ಸ್ವರ್ಗ ಸಂಗಮ ಶತಮಾನೋತ್ಸವ ಸಮಿತಿ ರಚನೆ

Contributed byajithswarga@gmail.com|Vijaya Karnataka

ಪೆರ್ಲದ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಪೂರ್ವ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಮಹಾಸಭೆ 'ಸ್ವರ್ಗ ಸಂಗಮ' ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯನ್ನು ರಚಿಸಲಾಯಿತು. ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು.

swarga sangama takes lifetime experience to new heights

ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿಪೂರ್ವ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳ ಮಹಾಸಭೆ ‘ ಸ್ವರ್ಗ ಸಂಗಮ ’ ಶನಿವಾರ ನಡೆಯಿತು.

ಸಾಹಿತಿ, ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಭಟ್ ಕಾರ ್ಯಕ್ರಮ ಉದ್ಘಾಟಿಸಿದರು. ಶಾಲಾ ಶತಮಾನೋತ್ಸವ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶ್ರೀಪಡ್ರೆ ದೇಲಂತರು, ಕಾರಾರ ಯಧ್ಯಕ್ಷರಾಗಿ ಕೆ.ವೈ. ಸುಬ್ರಹ್ಮಣ್ಯ ಭಟ್ , ಕಾರ ್ಯದರ್ಶಿಯಾಗಿ ವೆಂಕಟ ವಿದ್ಯಾಸಾಗರ್ , ಖಜಾಂಚಿ ಹೃಷಿಕೇಶ್ ವಿ.ಎಸ್ ., ಗೌರವ ಸಲಹೆಗಾರರಾಗಿ ವಾಸುದೇವ ಭಟ್ , ರಾಮಯ್ಯ ರೈ ಹಾಗೂ ಇತರರು ಆಯ್ಕೆಯಾದರು. ಉಪ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ವಾರ್ಡ್ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿದ್ಯಾಭಿಮಾನಿಗಳು, ಮತ್ತು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಸ್ವಾಗತಿಸಿದರು. ಶಿಕ್ಷಕ ಪದ್ಮನಾಭ ಆರ್ . ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಎಸ್ . ನಿರೂಪಿಸಿದರು.

25 ಪಿಎಲ್ ಸ್ವರ್ಗ: ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ, ಸಾಹಿತಿ ವಾಸುದೇವ ಭಟ್ ಕಾರ ್ಯಕ್ರಮ ಉದ್ಘಾಟಿಸಿದರು.