ಪಯಟಿಯಾಲ್ ಕೈರಳಿ ಸ್ವ-ಸಹಾಯ ಸಂಘದ ವಾರ್ಷಿಕ ಆಚರಣೆ

Contributed byprakashamailankote@gmail.com|Vijaya Karnataka

ಕುಂಡಂಗುಳಿಯಲ್ಲಿ ಪಯಟಿಯಾಲ್‌ ಕೈರಳಿ ಸ್ವ-ಸಹಾಯ ಸಂಘದ 20ನೇ ವಾರ್ಷಿಕ ಆಚರಣೆ ಆರವಂ 2026 ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಗಣ್ಯರು ಭಾಗವಹಿಸಿ, ಬುಲೆಟಿನ್ ಬಿಡುಗಡೆ ಮಾಡಿದರು. ಹಿಂದಿನ ಪದಾಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ನೃತ್ಯ, ಜಾನಪದ ಗೀತೆಗಳು ಸೇರಿದಂತೆ ಕಲಾ ಕಾರ್ಯಕ್ರಮಗಳು ನಡೆದವು.

the 20th annual celebration of payatial kairali self help group held successfully

ಕುಂಡಂಗುಳಿ: ಪಯಟಿಯಾಲ್ ಕೈರಳಿ ಸ್ವ-ಸಹಾಯ ಸಂಘದ 20ನೇ ವಾರ್ಷಿಕ ಆಚರಣೆ ಆರವಂ 2026ನ್ನು ಜಿಲ್ಲಾಪಂಚಾಧಿಯಿಧಿತಿ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಿದರು.

ಸಂಘಟನಾ ಸಮಿತಿ ಅಧ್ಯಕ್ಷ ಪ್ರಶಾಂತ್ ಪಯಟಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಸಿ. ಬಾಲನ್ ಅವರು ಬುಲೆಟಿನ್ ಬಿಡುಗಡೆ ಮಾಡಿದರು. ಜಿಲ್ಲಾಪಂಚಾಧಿಯಿಧಿತಿ ಉಪಾಧ್ಯಕ್ಷೆ ಕೆ. ಕೆ. ಸೋಯಾ, ಬೇಡಡ್ಕ ಗ್ರಾಮ ಪಂಚಾಧಿಯಿಧಿತಿ ಅಧ್ಯಕ್ಷ ಇ. ಕುಂಞಿರಾಮನ್ , ಕಾರಡ್ಕ ಬ್ಲಾಕ್ ಪಂ. ಸದಸ್ಯೆ ಪ್ರಿಯಾ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಧಾಕೃಷ್ಣನ್ ಚಾಲಕ್ಕಾಡ್ ಅವರು ಗುಂಪಿನ ಹಿಂದಿನ ಪದಾಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸನ್ಮಾನಿಸಿದರು. ನಾರಾಯಣನ್ , ಕೆ. ಭಾಸ್ಕರನ್ , ವಿ.ದಿವಾಕರನ್ , ಎಂ. ಮೋಹನನ್ , ಕೆ. ಮಣಿಕಂಠನ್ , ಎ. ರಾಮಕೃಷ್ಣನ್ , ಎ. ಜಯಕೃಷ್ಣನ್ , ಧಿಶ್ರೀಕಲಾ ಕೆ.ಟಿ. ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಶ್ರೀಜಿತ್ ವರದಿ ಮಂಡಿಸಿದರು. ಚಿಲಂಗಾ ಸ್ಪೇಸ್ ಫಾರ್ ಆರ್ಟ್ ಪೆರ್ಲಡುಕ್ಕ ಅವರಿಂದ ನೃತ್ಯ, ಸ್ಥಳೀಯ ಪ್ರತಿಭೆಗಳಿಂದ ನಾನಾ ಕಲಾ ಕಾರ್ಯಕ್ರಮಗಳು, ಜನನಿ ಅಂಬಲತ್ತರ ಅವರಿಂದ ಜಾನಪದ ಗೀತೆಗಳು ಜರುಗಿದುವು.

ಸಂಘಟನಾ ಸಮಿತಿಯ ಪ್ರಧಾನ ಸಂಚಾಲಕ ರಾಜೀಶ್ ಪಯಟಿಯಾಲ್ ಸ್ವಾಗತಿದಧಿರು. ಪ್ರೇಮಚಂದ್ರನ್ ಕೆ.ಎನ್ . ವಂದಿಸಿದರು.

ಚಿತ್ರ..28ಎಂಯುಕೈರಳಿ(ಕೈರಳಿ ಸ್ವ-ಸಹಾಯ ಸಂಘದ ವಾರ್ಷಿಕ ಆಚರಣೆಯನ್ನು ಜಿಲ್ಲಾಪಂ. ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಿದರು.)