ಬೋವಿಕ್ಕಾನದಲ್ಲಿಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಪ್ರಚಾರ

Contributed byprakashamailankote@gmail.com|Vijaya Karnataka

ಬೋವಿಕ್ಕಾನದಲ್ಲಿ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಅವರು ಉದುಮ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕೆ.ನೀಲಕಂಠನ್ ಅವರ ಪರವಾಗಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಕೇರಳದಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಮುಖಾಮುಖಿ ಚರ್ಚೆಗೆ ಬರಬೇಕು ಎಂದು ಅವರು ಒತ್ತಾಯಿಸಿದರು. ಮುಖ್ಯಮಂತ್ರಿಗಳು ಸ್ಥಳ ಮತ್ತು ಸಮಯವನ್ನು ನಿರ್ಧರಿಸಬಹುದು ಎಂದರು.

vd satishans campaign in bovikkan a political debate attracting global attention

ಬೋವಿಕ್ಕಾನ: ಉದುಮ ವಿಧಾನಸಭೆ ಕ್ಷೇತ್ರದಿಂದ ಯುಡಿಎಫ್ ಅಭ್ಯರ್ಥಿ ಕೆ.ನೀಲಕಂಠನ್ ಪರ ಪ್ರಚಾರ ಮಾಡಲು ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಇಲ್ಲಿಗೆ ಆಗಮಿಸಿ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿದರು.

ಕೇರಳದಲ್ಲಿವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳು ಮುಖಾಮುಖಿ ಚರ್ಚೆಗೆ ಸಿದ್ಧರಾಗಿರಬೇಕು ಎಂದು ಅವರು ಸಮಾವೇಶದಲ್ಲಿಒತ್ತಾಯಿಸಿದರು. ಮುಖ್ಯಮಂತ್ರಿಗಳು ಸ್ಥಳ ಮತ್ತು ಸಮಯವನ್ನು ನಿರ್ಧರಿಸಬಹುದು.ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು. ಮುಖವಿಲ್ಲದ ಫೇಸ್ ಬುಕ್ ಚರ್ಚೆಯ ಹಿಂದೆ ಮುಖ್ಯಮಂತ್ರಿಗಳು ಅಡಗಿಕೊಂಡಿದ್ದಾರೆ ಎಂದು ಸತೀಶನ್ ದೂರಿದರು. ಬಿ.ಎಂ.ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ಕೆ.ನೀಲಕಂಠನ್ , ಮುಸ್ಲಿಂ ಲೀಗ್ ರಾಜ್ಯ ಅಧ್ಯಕ್ಷ ಸಾದಿಖಲಿ ಶಿಹಾಬ್ ತಂಙಳ್ , ಪಿ.ಸಿ.ಸಿ. ಪ್ರಧಾನ ಕಾರ ್ಯದರ್ಶಿ ಹಕೀಂ ಕುನ್ನಿಲ್ , ಡಿ.ಸಿ.ಸಿ. ಅಧ್ಯಕ್ಷ ಪಿ.ಕೆ. ಫೈಸಲ್ , ಎ. ಗೋವಿಂದನ್ ನಾಯರ್ , ಕಲ್ಲಟ್ರ ಅಬ್ದುಲ್ ಖಾದರ್ , ವಿ.ಆರ್ . ವಿದ್ಯಾಸಾಗರ್ , ಕೆ.ಇ.ಎ. ಬಕ್ಕರ್ , ಎ.ಬಿ. ಶಾಫಿ, ಕೂಕ್ಕಲ್ ಬಾಲಕೃಷ್ಣನ್ , ಕೆ.ಪಿ.ಸಿ.ಸಿ. ಪ್ರಧಾನ ಕಾರ ್ಯದರ್ಶಿ ಹಕೀಂ ಕುನ್ನಿಲ್ ಮತ್ತಿತರರು ಮಾತನಾಡಿದರು.

ಚಿತ್ರ..6ಎಂಯುಸತೀಶ