ಬೆಡ್ ಶೀಟ್ ನೆರಳಲ್ಲೇ ಅರಳಿದ ಪ್ರತಿಭೆ (ಶಿವಮೊಗ್ಗದಿಂದ ಪಿಯುಸಿ ಫಲಿತಾಂಶ)

Contributed byaatish.kannale@timesgroup.com|Vijaya Karnataka

ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಬೃಂದಾ 600ಕ್ಕೆ 590 ಅಂಕ ಪಡೆದಿದ್ದಾರೆ. ಬಡತನದಲ್ಲೂ ಸಾಧನೆಗೈದ ಬೃಂದಾ ಶೇ.98.33 ಅಂಕ ಗಳಿಸಿದ್ದಾರೆ. ಬೆಡ್‌ಶೀಟ್ ವ್ಯಾಪಾರಿ ಪರಶುರಾಮ್ ಅವರ ಪುತ್ರಿ ಬೃಂದಾ ಉತ್ತಮ ಅಂಕಗಳಿಸಿ ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ.

breaking the cycle of poverty brinda scores 9833

ಬೆಡ್ ಶೀಟ್ ನೆರಳಲ್ಲೇ ಅರಳಿದ ಪ್ರತಿಭೆ

ಸಾಧನೆ: 600/ 590 (ಕಲಾ)

* ಬೃಂದಾ

* ಸಕ್ಸಸ್ ಸೂತ್ರ: ಉಪನ್ಯಾಸಕರು ಮಾಡುವ ಪಾಠವನ್ನು ಸರಿಯಾಗಿ ಆಲಿಸುತ್ತಿದ್ದೆ, ಅಂದಿನ ಪಾಠ ಅಂದೇ ಅಭ್ಯಾಸ, ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ಪೋಷಕರ ಕಾಳಜಿ.

ಇವರ ತಂದೆ ಪರಶುರಾಮ್ ಅವರು ಪದವಿ ಮತ್ತು ಬಿಎಡ್ ಪೂರ್ಣಗೊಳಿಸಿದ್ದು, ಎಲ್ಲಿಯೂ ಉದ್ಯೋಗ ಸಿಗದಿದ್ದಾಗ ಅನಿವಾರ್ಯವಾಗಿ ಬದುಕು ದೂಡಲು ಕುಟುಂಬಕ್ಕಾಗಿ ಮನೆ ಮನೆಗೆ ತೆರಳಿ ಬೆಡ್ ಶೀಟ್ ವ್ಯಾಪಾರ ಮಾಡಲಾರಂಭಿಸಿದರು. ಇವರಿಗೆ ವಾಸಕ್ಕೆ ಬಾಡಿಗೆ ಮನೆಯೇ ಗತಿ. ಬಡತನದ ನಡುವೆಯೇ ಶಿವಮೊಗ್ಗದ ಡಿವಿಎಸ್ ಸ್ವತಂತ್ರ ಪಿಯು ಕಾಲೇಜು ವಿದ್ಯಾರ್ಥಿನಿ ಬೃಂದಾ ಶೇ.98.33 ಅಂಕ ಗಳಿಸಿದ್ದಾರೆ. ಉತ್ತಮ ಅಂಕ ಗಳಿಸುವ ಮೂಲಕ ತಂದೆ ತಾಯಿಗೆ ಕೀರ್ತಿ ತಂದಿದ್ದಾರೆ.

ಕನಸು: ಐಎಎಸ್ ಅಧಿಕಾರಿ

ಫೋಟೊ: 09ಎಸ್ ಎಂಜಿ50-

ತಂದೆಯೊಂದಿಗೆ ಬೃಂದಾ.