ರಿಲೀಸ್ ಗೂ ಮುನ್ನವೇ ಪ್ರಶಂಸೆ ಪಡೆದ ಸೆಪ್ಟೆಂಬರ್ 21

Contributed byKiran Mr. Kumar|Vijaya Karnataka

ಸೆಪ್ಟೆಂಬರ್ 21 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರವು ಮರೆವಿನ ಕಾಯಿಲೆಯನ್ನು ಕುರಿತಾಗಿದೆ. ರೋಗಿಗಳ ಮತ್ತು ಅವರ ಕುಟುಂಬದ ನೋವನ್ನು ಇದು ತೋರಿಸುತ್ತದೆ. ಪ್ರವೀಣ್ ಸಿಂಗ್ ಸಿಸೋಡಿಯಾ ಮತ್ತು ಪ್ರಿಯಾಂಕಾ ಉಪೇಂದ್ರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜರೀನಾ ವಹಾಬ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ಚಿತ್ರವು ಈಗಾಗಲೇ ಗೋವಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ.

september 21 praised even before release

ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿಏಕಕಾಲಕ್ಕೆ ತಯಾರಾಗಿರುವ ಬಹುನಿರೀಕ್ಷಿತ ‘ಸೆಪ್ಟೆಂಬರ್ 21’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

22 ವರ್ಷದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರ ಚೊಚ್ಚಲ ನಿರ್ದೇಶನದಲ್ಲಿಮೂಡಿಬಂದಿರುವ ಈ ಸಿನಿಮಾ, ಮರೆವು ಎಂಬ ಗಂಭೀರ ವಿಷಯವನ್ನು ಅತ್ಯಂತ ಮೃದುವಾಗಿ ಮತ್ತು ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆ.

ಮರೆವಿನ ಕಾಯಿಲೆಗೆ ತುತ್ತಾದವರ ಮತ್ತು ಅವರನ್ನು ಹಗಲಿರುಳು ಆರೈಕೆ ಮಾಡುವವರ ಒಳಗಿನ ತಳಮಳವನ್ನು ಈ ಚಿತ್ರದಲ್ಲಿನೈಜವಾಗಿ ಚಿತ್ರಿಸಲಾಗಿದೆ. ಸದ್ಯ ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರಿಗೆ ಕೇವಲ ದೃಶ್ಯಗಳನ್ನು ತೋರಿಸುವುದಲ್ಲದೆ, ಕಳೆದು ಹೋಗುತ್ತಿರುವ ನೆನಪುಗಳ ನೋವನ್ನು ಮೌನವಾಗಿ ಅನುಭವಿಸುವಂತೆ ಮಾಡುತ್ತದೆ. ಇದು ಕೇವಲ ಸಿನಿಮಾವಲ್ಲ, ಭಾವನಾತ್ಮಕ ಪಯಣ ಎಂಬ ಭರವಸೆಯನ್ನು ನೀಡುತ್ತದೆ.

ಚಿತ್ರದಲ್ಲಿಪ್ರವೀಣ್ ಸಿಂಗ್ ಸಿಸೋಡಿಯಾ ಮರೆಗುಳಿತನದಿಂದ ತನ್ನ ಅಸ್ತಿತ್ವವನ್ನೇ ಮರೆಯುತ್ತಿರುವ ವ್ಯಕ್ತಿಯ ಪಾತ್ರದಲ್ಲಿನಟಿಸಿದ್ದರೆ, ಅವರಿಗೆ ಆಸರೆಯಾಗಿ ನಿಲ್ಲುವ ಪಾಲಕಿಯಾಗಿ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿದ್ದಾರೆ.

‘ನನ್ನ ಸಿನಿಮಾ ನೋಡುವಾಗ ಪ್ರೇಕ್ಷಕರು ಮರೆವಿನ ಕಾಯಿಲೆ ಇರುವ ರೋಗಿಗಳ ಕುಟುಂಬ ಅನುಭವಿಸುವ ಮೌನ ಮತ್ತು ಭಾವನಾತ್ಮಕ ತೂಕವನ್ನು ನೇರವಾಗಿ ಅನುಭವಿಸಬೇಕು ಎಂಬುದು ನನ್ನ ಹಂಬಲವಾಗಿತ್ತು’ ಎಂದು ಕರೆನ್ ಚಿತ್ರದ ಉದ್ದೇಶವನ್ನು ಹಂಚಿಕೊಂಡಿದ್ದಾರೆ.

ಚಿತ್ರದ ತಾರಾಗಣದಲ್ಲಿ ಹಿರಿಯ ನಟಿ ಜರೀನಾ ವಹಾಬ್ , ಅಮಿತ್ ಬೆÖ್ಲ…, ಅಜಿತ್ ಶಿಧಾಯೆ, ಸಚಿನ್ ಪಟೇಕರ್ ಮತ್ತು ರಿಕಿ ರುದ್ರ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ. ರಾಜ್ ಶೇಖರ್ ಬರಹ ಮತ್ತು ವಿನಯ್ ಚಂದ್ರ ಸಂಗೀತ ಚಿತ್ರಕ್ಕಿದೆ. ಚಿತ್ರವು ಈಗಾಗಲೇ 56ನೇ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ.