9ಎಸ್ ಎಚ್ ಟಿ1)
ಇಂದು ಲೋಕಾಯುಕ್ತ ಜನಸಂಪರ್ಕ ಸಭೆ
ವಿಕ ಸುದ್ದಿಲೋಕ ಶಿರಹಟ್ಟಿ
ಅಪರ್ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಅವರ ನಿರ್ದೇಶನದಂತೆ ಕರ್ನಾಟಕ ಲೋಕಾಯುಕ್ತ ಗದಗ ಕಚೇರಿಯ ಪೊಲೀಸ್ ಅಧಿಕಾರಿಗಳು ಏ.10ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿಸಾರ್ವಜನಿಕ ಜನಸಂಪರ್ಕ ಸಭೆ ನಡೆಯಲಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಗದಗ ಲೋಕಾಯುಕ್ತ ಡಿಎಸ್ ಪಿ ವಿಜಯಕುಮಾರ ಬಿರಾದಾರ, ಸಾರ್ವಜನಿಕರು ಸರಕಾರಿ ಇಲಾಖೆಗಳಲ್ಲಿತಮ್ಮ ಕೆಲಸ-ಕಾರ್ಯದಲ್ಲಿವಿಳಂಬವಾಗುತ್ತಿದ್ದಲ್ಲಿ, ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲಿ, ವಿನಾಕಾರಣ ಸತಾಯಿಸುತ್ತಿದ್ದರೆ ಇಂತಹವರು ಸರಕಾರ ಸೇವೆಯಲ್ಲಿನಿರ್ಲಕ್ಷ ್ಯ, ಕರ್ತವ್ಯ ಲೋಪ, ದುರಾಡಳಿತ ನಿರ್ವಹಿಸಿದಂತಹ ಅಧಿಕಾರಿ ವಿರುದ್ಧ ಫಾಮ್ ರ್ ನಂ.1 ಮತ್ತು 2ನೇದ್ದರಲ್ಲಿಲಿಖಿತವಾಗಿ ದೂರು ಸಲ್ಲಿಸಬಹುದಾಗಿದೆ. ಆದ್ದರಿಂದ ಶಿರಹಟ್ಟಿ ತಾಲೂಕಿನ ಎಲ್ಲತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಇದರಿಂದ ಸ್ವೀಕೃತವಾದಂತಹ ಅರ್ಜಿಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಪರಿಹಾರವಾಗುವಂತಹ ಸಮಸ್ಯೆಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಶಿರಹಟ್ಟಿ ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳ ಸಾರ್ವಜನಿಕರು ಸಭೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

