ಪಠ್ಯ ಜ್ಞಾನದ ಜತೆ ಬೇಕಿದೆ ಪ್ರಾಯೋಗಿಕ ಕೌಶಲ್ಯ

Contributed bysudhakara.kannadamoole@timesofindia.com|Vijaya Karnataka

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿಗಳಿಗೆ ಪಠ್ಯ ಜ್ಞಾನದ ಜೊತೆಗೆ ಪ್ರಾಯೋಗಿಕ ಕೌಶಲ್ಯದ ಮಹತ್ವವನ್ನು ಒತ್ತಿ ಹೇಳಿದರು. ಕೌಶಲ್ಯವಿದ್ದರೆ ಯಾವುದೇ ಸವಾಲು ಎದುರಿಸಬಹುದು ಎಂದರು. ಶಿಕ್ಷಣ ಸಂಸ್ಥೆಯ ಅವಕಾಶಗಳನ್ನು ಬಳಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಸಂಚಾಲಕ ವಂ. ಫಾ. ಲಾರೆನ್ಸ್ ಮಸ್ಕರೇನ್ಹಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವಂತೆ ಪ್ರಾದೇಶಿಕ ಜಂಟಿ ನಿರ್ದೇಶಕಿ ಪ್ರೊ. ಕವಿತಾ ಕೆ.ಆರ್. ಸಲಹೆ ನೀಡಿದರು. ಸಾಧಕರಿಗೆ ಸನ್ಮಾನ ನಡೆಯಿತು.

success in life is not possible without practical knowledge

ಸಂತ ಫಿಲೋಮಿನಾ ಕಾಲೇಜು ವಾರ್ಷಿಕೋತ್ಸವದಲ್ಲಿಶಾಸಕ ಅಶೋಕ್ ರೈ

ವಿಕ ಸುದ್ದಿಲೋಕ ಪುತ್ತೂರು

ವಿದ್ಯಾರ್ಥಿಗಳಲ್ಲಿಪಠ್ಯದ ಜ್ಞಾನ ಎಷ್ಟು ಮುಖ್ಯವೋ ಬದುಕಿನ ಪ್ರಾಯೋಗಿಕ ಜ್ಞಾನವೂ ಅಷ್ಟೇ ಮುಖ್ಯ. ಪಠ್ಯದ ಮೂಲಕ ಎಷ್ಟೇ ಕಲಿತರೂ ಪ್ರಾಯೋಗಿಕ ಜ್ಞಾನ ಇಲ್ಲದೇ ಹೋದರೇ ಬದುಕಿನಲ್ಲಿಯಶಸ್ಸು ಗಳಿಸಲು ಸಾಧ್ಯವಿಲ್ಲಎಂದು ಶಾಸಕ ಅಶೋಕ್ ರೈ ನುಡಿದರು.

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಸೋಮವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿಅವರು ಮಾತನಾಡಿದರು.

ಪ್ರಾಯೋಗಿಕ ಜ್ಞಾನ ಬಹಳ ಮುಖ್ಯ. ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಯಾಗಬೇಕು. ಕೌಶಲ್ಯವಿದ್ದರೆ ಯಾವುದೇ ಸವಾಲನ್ನು ನಿಭಾಯಿಸಬಹುದು. ಒಬ್ಬ ವ್ಯಕ್ತಿ ಪರಿಪೂರ್ಣ ನಾಗುವುದು ಒಳ್ಳೆಯ ಆರೋಗ್ಯ, ಉತ್ತಮ ವಿದ್ಯಾಭ್ಯಾಸ ಮತ್ತು ಗೌರವಯುತ ಉದ್ಯೋಗವಿದ್ದಾಗ ಮಾತ್ರ. ವಿದ್ಯಾರ್ಥಿಗಳಲ್ಲಿ ನಿಷ್ಠೆ, ಸರಿಯಾದ ಯೋಜನೆ ಮತ್ತು ಗುರಿ ಇದ್ದರೆ ಖಂಡಿತ ಸಾಧನೆ ಮಾಡಲು ಸಾಧ್ಯ ಎಂದವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ. ಫಾ ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಇಲ್ಲಿ ನಿಮಗೆ ಎಲ್ಲ ರೀತಿಯ ಅವಕಾಶಗಳನ್ನು ನೀಡಲಾಗಿದೆ. ಈ ಅವಕಾಶಗಳನ್ನು ಬಳಸಿಕೊಂಡು ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದರು.

ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಪ್ರೊ. ಕವಿತಾ ಕೆ.ಆರ್ . ಮಾತನಾಡಿ, ನಿಮ್ಮಲ್ಲಿಹೊಂದಾಣಿಕೆ ಮಾಡಿಕೊಳ್ಳುವ ಗುಣ ಇರಲೇಬೇಕು. ಬದಲಾಗುತ್ತಿರುವ ಜಗತ್ತಿಗೆ ನೀವು ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ದಾರಿ ತಪ್ಪುತ್ತೀರಿ ಎಂದರು.

ಪ್ರಿನ್ಸಿಪಾಲ್ ವಂ.ಫಾ.ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು.

ಸಾಧಕರಿಗೆ ಸನ್ಮಾನ:

ಪಿಎಚ್ ಡಿ ಪಡೆದ ಡಾ.ವಿನಯಚಂದ್ರ, ಡಾ.ಗೀತಾ ಪೂರ್ಣಿಮ ಕೆ. ಮತ್ತು ಡಾ.ಭಾರತಿ ಎಸ್ . ರೈ ಅವರನ್ನು ಸನ್ಮಾನಿಸಲಾಯಿತು. ಎನ್ ಸಿಸಿ ನೌಕಾದಳದ ಅಧಿಕಾರಿಯಾಗಿ ಸಬ್ ಲೆಫ್ಟಿನೆಂಟ್ ಶ್ರೇಣಿಗೆ ಆಯ್ಕೆಯಾದ ತೇಜಸ್ವಿ ಭಟ್ ಕೆ., ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಏಕತಾ ಶಿಬಿರದಲ್ಲಿಭಾಗವಹಿಸಿದ ಡಾ.ಕೆ. ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಕೆ.ಸೆಟ್ ಪರೀಕ್ಷೆಯಲ್ಲಿಉತ್ತೀರ್ಣರಾದ ಉಪನ್ಯಾಸಕ ಮತ್ತು ವಿದ್ಯಾರ್ಥಿಯರನ್ನು ಗೌರವಿಸಲಾುತು. ಕ್ರೀಡಾ ಕ್ಷೇತ್ರದಲ್ಲಿಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ವಂ.ಫಾ. ಅಶೋಕ್ ರಾಯನ್ ಕ್ರಾಸ್ತ ಗೌರವ ಅತಿಥಿಗಳಾಗಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ. ಅಬೂಬಕ್ಕರ್ ಅರ್ಲಪದವು ಉಪಸ್ಥಿತರಿದ್ದರು.

ವೈಸ್ ಪ್ರಿನ್ಸಿಪಾಲ್ ಡಾ. ವಿಜಯಕುಮಾರ್ ಎಂ. ಸ್ವಾಗತಿಸಿದರು. ಕಾಲೇಜಿನ ಶೈಕ್ಷಣಿಕ ರಿಜಿಸ್ಟ್ರಾರ್ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ವಂದಿಸಿದರು. ಭೌತಶಾಸ್ತ್ರ ವಿಭಾಗದ ಪೂಜಾಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು.

ಫೋಟೋ: 29ಪಿ-ಫಿಲೋಮಿನಾ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಾರ್ಷಿಕೋತ್ಸವದಲ್ಲಿಶಾಸಕ ಅಶೋಕ್ ರೈ ಮಾತನಾಡಿದರು.