ಹಡಪದ ಅಪ್ಪಣ್ಣ ಮೂರ್ತಿ ಸ್ಥಾಪಿಸಿ

Contributed byganeshbyd143@gmail.com|Vijaya Karnataka

ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯ ಅರಿವಿನ ಗವಿಯಲ್ಲಿ ಶರಣ ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪನೆಗೆ ಒತ್ತಾಯಿಸಲಾಗಿದೆ. ಅನ್ಯ ಶರಣರ ಮೂರ್ತಿ ಸ್ಥಾಪನೆಗೆ ಮುಂದಾಗಿರುವ ಬಸವೇಶ್ವರ ಪಂಚ ಕಮೀಟಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಶಿವಶರಣ ಹಡಪದ ಅಪ್ಪಣ್ಣ ಸಮಿತಿ ತಾಲೂಕು ಘಟಕದ ಸದಸ್ಯರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕ್ರಾಂತಿಯೋಗಿ ಬಸವೇಶ್ವರರ ಆಪ್ತಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣನವರ ಕೆಲಸ ಕಾರ್ಯಗಳು ನಾಡಿನಾದ್ಯಂತ ಚಿರಪರಿಚಿತವಾಗಿವೆ.

efforts to establish the statue of basava and sharan hadapada appanna

ನಿಗದಿತ ಸ್ಥಳದಲ್ಲೇ ಮೂರ್ತಿ ಸ್ಥಾಪನೆಗೆ ಆಗ್ರಹಿಸಿ ಮನವಿ

ವಿಕ ಸುದ್ದಿಲೋಕ ಬ್ಯಾಡಗಿ

ಬೀದರ ಜಿಲ್ಲೆಬಸವಕಲ್ಯಾಣದ ತ್ರಿಪುರಾಂತಕ ಕೆರೆ ಬಳಿಯ ಅರಿವಿನ ಗವಿಯಲ್ಲಿಯೇ ಶರಣ ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪನೆಗೆæ ಆಗ್ರಹಿಸಿ ಹಾಗೂ ಅನ್ಯ ಶರಣರ ಮೂರ್ತಿ ಸ್ಥಾಪನೆಗೆ ಮುಂದಾಗಿರುವ ಬಸವೇಶ್ವರ ಪಂಚ ಕಮೀಟಿ ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿ ಶಿವಶರಣ ಹಡಪದ ಅಪ್ಪಣ್ಣ ಸಮಿತಿ ತಾಲೂಕು ಘಟಕದ ಸದಸ್ಯರು ತಹಸೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ದುಂಡೆಪ್ಪ ಕಾಯಕದ, ‘‘ಕ್ರಾಂತಿಯೋಗಿ ಬಸವೇಶ್ವರರ ಆಪ್ತಕಾರ್ಯದರ್ಶಿಯಾಗಿದ್ದ ಶರಣ ಹಡಪದ ಅಪ್ಪಣ್ಣನವರ ಕೆಲಸ ಕಾರ್ಯಗಳು 12ನೇ ಶತಮಾನದಿಂದ ನಾಡಿನಾದ್ಯಂತ ಚಿರಪರಿಚಿತವಾಗಿವೆ. ಆದರೆ ಇತ್ತೀಚೆಗೆ ಕೆಲವರ ಕುಮ್ಮಕ್ಕಿನಿಂದ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗುತ್ತಿಲ್ಲ,’’ ಎಂದು ಆರೋಪಿಸಿದರು.

‘‘ಎಲ್ಲಶರಣರ ಮೂರ್ತಿಗಳ ಸ್ಥಾಪನೆಗೆ ಸ್ವಾಗತವಿದೆ. ಅದರೆ ಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿಬೇರೊಂದು ಶರಣರ ಮೂರ್ತಿ ಸ್ಥಾಪನೆಗೆ ಮುಂದಾಗಿರುವುದು ಸಮಾಜದ ಜನರ ಭಾವನೆಗಳಿಗೆ ಧಕ್ಕೆ ಆಗುತ್ತಿದೆ. ಕೆಲವರ ಕುಮ್ಮಕ್ಕಿನಿಂದ ಇಂತಹದ್ದೊಂದು ಕೃತ್ಯಕ್ಕೆ ಮುಂದಾಗಿರುವುದು ಖಂಡನೀಯ. ಕೂಡಲೇ ತಪ್ಪಿಸತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು,’’ ಎಂದು ಆಗ್ರಹಿಸಿದರು.

ಬಸವರಾಜ ಮಲ್ಲೂರ, ಮಂಜುನಾಥ ಕಾಯಕದ, ಬಸವರಾಜ ಕಾಯಕದ, ಶಿವಾನಂದ ಕಟ್ಟೀಮನಿ, ವಿಜಯಕುಮಾರ ಕಾಯಕದ, ನಾಗರಾಜ ಕಾಯಕದ, ಗಣೇಶ ಹಡಪದ, ಪ್ರಕಾಶ ಹಡಪದ, ಉದಯಕುಮಾರ ಬೇವಿನಕಟ್ಟಿ ಇದ್ದರು.

ಫೋಟೋ-09ಬಿವೈಡಿ3-

ಶಿವಶರಣ ಹಡಪದ ಅಪ್ಪಣ್ಣ ಸಮಿತಿ ತಾಲೂಕು ಘಟಕದ ಸದಸ್ಯರು ಬ್ಯಾಡಗಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.