ವಿಕ ಸುದ್ದಿಲೋಕ ಹೊನ್ನಾವರ
ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್ ಡಿಎಂ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಶೇ.91.88 ಫಲಿತಾಂಶ ಗಳಿಸಿದೆ. ವಾಣಿಜ್ಯ ವಿಭಾಗದಲ್ಲಿಚಿನ್ಮಯಿ ಮಂಜುನಾಥ ಶೆಟ್ಟಿ ಶೇ.99.33 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಶ್ರೀರಾಮ ತಿಮ್ಮಣ್ಣ ಭಟ್ ಶೇ. 97.50 ಪಡೆದು ಪ್ರಥಮ ಸ್ಥಾನ, ಪ್ರಜ್ಞಾ ವೆಂಕಟರಮಣ ಭಟ್ ಶೇ.96.67 ಅಂಕ ಪಡೆದು ದ್ವಿತೀಯ ಸ್ಥಾನ, ರಚನಾ ಹನುಮಂತ ನಾಯ್ಕ ಶೇ. 95.67 ಅಂಕ ಪಡೆದು ತೃತೀಯ ಮತ್ತು ಸಹನಾ ಮಂಜುನಾಥ್ ಗೌಡ ಶೇ. 95.67 ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗ: ವಾಣಿಜ್ಯ ವಿಭಾಗದಲ್ಲಿಚಿನ್ಮಯಿ ಮಂಜುನಾಥ ಶೆಟ್ಟಿ ಶೇ. 99.33 ಗಳಿಸಿ ಪ್ರಥಮ ಸ್ಥಾನ, ಭೂಮಿಕಾ ವೆಂಕಟೇಶ ಕಾಮತ ಶೇ. 98.83 ಅಂಕ ಗಳಿಸಿ ದ್ವಿತೀಯ, ಪ್ರತಿಕ್ಷಾ ನಾಯ್ಕ ಶೇ. 97.67 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗ: ಕಲಾ ವಿಭಾಗದಲ್ಲಿನಾಗೇಶ ನಾಯ್ಕ ಶೇ.97.17 ಅಂಕ ಗಳಿಸಿ ಪ್ರಥಮ, ಶ್ರೇಯಾ ಮಂಜುನಾಥ ನಾಯ್ಕ ಶೇ. 96 ಅಂಕ ಗಳಿಸಿ ದ್ವಿತೀಯ, ಸಂಜನಾ ಗಜಾನನ ನಾಯ್ಕ ಶೇ. 92.83 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಹಾಗೂ ಸದಸ್ಯರು, ಪ್ರಾಚಾರ್ಯ ಡಾ.ರಾಜು ಟಿ ಮಾಳಗಿಮನಿ, ಬೋಧಕ -ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಫೋಟೋ ಇವೆ9 ಹೆಚ್ .ಎನ್ ಆರ್ 4

