ಮಾನವನ ಆರೋಗ್ಯ ರಕ್ಷಣೆಗೆ ಆದ್ಯತೆ
ವಿಕ ಸುದ್ದಿಲೋಕ ವಿಜಯಪುರ
‘‘ಪ್ರತಿ ಮಾನವನ ಆರೋಗ್ಯದ ರಕ್ಷಣೆಯೇ ವಿಶ್ವ ಆರೋಗ್ಯ ದಿನದ ಉದ್ದೇಶವಾಗಿದೆ,’’ ಎಂದು ಬಸವನಬಾಗೇವಾಡಿಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್ .ಎಸ್ . ಮೇಟಿ ಹೇಳಿದರು.
ಗೊಳಸಂಗಿ ಗ್ರಾಮದ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿವಿಶ್ವ ಆರೋಗ್ಯ ದಿನದ ನಿಮಿತ್ತ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವರ್ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿಈಚೆಗೆ ಹಮ್ಮಿಕೊಂಡಿದ್ದ ಪ್ರಾಥಮಿಕ ಚಿಕಿತ್ಸೆ ಹಾಗೂ ಎಚ್ ಐವಿ ಕುರಿತ ಕಾರ್ಯಕ್ರಮದಲ್ಲಿಮಾತನಾಡಿದರು.
‘‘ನಮ್ಮ ದೈನಂದಿನ ಜೀವನದಲ್ಲಿಆಕಸ್ಮಿಕವಾಗಿ ಅನೇಕ ಅವಘಡಗಳು ಉಂಟಾದಾಗ ಪ್ರಾಥಮಿಕ ಚಿಕಿತ್ಸೆಯಿಂದ ಜೀವ ರಕ್ಷಣೆಯನ್ನು ಮಾಡಬಹುದು,’’ ಎಂದು ತಿಳಿಸಿದರು.
ಪ್ರೊ.ಎಸ್ .ಆರ್ . ಕುಂಬಾರ, ‘‘ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಆರೋಗ್ಯದ ಕಡೆಗೂ ಗಮನ ಹರಿಸಬೇಕು,’’ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ಮುಚ್ಚಂಡಿ ಮಹಿಳೆಯರ ಗರ್ಭಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.
ಪ್ರೊ. ಚಂದ್ರಕಾಂತ ನಾಯಕ, ಪ್ರೊ. ಶ್ರೀಶೈಲ ಬಬಲಾದ, ಪ್ರೊ. ನಂಜುಂಡಸ್ವಾಮಿ ಎಂ. ಇದ್ದರು.
ಫೋಟೋ: ಆರೋಗ್ಯ-ಬಿಜೆಪಿ08-01
ಗೊಳಸಂಗಿಯ ಹೆಬ್ಬಾಳ ಕಾಲೇಜಿನಲ್ಲಿನಡೆದ ಪ್ರಾಥಮಿಕ ಚಿಕಿತ್ಸೆ ಹಾಗೂ ಎಚ್ ಐವಿ ಏಡ್ಸ್ ಕುರಿತ ಕಾರ್ಯಕ್ರಮದಲ್ಲಿಎಸ್ .ಎಸ್ . ಮೇಟಿ ಮಾತನಾಡಿದರು.

