29 ಎನ್ ಆರ್ ಡಿ-6
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆ (ಧಿಕಿಧಿಕ್ಕಧಿರ್ )
ಗ್ಯಾಧಿರಂಟಿಯಲ್ಲಿಶೇ. 99 ಸಾಧಿಧಧಿನೆ (ಧಿಹೆಧಿಡ್ )
ವಿಕ ಸುದ್ದಿಲೋಕ ನರಗುಂದ
ತಾಲೂಕಿನ ಬನಹಟ್ಟಿ ಗ್ರಾಪಂ ಸಭಾ ಭವನದಲ್ಲಿತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಜರುಗಿತು.
ಗ್ಯಾರಂಟಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್ .ಕೆ.ಇನಾಮದಾರ ಮಾತಾನಾಡಿ, ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆ ಅಧಿಕಾರಿಗಳು ಈ ಭಾಗದ ಎಲ್ಲಜನರ ಸಹಕಾರದೊಂದಿಗೆ ಪ್ರತಿಯೊಂದು ಗ್ಯಾರಂಟಿ ಯೋಜನೆಗಳಲ್ಲಿಶೇ.99 ರಷ್ಟು ಪ್ರಗತಿ ಸಾಧಿಸಿರುವುದು ಕಾರ್ಯತತ್ಪರತೆಗೆ ಮಾದರಿಯಾಗಿದೆ ಎಂದರು.
ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿವೇಕ ಯಾವಗಲ್ ಮಾತನಾಡಿ, ಮಹಿಳೆಯರ ಸಬಲೀಕರಣ , ಗೌರವಯುತ ಬದುಕಿಗಾಗಿ ಶಕ್ತಿ ಹಾಗೂ ಗೃಹಲಕ್ಷ್ಮೀ ಯೋಜನೆ, ಯವನಿಧಿ ಯೋಜನೆಯ ಮೂಲಕ ಯುವಕರಿಗೆ ಆರ್ಥಿಕ ಶಕ್ತಿ ನೀಡುವುದರ ಜತೆಗೆ ಗ್ಯಾರಂಟಿ ಯೋಜನೆಗಳು ತಾಯಿಂದಿರ ನೆಮ್ಮದಿಯ ಜೀವನಕ್ಕೆ ನೆಧಿರಧಿವಾಧಿಗಿಧಿದೆ ಎಂದರು.
ಟಿ.ಬಿ.ಶಿರಿಯಪ್ಪಗೌಡ್ರ, ಉಮಾ ದ್ಯಾವನೂರ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆ ಶೇ.99.9 ರಷ್ಟು ಜಾರಿಗೊಂಡು 24,450 ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ.ದಂತೆ 2026 ಫೆಬ್ರವರಿ ಅಂತ್ಯದವರೆಗೆ ಡಿಬಿಟಿ ಮೂಲಕ ಹಣ ಪಾವತಿಸಿದೆ.
ನರಗುಂದ ಹೆಸ್ಕಾಂ ಇಲಾಖೆಯಲ್ಲಿನೋಂದಾಯಿತ 25,185 ಸ್ಥಾವರಗಳಿಗೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 23,093 ಪಡಿತರ ಚೀಟಿ ಹೊಂದಿದ ಪ್ರತಿಯೊಬ್ಬ ಫಲಾನುಭವಿ ಗಳಿಗೆ ತಲಾ 10 ಕೆಜಿ ಅಕ್ಕಿಯಂತೆ ಒಟ್ಟು,8110 ಕ್ವಿಂಟಾಲ್ ಆಹಾರಧಾನ್ಯ ವಿತರಿಸಲಾಗಿದೆ.
369 ವಿದ್ಯಾರ್ಥಿಗಳಿಗೆ ಯುವನಿಧಿ: ಯುವನಿಧಿಯೋಜನೆಯಡಿ ಡಿಸೆಂಬರ್ -2025 ರವರೆಗೆ 369 ವಿದ್ಯಾರ್ಥಿಗಳಿಗೆ ಸದರಿ ಯೋಜನೆಯಡಿ 1,35,09000 ರೂ. ಅನುದಾನವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಪಾವತಿಸಲಾಗಿದೆ ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ಪರಿಶೀಲನೆ ಬಗ್ಗೆ ವಿವರಿಸಿದರು.
ಸಭೆಯಲ್ಲಿಗ್ಯಾರಂಟಿ ಸಮಿತಿ ಸದಸ್ಯರಾದ ವಿನಾಯಕ ಹಡಗಲಿ, ವೀರಯ್ಯ ಹುಚ್ಚಪ್ಪಯ್ಯನಮಠ, ಹನಮಂತ ರಾಮಣ್ಣವರ, ಶೇಖರಗೌಡ ಮದ್ನೂರ, ಚಂದ್ರಶೇಖರಗೌಡ ಪಾಟೀಲ, ಬಸನಗೌಡ ಮಲ್ಲನಗೌಡ್ರ, ಮೌಲಾಸಾಬ ಅರಬಜಮಾದಾರ, ಬನಹಟ್ಟಿ ಗ್ರಾಮದ ತಮ್ಮನಗೌಡ ಮಲ್ಲನಗೌಡ, ಧ್ಯಾವನಗೌಡ ಮಲ್ಲನಗೌಡ್ರ, ಶೇರಣಪ್ಪ ಕಲ್ಲಾಪುರ, ಅಶೋಕ ಪಾಟೀಲ, ಪಂಚಾಯಿಧಿತಿ ಆಡಳಿತಧಿಕಾರಿ ಬಸವರಾಜ ಬಡಿಗೇರ, ಪಿಡಿಒ ಮಂಜುನಾಥ ಗಣಿ ಉಪಸ್ಥಿತರಿದ್ದರು. ಎ.ಐ.ಕುಸುಗಲ್ ನಿರ್ವಹಿಸಿದರು.
ನರಗುಂದ: ಫೋಟೋ ‚ಶಿರ್ಷಿಕೆ) 29 ಎನ್ ಆರ್ ಡಿ-6 :
ನರಗುಂದ ತಾಲೂಕಿನ ಬನಹಟ್ಟಿ ಗ್ರಾಪಂ ಕಚೇರಿಯಲ್ಲಿಆಯೋಜಿಸಿದ್ದ ತಾಲೂಕು ಮಟ್ಟದ ಉಚಿತ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ವಿವೇಕ ಯಾವಗಲ್ ಉದ್ಘಾಟಿಸಿದರು.

