ಆಟೋ ರಿಕ್ಷಾಗಳಿಗೆ ಗುರುತಿನ ಚೀಟಿ

Contributed bymallugoudra461987@gmali.com|Vijaya Karnataka

ಬೆಳಗಾವಿ ನಗರದ ಆಟೋಗಳಿಗೆ ಗುರುತಿನ ಚೀಟಿ ನೀಡುವ ಬಗ್ಗೆ ಪೊಲೀಸ್ ಆಯುಕ್ತರು ಆಟೋ ಚಾಲಕರೊಂದಿಗೆ ಸಭೆ ನಡೆಸಿದರು. ಈ ಬಗ್ಗೆ ಇತರ ಜಿಲ್ಲೆಗಳ ಮಾದರಿಯಲ್ಲಿ ಅನುಷ್ಠಾನಕ್ಕೆ ಚಿಂತನೆ ನಡೆದಿದೆ. ಸಿಎನ್‌ಜಿ ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಖಾಸಗಿ ಪಂಪ್‌ಗಳ ದರ ಏರಿಕೆ ಬಗ್ಗೆಯೂ ಚರ್ಚಿಸಲಾಯಿತು. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಅಂತಿಮ ನಿರ್ಧಾರವನ್ನು ಆಯುಕ್ತರಿಗೆ ತಿಳಿಸಲಾಗುವುದು.

identity card for auto rickshaws in the state

ಆಟೋ ಚಾಲಕರೊಂದಿಗೆ ಪೊಲೀಸ್ ಕಮಿಷನರ್ ಸಭೆ

ವಿಕ ಸುದ್ದಿಲೋಕ ಬೆಳಗಾವಿ

ಬೆಳಗಾವಿ ನಗರದಲ್ಲಿಸಂಚರಿಸುವ ಅಧಿಕೃತ ಆಟೋಗಳಿಗೆ ಗುರುತಿನ ಚೀಟಿ ಅಳವಡಿಸುವ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಮಂಗಳವಾರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು ಆಟೋ ಚಾಲಕರೊಂದಿಗೆ ಸಭೆ ನಡೆಸಿದರು.

ಈ ವೇಳೆ ನಗರದಲ್ಲಿಪ್ರತಿದಿನ ಓಡಾಡುವ ಆಟೋಗಳಿಗೆ ಪೊಲೀಸ್ ಇಲಾಖೆಯಿಂದ ಅಧಿಕೃತ ಐಡಿ ಕಾರ್ಡ್ ವಿತರಣೆ ಮಾಡುವ ಚಿಂತನೆಯನ್ನು ಆಯುಕ್ತರು ಪ್ರಸ್ತಾಪ ಮಾಡಿದರು. ಇದರಿಂದ ಆಟೋ ಚಾಲಕರಿಗೆ ಆಗುವ ಅನುಕೂಲಗಳ ಕುರಿತು ಸಭೆಯಲ್ಲಿಚರ್ಚಿಸಲಾಯಿತು. ಈ ವೇಳೆ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣ ಭರಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಟೋ ಚಾಲಕ ವಾಸು, ‘‘ನಗರದ ಆಟೋಗಳಿಗೆ ಗುರುತಿನ ಚೀಟಿ ವಿತರಣೆ ಮಾಡುವ ಬಗ್ಗೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ದಾವಣಗೆರೆ, ಚಿತ್ರದುರ್ಗ ಸೇರಿ ಇತರ ಜಿಲ್ಲೆಗಳಲ್ಲಿಜಾರಿಗೆ ತಂದಂತೆ ಇಲ್ಲಿಯೂ ಅನುಷ್ಠಾನ ಮಾಡಲಾಗುತ್ತಿದೆ. ಈ ಕುರಿತು ಎಲ್ಲಆಟೋ ಚಾಲಕರು ಸಭೆ ನಡೆಸಿ, ಅಂತಿಮ ನಿರ್ಧಾರವನ್ನು ಆಯುಕ್ತರಿಗೆ ತಿಳಿಸಲಾಗುವುದು. ಅಲ್ಲದೇ ಇತ್ತೀಚಿನ ದಿನಗಳಲ್ಲಿಆಟೋಗಳಿಗೆ ಸಿಎನ್ ಜಿ ಪೂರೈಕೆಯಲ್ಲಿವ್ಯತ್ಯಯ ಆಗುತ್ತಿರುವ ಬಗ್ಗೆ ಆಯುಕ್ತರ ಗಮನಕ್ಕೆ ತರಲಾಯಿತು. ನಗರದಲ್ಲಿಎರಡು ಸರಕಾರಿ ಸಿಎನ್ ಜಿ ಬಂಕ್ ಗಳು ಇದ್ದು, ಖಾಸಗಿ ಪಂಪ್ ಗಳಲ್ಲಿಹೆಚ್ಚಿನ ದರಕ್ಕೆ ಸಿಎನ್ ಜಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದೇವೆ,’’ಎಂದರು.