ಬಿಜಿಎಸ್ ವಾಣಿಜ್ಯ ವಿಭಾಗದಲ್ಲಿಶೇ.100 ಫಲಿತಾಂಶ
ವಿಕ ಸುದ್ದಿಲೋಕ ಭದ್ರಾವತಿ
ನಗರದ ಸಿದ್ದಾಪುರ ಬೈಪಾಸ್ ರಸ್ತೆಯ ಬಿಜಿಎಸ್ ಸ್ವತಂತ್ರ ಪಿಯು ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿಶೇ.100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 98 ವಿದ್ಯಾರ್ಥಿಗಳ ಪೈಕಿ 57 ಮಂದಿ ಅತ್ಯುನ್ನತ ಶ್ರೇಣಿ, ಉಳಿದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿದ್ಯಾರ್ಥಿನಿ ಪ್ರೇಮಕುಮಾರಿ (593 ಅಂಕ) ಶೇ.98.89 ಫಲಿತಾಂಶದೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದು, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ. ಅರ್ಥಶಾಸ್ತ್ರ, ಬಿಸಿನೆಸ್ ಸ್ಟಡೀಸ್ , ಅಕೌಂಟೆನ್ಸಿ, ಸ್ಟಾತ್ರ್ಯಟಿಸ್ಟಿಕ್ಸ್ ನಲ್ಲಿಪೂರ್ಣಾಂಕ ಗಳಿಸಿದ್ದಾರೆ.
ಡಿ.ವಿ.ನಯನ ವಾಣಿಜ್ಯ ವಿಭಾಗದಲ್ಲಿ(591ಅಂಕ) ಶೇ. 98.5 ಫಲಿತಾಂಶ ಪಡೆದಿದ್ದು, 10ನೇ ಸ್ಥಾನದಲ್ಲಿದ್ದಾರೆ. ಅರ್ಥಶಾಸ್ತ್ರ, ಬಿಸಿನೆಸ್ ಸ್ಟಡೀಸ್ , ಸ್ಟಾತ್ರ್ಯಟಿಸ್ಟಿಕ್ಸ್ ನಲ್ಲಿಪೂರ್ಣಾಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿಕಾಲೇಜಿಗೆ ಶೇ. 99 ಫಲಿತಾಂಶ ಬಂದಿದೆ. ಒಟ್ಟು 170 ವಿದ್ಯಾರ್ಥಿಗಳ ಪೈಕಿ 169 ಮಂದಿ ತೇರ್ಗಡೆಯಾಗಿದ್ದಾರೆ. 68 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿತೇರ್ಗಡೆಯಾಗಿದ್ದಾರೆ. ಇವರಲ್ಲಿಯಶಸ್ವಿನಿ (579ಅಂಕ) ಶೇ. 96.5 ಫಲಿತಾಂಶ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಕೇಶವಮೂರ್ತಿ ತಿಳಿಸಿದ್ದಾರೆ.
9ಭದ್ರಾವತಿ1,2*3
ಪ್ರೇಮಕುಮಾರಿ
ಡಿ.ವಿ.ನಯನ
ಯಶಸ್ವಿನಿ

