ನಿಯಮ ಸರಳಗೊಳಿಸಲು ಆಗ್ರಹ

Contributed byalnavarvk1@gmail.com|Vijaya Karnataka

ಅಳ್ನಾವರ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ನಿಯಮಗಳನ್ನು ಸರಳಗೊಳಿಸಬೇಕು, ರಾಸಾಯನಿಕಗಳ ಮೇಲೆ ಶೇ. 8 ಲಾಭಾಂಶ ನೀಡಬೇಕು, ಸಾಗಾಟ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಮನವಿ ಮಾಡಿದ್ದಾರೆ. ಸಮಸ್ಯೆಗಳು ಪರಿಹರಿಸದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.

demand for regulatory changes in agricultural equipment sales

ಕೃಷಿ ಪರಿಕರ ಮಾರಾಟಗಾರರ ಮನವಿ

ಅಳ್ನಾವರ: ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಡೀಲರ್ ಗಳಿಗೆ ನೀಡಿದ ವಿವಿಧ ನಿಯಮ ಮತ್ತು ಷರತ್ತುಗಳನ್ನು ಸರಳಗೊಳಿಸಬೇಕು. ರಾಸಾಯನಿಕಗಳ ಮೇಲೆ ಕನಿಷ್ಠ ಶೇ.8 ಲಾಭಾಂಶ ನೀಡುವಂತೆ ಕ್ರಮ ಕೈಗೊಳ್ಳಬೇಕು. ಗೊಬ್ಬರ, ಬೀಜ ಮತ್ತು ಕೀಟನಾಶಕಗಳ ಸಾಗಾಟ ವೆಚ್ಚ ಹಾಗೂ ಇತರ ಖರ್ಚುಗಳನ್ನು ಸರಕಾರವೇ ಭರಿಸಬೇಕು. ಡೀಲರ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಕಾರ ತಕ್ಷಣ ಪರಿಹರಿಸಬೇಕು. ರಸಗೊಬ್ಬರ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿಯಲ್ಲಿತಿಳಿಸಲಾಗಿದೆ.

ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಮಾತನಾಡಿ, ‘‘ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಸರಕಾರ ಪರಿಗಣಿಸಿ ಶೀಘ್ರದಲ್ಲಿಸೂಕ್ತ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳು ಈಡೇರದಿದ್ದರೆ ಮುಷ್ಕರ ಮುಂದುವರಿಸಲಾಗುವುದು,’’ ಎಂದು ಎಚ್ಚರಿಸಿದರು.

ಕೃಷಿ ಪರಿಕರಗಳ ಮಾರಾಟಗಾರ ಸಂಘದ ಅಧ್ಯಕ್ಷ ಹನುಮಂತ ಪಾಟೀಲ, ಕಾರ್ಯದರ್ಶಿ ರವೀಂದ್ರ ಮುನವಳ್ಳಿ, ಮಂಜು ಕೇಸರೇಕರ, ವಿನಾಯಕ ದುಲಬಾಜಿ, ದರ್ಶನ ತಂಬಾಕದವರ, ರಮೇಶ ನಾಯಕ, ಮೊಹನ ಬಸರಿಕಟ್ಟಿ. ರಮೇಶ ಕಿತ್ತೂರ, ಮಂಜುನಾಥ ಬೆಣಚಿಕರ, ಧರ್ಮರಾಜ ಪಾಟೀಲ, ಮಂಜುನಾಥ ದುಲಬಾಜಿ ಮತ್ತಿತರರು ಇದ್ದರು.

ಪೋಟೋ 28 ಅಳ್ನಾವರ 2

ಕೃಷಿ ಪರಿಕರಗಳ ಮಾರಾಟಗಾರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.