ಕ್ರೀಡಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ

Contributed byvknagamangala@gmail.com|Vijaya Karnataka

ನಾಗಮಂಗಲ ತಾಲೂಕಿನ ದೇವಲಾಪುರ ಕಾಲೇಜಿನಲ್ಲಿ ನೂತನ ಜಿಮ್‌ ಮತ್ತು ಕ್ರೀಡಾ ಕೊಠಡಿ ನಿರ್ಮಾಣಕ್ಕೆ ಸಚಿವ ಎನ್‌.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು. ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಎಂದು ಸಚಿವರು ತಿಳಿಸಿದರು. ಕಾಲೇಜಿಗೆ ಕಾಂಪೌಂಡ್‌ ನಿರ್ಮಾಣಕ್ಕೂ ಭರವಸೆ ನೀಡಿದರು. ಕಾಲೇಜು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

new priority for sports room construction minister n chaluvarayaswamys groundbreaking ceremony

ವಿಕ ಸುದ್ದಿಲೋಕ ನಾಗಮಂಗಲ

ತಾಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ಇರುವ ಪ್ರಥಮ ದರ್ಜೆ ಕಾಲೇಜಿನಲ್ಲಿನೂತನ ಜಿಮ್ ಮತ್ತು ಕ್ರೀಡಾ ಕೊಠಡಿ ನಿರ್ಮಾಣ ಕಾಮಗಾರಿಗೆ ಕೃಷಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಸಚಿವರು ‘‘ಕಾಲೇಜಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು. ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸ ನೀಡಬೇಕು, ಜಿಮ್ ಮತ್ತು ಕ್ರೀಡಾ ಕೊಠಡಿ ನಿರ್ಮಾಣ ಕಾಮಗಾರಿ 1 ಕೋಟಿ ರೂ. ವೆಚ್ಚದಲ್ಲಿನಿರ್ಮಾಣ ಮಾಡಲಾಗುತ್ತಿದ್ದು, ಮಕ್ಕಳು ಇದರ ಉಪಯೋಗ ಪಡೆಯುವುದರೊಂದಿಗೆ ಉತ್ತಮವಾಗಿ ವಿಧ್ಯಾಭ್ಯಾಸ ಮಾಡುವಂತೆ ಶಿಕ್ಷಕರು ಗಮನ ಹರಿಸಬೇಕು,’’ ಎಂದು ಹೇಳಿದರು.

‘‘ಕಾಲೇಜು ಕಮಿಟಿ ಸದಸ್ಯರು ಹಾಗೂ ಶಿಕ್ಷಕರು ಕಾಲೇಜು ಅವರಣಕ್ಕೆ ಕಾಪೌಂಡ್ ಅವಶ್ಯಕತೆ ಇದ್ದು, ಇದರ ನಿರ್ಮಾಣ ಮಾಡಿಸಿಕೊಡುವಂತೆ ಸಚಿವರಲ್ಲಿಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮುಂದಿನ ದಿನಗಳಲ್ಲಿಅಗತ್ಯವಾಗಿರುವ ಕಾಪೌಂಡ್ ಸಹ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿ, ಕಾಲೇಜಿನಲ್ಲಿಮಕ್ಕಳಿಗೆ ಪಾಠ, ಪ್ರವಚನಗಳು ಚನ್ನಾಗಿ ನಡೆಯಬೇಕು, ಉತ್ತಮ ಪರಿಸರ ನಿರ್ಮಾಣ ಮಾಡಬೇಕು,’’ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ನೇತ್ರಾವತಿ, ಕಾಲೇಜು ಸಮಿತಿ ಸದಸ್ಯರಾದ ಶಿವಣ್ಣಗೌಡ, ಸೀತಾರಾಮು, ಕಾಂಗ್ರೆಸ್ ಅಧ್ಯಕ್ಷ ಎನ್ .ಜೆ.ರಾಜೇಶ್ , ಮುಖಂಡರಾದ ನರಸಿಂಹಮೂರ್ತಿ, ಮನು ಕಲ್ಲಿನಾಥ ಪುರ, ಜಗದೀಶ್ , ಪ್ರವೀಣ್ ಕುಮಾರ್ , ಗಂಗಾಧರ್ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಚಿತ್ರ ಎಂಡಿವೈ 8-1: ನಾಗಮಂಗಲ ತಾಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ಇರುವ ಪ್ರಥಮ ದರ್ಜೆ ಕಾಲೇಜಿನಲ್ಲಿನೂತನ ಜಿಮ್ ಮತ್ತು ಕ್ರೀಡಾ ಕೊಠಡಿ ನಿರ್ಮಾಣ ಕಾಮಗಾರಿಗೆ ಕೃಷಿ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು.