ವಿಕ ಸುದ್ದಿಲೋಕ ಹನೂರು
ಕ್ಷೇತ್ರ ವ್ಯಾಪ್ತಿಯ ಚಿಕ್ಕಲ್ಲೂರು ಸಮೀಪದ ರಾಚಪ್ಪಾಜಿ ನಗರದಲ್ಲಿ5 ವಷÜರ್ ಹಿಂದಿನ ಸಾಲದ ವಿಚಾರಕ್ಕೆ ಸಂಬಂಧಿಸಿದ ಜಗಳದಲ್ಲಿಕಬ್ಬಿಣದ ಮಚ್ಚಿನಿಂದ ಹಲ್ಲೆನಡೆಸಿದ ಆರೋಪಿಗೆ ಕೊಳ್ಳೇಗಾಲದ ಅಪರ ಸಿವಿಲ್ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
2021 ರ ಜೂನ್ 21ರಂದು ಘಟನೆ ನಡೆದಿತ್ತು. ಮಹೇಶ್ ಎಂಬಾತ ತನ್ನ ಸಾಲದ ಹಣವನ್ನು ವಾಪಸ್ ಪಡೆಯಲು ಆರೋಪಿಯನ್ನು ಕೇಳಿದಾಗ, ‘ನನ್ನ ಬಳಿ ಹಣ ಇಲ್ಲ, ಕೊಡಲು ಆಗುವುದಿಲ್ಲ’ ಎಂದು ಚಂದು ಎಂಬಾತ ಉತ್ತರಿಸಿದ. ಈ ತಿರಸ್ಕಾರದ ನಂತರ ಜಗಳ ಉಂಟಾಯಿತು. ಮಹೇಶ್ ‘ನಾಳೆ ಹಣ ಕೊಡಬೇಕು’ ಎಂದು ಹೇಳಿ ಮನೆಗೆ ತೆರಳಿದ್ದರು. ಅದೇ ರಾತ್ರಿ ಸರ್ಕಲ್ ಅಂಗಡಿ ಹತ್ತಿರ, ಚಂದು ಆರೋಪಿಯು ಮಹೇಶ್ ಮೇಲೆ ಬಲಗೈಗೆ ಕಬ್ಬಿಣದ ಮಚ್ಚಿನಿಂದ ಹಲ್ಲೆನಡೆಸಿ ತೀವ್ರ ಗಾಯ ಉಂಟುಮಾಡಿದ್ದರು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.
ನಂತರ, ನ್ಯಾಯಾಲಯವು ಕಲಂ 326 ಐಪಿಸಿ ಅಡಿಯಲ್ಲಿಆರೋಪಿಗೆ ಎರಡು ವಷÜರ್ ಗಳ ಸೆರೆವಾಸ ಹಾಗೂ ದಂಡ ವಿಧಿಸುವಂತೆ ತೀರ್ಪು ನೀಡಿದೆ. ತೀರ್ಪನ್ನು ನ್ಯಾಯಾಧೀಶ ಶ್ರೀ ರಂಜಿತ್ ಕುಮಾರ್ ಅವರು ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಚಂದ್ರಶೇಖರ್ ವಾದ ಮಂಡಿಸಿದ್ದಾರೆ.

