ಲೀಡ್ -3

Contributed byvinayakbhavimani11@gmail.com|Vijaya Karnataka

ತೋಂಟದಾರ್ಯ ಮಠದ ಜಾತ್ರೆಯ ಅಂಗವಾಗಿ ಸಾಧಕರ ಸನ್ಮಾನ ನಡೆಯಿತು. ಸಿದ್ಧರಾಮ ಶ್ರೀಗಳು ಪಾಶ್ಚಾತ್ಯ ದೇಶಗಳಿಗೆ ಶರಣ ತತ್ವಗಳು ಪಸರಿಸುವಂತೆ ಕರೆ ನೀಡಿದರು. ಅಮೆರಿಕಾ, ಇಸ್ರೇಲ್, ಇರಾನ್ ದೇಶಗಳಲ್ಲಿ ಶರಣ ತತ್ವಗಳು ಪಸರಿಸಿದರೆ ಯುದ್ಧಗಳು ನಡೆಯುತ್ತಿರಲಿಲ್ಲ ಎಂದರು. ಸಕಲ ಜೀವಿಗಳ ಕ್ಷೇಮ ಬಯಸುವ ಶರಣರ ತತ್ವಗಳು ಎಲ್ಲೆಡೆ ಪಸರಿಸಲಿ ಎಂದು ಆಶಿಸಿದರು. ಶಿವಾನುಭವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ. ನೂತನ ಪದಾಧಿಕಾರಿಗಳಿಗೆ ಸೇವಾ ಹಸ್ತಾಂತರ ನಡೆಯಿತು.

spread of sharan principles peace is better than war

ಶರಣರ ತತ್ವ ಎಲ್ಲೆಡೆ ಪಸರಿಸಲಿ(ಹೆ)

ತೊಂಟದಾರ್ಯ ಮಠದ ಜಾತ್ರೆ ಅಂಗವಾಗಿ ಸಾಧಕರ ಸನ್ಮಾನ

-ಯುದ್ಧದಿಂದ ಯಾವುದಕ್ಕೂ ಪರಿಹಾರವಿಲ್ಲ

ವಿಕ ಸುದ್ದಿಲೋಕ ಗದಗ

ಪಾಶ್ಚಾತ್ಯ ದೇಶಗಳಿಗೆ ಶರಣ ತತ್ವಗಳು ಪಸರಿಸಬೇಕು. ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ದೇಶಗಳಲ್ಲಿಶರಣ ತತ್ವಗಳು ಪಸರಿಸಿದರೆ ಯುದ್ಧಗಳು ನಡೆಯುತ್ತಿರಲಿಲ್ಲಎಂದು ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು ಹೇಳಿದರು.

ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಸಂದರ್ಭದಲ್ಲಿಸೋಮವಾರ ಏರ್ಪಡಿಸಿದ್ದ ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಪದಾಧಿಕಾರಿಗಳಿಗೆ ಸೇವಾ ಹಸ್ತಾಂತರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಕಲ ಜೀವಿಗಳ ಕ್ಷೇಮ

ಬಸವಾದಿ ಶರಣರು ಮತ್ತು ಅವರ ವಚನಗಳಲ್ಲಿಶಾಂತಿ, ಬದುಕು, ಪರಸ್ಪರ ಗೌರವ, ಮಾನವೀಯ ಮೌಲ್ಯಗಳನ್ನು ತಿಳಿಸಿದ್ದಾರೆ. ನಾನು ಎನ್ನುವ ಬದಲಾಗಿ ನಾವು ಎನ್ನುವುದನ್ನು ಕಲಿಸಿದ್ದಾರೆ. ಸಕಲ ಜೀವಿಗಳ ಕ್ಷೇಮ ಬಯಸಿದ್ದಾರೆ. ಇಂತಹ ಶರಣ ತತ್ವಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿಪಸರಿಸಿದ್ದರೆ ಇಂದು ಯುದ್ಧಗಳು ನಡೆಯುತ್ತಿರಲಿಲ್ಲ. ಯುದ್ಧವನ್ನು ಕೈಬಿಟ್ಟು ಮಾನವೀಯವ ಮೌಲ್ಯಗಳಿಗೆ ಬೆಲೆ ಕೊಡಬೇಕು ಎಂದು ನಾನು ಯದ್ದೋನ್ಮಾದ ದೇಶಗಳಿಗೆ ಮನವಿ ಮಾಡುತ್ತೇನೆ ಎಂದರು.

ನಿರಂತರ ಕಾರ್ಯಕ್ರಮ ಶ್ಲಾಘನೀಯ

ಮಠದಲ್ಲಿಪ್ರತಿ ಸೋಮವಾರ ಮಠದಲ್ಲಿಜರಗುವ ಶಿವಾನುಭವ ಕಾರ್ಯಕ್ರಮ ಗಿನ್ನಿಸ್ ದಾಖಲೆ ಪುಸ್ತಕ ಸೇರ್ಪಡೆಗೆ ಅರ್ಹತೆ ಹೊಂದಿದೆ. ರಾಜ್ಯದ ಅನೇಕ ಮಠಗಳು ಶಿವಾನುಭ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸದೇ ಅರ್ಧಕ್ಕೆ ಕೈಬಿಟ್ಟ ಉದಾಹರಣೆಗಳು ಇವೆ. ಆದರೆ ಕಳೆದ 54 ವರ್ಷಗಳಿಂದ ತೋಂಟದಾರ್ಯ ಮಠದಲ್ಲಿನಿರಂತರ ಶಿವಾನುಭ ಕಾರ್ಯಕ್ರಮ ನಡೆದು ಕೊಂಡು ಬಂದಿದೆ. ಇಲ್ಲಿವೇದಿಕೆ ಮೇಲೆ ಸನ್ಮಾನಿತರು, ಉಪನ್ಯಾಸ ನೀಡಿದವರು ಭವಿಷ್ಯದಲ್ಲಿಉಜ್ವಲ ಭವಿಷ್ಯ ಕಂಡಿದ್ದಾರೆ. ಶಿವಾನುಭ ಕಾರ್ಯಕ್ರಮವನ್ನು ಒಂದು ವರ್ಷ ನಡೆಸಿಕೊಂಡು ಬಂದ ಸಮಿತಿ ಅಧ್ಯಕ್ಷ ಬಾಲಚಂದದ್ರ ಬರಮಗೌಡರ ಮತ್ತು ಸಮಿತಿ ಸದಸ್ಯರಿಗೆ ಅಭಿನಂದನೆಗಳು. ಜತೆಗೆ 2026 27 ನೇ ಸಾಲಿನಲ್ಲಿಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ಉಮೇಶ ಪುರದ ಅವರ ಸೇವೆಯೂ ನಿರಾತಂಕವಾಗಿ ನಡೆಯುತ್ತದೆ ಎಂಬ ಭರವಸೆ ಇದೆ ಎಂದು ಸಿದ್ಧರಾಮ ಶ್ರೀಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ. ಉಮೇಶ ಪುರದ ಮಾತನಾಡಿ, ಮಠದ ಹಲವಾರು ಕಾರ್ಯಕಮಗಳಲ್ಲಿಸೇವೆ ಸಲ್ಲಿಸಿದ್ದೇನೆ. ನನಗೆ ಈ ವರ್ಷ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಹೆಮ್ಮೆ ಅನಿಸುತ್ತದೆ. ಲಿಂಗಾಯತ ಪ್ರಗತಿಶೀಲ ಸಂಘವು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಘವಾಗಿದೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಪೀಠಾಧಿಪತಿ ಆಗಲು ಸಹ ಲಿಂಗಾಯತ ಪ್ರಗತಿಶೀಲ ಸಂಘವೇ ಮುಖ್ಯ ಕಾರಣವಾಗಿತ್ತು ಎಂದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಬಾಲಚಂದ್ರ ಬರಮಗೌಡರ ಮಾತನಾಡಿ, ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಹಲವು ಜವಾಬ್ದಾರಿಗಳು ಇದ್ದವು. ಶ್ರೀಗಳ ಆಶಿರ್ವಾದದಿಂದ ಎಲ್ಲವನ್ನು ನಿಭಾಯಿಸಲಾಯಿತು. ಮುಂದೆಯೂ ಸಹಕಾರ ನೀಡಲಾಗುವುದು ಎಂದರು.

ಸಂಘದ ನೂತನ ಸದಸ್ಯರನ್ನು, ಪತ್ರಕರ್ತ ಶಿವಾನಂದ ಹಿರೇಮಠ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಎಸ್ . ಎಸ್ . ಪಾಟೀಲ, ಐ.ಬಿ.ಬೆನಕೊಪ್ಪ, ವಿನಾಯಕ ಮಾನ್ವಿ, ಎಸ್ .ಎಸ್ . ಪಟ್ಟಣಶೆಟ್ಟರ, ಕೊಟ್ರೇಶ ಮೆಣಸಿನಕಾಯಿ ಸೇರಿದಂತೆ ಇತರರು ಇದ್ದರು.

7ಜಿಡಿಜಿ9-

ಗದಗಿನ ತೋಂಟದಾರ್ಯ ಮಠದಲ್ಲಿಜರುಗಿದ ಕಾರ್ಯಕ್ರಮದಲ್ಲಿಸಾಧಕ ಶಿವಾನಂದ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಸಿದ್ದರಾಮ ಶ್ರೀಗಳು, ಎಸ್ . ಎಸ್ . ಪಾಟೀಲ, ವಿನಾಯಕ ಮಾನ್ವಿ, ಐ.ಬಿ.ಬೆನಕೊಪ್ಪ, ಬಾಲಚಂದ್ರ ಬರಮಗೌಡರ, ಡಾ. ಉಮೇಶ ಪುರದ ಇತರರು ಇದ್ದರು.