನೀಡಿದರು. ಪರಿಕ್ರಮಣ ಮೆರವಣಿಗೆ ದೇವಾಲಯದಿಂದ ಪ್ರಾರಂಭವಾಗಿ ಮುತ್ತಪ್ಪಂತರ, ಕಲ್ಯಾಣ್ ರಸ್ತೆ ಮಾವುಂಗಲ್ ಶ್ರೀರಾಮ ದೇವಸ್ಥಾನದ ಮೂಲಕ ವೀರಮಾರುತಿ ದೇವಸ್ಥಾನದಲ್ಲಿಮುಕ್ತಾಯಗೊಂಡಿತು. ಅಧ್ಯಕ್ಷ ಕೆ.ಪ್ರದೀಪ್ ಕುಮಾರ್ , ಕಾರ ್ಯದರ್ಶಿ ರವೀಂದ್ರನ್ ಮಾವುಂಗಾಲ್ , ಮಣಿಕಂಠನ್ ,ಟಿ.ವಿ. ಚಂದನ್ , ಸಾಜಿ ಕುನ್ನುಮ್ಮಲ್ , ನೀಲಕಂಠನ್ , ಕೆ.ವಿ. ಬಾಬು, ಬಾಲಕೃಷ್ಣನ್ ಸೂರ್ಯೋದಯಂ, ದಿವಾಕರನ್ ನೆಲ್ಲಿತ್ತರ, ಮತ್ತು ಪಿ.ಕೆ.ಹರೀಂದ್ರನ್ ಮೆರವಣಿಗೆಗೆ ಚಾಲನೆ ನೀಡಿದರು.
ಏ.11ರಂದು ವೀರಮಾರುತಿ ದೇವಸ್ಥಾನದ ಪ್ರತಿಷ್ಠಾ ದಿನ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪ್ರಕಟಿಸಿದರು.
ಚಿತ್ರ..6ಎಂಯುಹನುಮ

