ಬಕ್ಕಳದ ವಿವಿಧೋದ್ದೇಶ ಸಹಕಾರ ಸಂಘದ ಅಮೃತ ಮಹೋತ್ಸವ
ವ್ಯವಹಾರದಲ್ಲಿಅರ್ಥ ಶುಚಿಯಿರಬೇಕು: ಸ್ವರ್ಣವಲ್ಲೀ ಶ್ರೀ
ವಿಕ ಸುದ್ದಿಲೋಕ ಶಿರಸಿ
ಆದಾಯ ಖರ್ಚಿನ ನಡುವೆ ಲೆಕ್ಕಾಚಾರ, ಹೊಂದಿಕೆ ಇರಬೇಕು. ವ್ಯವಹಾರದಲ್ಲಿ, ಹಣದ ವಿಷಯದಲ್ಲಿಯಾರು ಚೊಕ್ಕತನ, ಅಚ್ಚುಕಟ್ಟುತನ ಇಟ್ಟುಕೊಂಡಿರುತ್ತಾರೋ ಅವರು ನಿಜವಾದ ಶುಚಿ. ಅದೇ ಅರ್ಥಶೌಚ. ಸಹಕಾರ ಸಂಘಸಂಸ್ಥೆಗಳವರು, ರೈತ ಸದಸ್ಯರು ಇದನ್ನು ನೆನೆಪಿಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಮಂಗಳವಾರ ತಾಲೂಕಿನ ಬಕ್ಕಳದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸಂಘಗಳು, ಸದಸ್ಯರು ಅರ್ಥಶೌಚ, ಹಣದ ಶುದ್ಧಿ ಕಾಪಾಡಿಕೊಳ್ಳಬೇಕು. ಆದಾಯ ಮತ್ತು ವೆಚ್ಚಗಳ ನಡುವೆ ಲೆಕ್ಕಾಚಾರ ತರ್ಕ ಇರಬೇಕು. ಆದಾಯಕ್ಕಿಂತ ಖರ್ಚು ಜಾಸ್ತಿಯಾದರೆ ಸಾಲ ಆಗುತ್ತದೆ. ಯಾರಿಗೆ ಈ ರೀತಿ ಹಣದ ವಿಷಯದಲ್ಲಿಶುದ್ಧಿ ಇದೆಯೋ ಆತ ನಿಜವಾದ ಶುದ್ಧ ವ್ಯಕ್ತಿ. ಒಳ್ಳೆ ಬಟ್ಟೆ ಹಾಕಿಕೊಂಡರೆ ಶುದ್ಧ ಹೇಳಲಾಗದು. ಅದನ್ನು ಜನ ನಂಬುವುದಿಲ್ಲ. ಯಾರೇ ಹೇಗೆ ಎಂಬುದನ್ನು ಸೂಕ್ಷತ್ರ್ಮವಾಗಿ ನೋಡುತ್ತಾರೆ. ಹೊರಗಿನ ವೇಷ ಚೆಂದ ಇದ್ದು ವ್ಯವಹಾರ ಸರಿಯಿಲ್ಲದಿದ್ದರೆ ಪ್ರಯೋಜನವಿಲ್ಲ. ಹೊರಗಿನ ವೇಷ ಬಡಕಲು ಆಗಿದ್ದರೂ ವ್ಯವಹಾರ ಚೆನ್ನಾಗಿದ್ದರೆ ಶಿಸ್ತಿನ ಮನುಷ್ಯ ಎನ್ನುತ್ತಾರೆ ಎಂದು ಶ್ರೀಗಳು ನುಡಿದರು.
ಹಳ್ಳಿಯಲ್ಲಿಜನಸಂಖ್ಯೆ ಹೆಚ್ಚಬೇಕು: ಸಂಸ್ಥೆ ಉಳಿಸಿಕೊಂಡು ಹೋಗಲು ಸದಸ್ಯರ ಸಂಖ್ಯೆ ಇರಬೇಕು. ತುಂಬಾ ಕಡಿಮೆ ಇದ್ದರೆ, ಹೊಸ ಸದಸ್ಯತ್ವ ಆಗದೇ ಇದ್ದರೆ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅದಕ್ಕೆ ಹಳ್ಳಿಗಳಲ್ಲಿಕೃಷಿ ಮಾಡುವ, ಸಹಕಾರ ಕ್ಷೇತ್ರಗಳ ಬಗ್ಗೆ ಆಸಕ್ತಿ ಇರುವ ಜನ ಇರಬೇಕು. ಜನವೇ ಇಲ್ಲದಿದ್ದರೆ ಸಂಸ್ಥೆ ಉಳಿಯುವುದಿಲ್ಲಎಂದರು.
ದೇಶದ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಉತ್ತರಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿಜನಸಂಖ್ಯೆ ಕಡಿಮೆಯಾಗುತ್ತಿದೆ. ದಂಪತಿಗೆ ಒಂದೇ ಸಂತತಿ ಆದರೆ ಅರ್ಧಕ್ಕರ್ಧ ಜನಸಂಖ್ಯೆ ಇಳಿಯುತ್ತದೆ. ಜನಸಂಖ್ಯೆ ವಿಷಯದಲ್ಲಿಅರ್ಥ ಮಾಡಿಕೊಳ್ಳಬೇಕು. ದೇಶ, ವಿಶ್ವದ ವಿಷಯ ಬೇರೆ ಸ್ಥಳೀಯ ವಿಷಯವೇ ಬೇರೆಯಾಗಿರುತ್ತದೆ. ದೇಶಮಟ್ಟದ ಆಲೋಚನೆ ಇರಬೇಕು. ಸ್ಥಳೀಯ ವಿಷಯ ಅನುಸಾರ ನಿರ್ಣಯ ತೆಗೆದುಕೊಳ್ಳಬೇಕು. ಹಳ್ಳಿಯ ಜನಸಂಖ್ಯೆ ಉಳಿಸಿಕೊಂಡರೆ ಸಂಸ್ಥೆಗಳು ಉಳಿಯುತ್ತವೆ ಎಂದು ಶ್ರೀಗಳು ನುಡಿದರು.
ಸಂಘದ ಅಧ್ಯಕ್ಷ ಜಿ.ಎನ್ .ಹೆಗಡೆ ನಕ್ಷೆ ಪ್ರಾಸ್ತಾವಿಕ ಮಾತನಾಡಿದರು. ಸ್ಥಳೀಯ ಪಿಪಿಎಸ್ ಸೊಸೈಟಿ ಅಧ್ಯಕ್ಷ ಎನ್ .ವಿ.ಹೆಗಡೆ ಬಕ್ಕಳ ಇದ್ದರು. ಕೆ.ಕೆ.ಸೊಸೈಟಿ ಅಧ್ಯಕ್ಷ ಜಿ.ಎನ್ .ಭಟ್ ಬೆಣ್ಣೆಗದ್ದೆ ಸ್ವಾಗತಿಸಿದರು. ಸಂಜಯ ಭಟ್ ಬೆಣ್ಣೆ ನಿರೂಪಿಸಿದರು. ಇದಕ್ಕೂ ಮೊದಲು ಶ್ರೀಗಳ ಪಾದಪೂಜೆ ನಡೆಯಿತು.
ಬಾಕ್ಸ್
ಮಿಶ್ರ ಬೆಳೆಯತ್ತ ಲಕ್ಷತ್ರ್ಯ ಹಾಕಿ....
ಎಲೆಚುಕ್ಕೆಯಿಂದ ಅಡಕೆ ಬೆಳೆಗಾರರಿಗೆ ಹಿಂದೆಂದೂ ಕಾಣದ ಸಂಕಷ್ಟ ಕಾಲ ಬಂದಿದೆ. ಅಡಕೆ ಬೆಳೆ ವೇಗವಾಗಿ ಕಡಿಮೆಯಾಗಿದೆ. ಅನೇಕ ಕಡೆ ಇಡೀ ತೋಟವೇ ನಾಶವಾಗುತ್ತಿದೆ. ಬದುಕಲು ಏನು ಮಾಡಬೇಕು ಎಂದು ಕಂಗಾಲಾಗಿದ್ದಾರೆ. ಅಡಕೆ ಬೆಳೆಯೊಂದನ್ನೇ ನಂಬಿಕೊಂಡ ಕೃಷಿ ಬದಲಾಯಿಸಿಕೊಳ್ಳಬೇಕು. ಉಪಬೆಳೆ, ಮಿಶ್ರ ಬೆಳೆ ಕೃಷಿ ಅನುಸರಿಸಬೇಕು. ಎಲೆಚುಕ್ಕೆ ರೋಗದ ಹತೋಟಿಗೆ ಮಣ್ಣಿನ ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಲಹೆ ನೀಡಿದರು.
ಕೋಟ್
ಸಹಕಾರ ಸೇರಿದಂತೆ ಯಾವುದೇ ಸಂಸ್ಥೆ ತನ್ನ ಸಾಮರ್ಥ್ಯಕ್ಕಿಂತ ಅತಿಯಾಗಿ ಹೊರಗೆ ಕಾಲಿಟ್ಟರೆ ಸಂಸ್ಥೆಗೆ ಸಾಲ ಆಗುತ್ತದೆ. ಸಂಸ್ಥೆ ಮುಚ್ಚಿ ಹೋಗುವ ಹಂತಕ್ಕೆ ತಲುಪುತ್ತದೆ. ಆ ಎಚ್ಚರಿಕೆ ಇರಬೇಕು.
-ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
7ಎಸ್ಸಾರೆಸ್ 2
=ಶಿರಸಿ ತಾಲೂಕು ಬಕ್ಕಳದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು.

