9ವೈಡಿಆರ್ 5:
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರು ಗ್ರಾಮದಲ್ಲಿಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಅದ್ಧೂರಿಯಾಗಿ ಜರುಗಿತು.
9ವೈಡಿಆರ್ 5ಎ:
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರು ಗ್ರಾಮದಲ್ಲಿಬಸವೇಶ್ವರ ಜಾತ್ರಾ ಮಹೋತ್ಸವದ ನಿಧಿಮಿತ್ತ ನಡೆದ ಧರ್ಮಸಭೆಯಲ್ಲಿಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಮುಖಂಡ ರಾಚನಗೌಡ ಮುದ್ನಾಳ, ಬಿಜೆಪಿ ರಾಜ್ಯ
ಕಾರ್ಯಕಾರಣಿ ಸದಸ್ಯ ಮಹೇಶ ರೆಡ್ಡಿ ಮುದ್ನಾಳ ಇತರರಿದ್ದರು.
ಬಸವೇಶ್ವರರ ಅದ್ಧೂರಿ ರಥೋತ್ಸವ
ವಿಕ ಸುಧಿದ್ದಿಧಿಲೋಕ ಯಾದಗಿರಿ
ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರು ಗ್ರಾಮದಲ್ಲಿಸಿದ್ದಲಿಂಗೇಶ್ವರ ಪಶ್ಚಿಮಾದ್ರಿ ವಿರಕ್ತಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿಬಸವೇಶ್ವರ ಜಾತ್ರಾ ಮಹೋತ್ಸವದ ಧಿನಿಧಿಮಿತ್ತ ಈಚೆಗೆ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಸುತ್ತಲಿನ ಗ್ರಾಮದ ಭಕ್ತರಲ್ಲದೆ ಪಕ್ಕದ ಜಿಲ್ಲೆಯಿಂದಲೂ ಆಗಮಿಸಿದ್ದ ಭಕ್ತರು ದೇವಾಲಯದಲ್ಲಿಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು. ಸಂಜೆ ರಥೋತ್ಸವ ಸಮಯದಲ್ಲಿಭಕ್ತರು ರಥಕ್ಕೆ ಉತ್ತತ್ತಿ, ಕಬ್ಬಿನ ತುಣುಕ, ಬಾಳೆಹಣ್ಣುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.
ನಂತರ ನಡೆದ ಧರ್ಮಸಭೆಯಲ್ಲಿಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಜಿಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ, ಬಿಜೆಪಿ ಮುಖಂಡ ರಾಚಣ್ಣಗೌಡ ಮುದ್ನಾಳ್ , ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶರೆಡ್ಡಿ ಮುದ್ನಾಳ್ , ಮುಖಂಡರಾದ ವೀರುಪಾಕ್ಷಪ್ಪಗೌಡ ಹಣಮಂತ್ರಾಯಗೌಡ ಪರಸಾಪೂರ, ವಿಶ್ವನಾಥರೆಡ್ಡಿ, ಷಣ್ಮಖಯ್ಯ, ಶರಣಯ್ಯ ಸ್ವಾಮಿ ಉಪಸ್ಥಿತರಿದ್ದರು.
ಈ ವೇಳೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ, ಬಸವೇಶ್ವರ ದೇವಸ್ಥಾನದ ಅಭಿವದ್ಧಿಗೆ ಆರ್ಥಿಕ ನೆರವು ಒದಗಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಏನೇನು ಕೆಲಸ ಆಗಬೇಕೆಂಬ ಪಟ್ಟಿ ಮಾಡಿ ನೀಡಿ, ಅದಕ್ಕೆ ಬೇಕಾದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಗುರುವಾರ ಬೆಳಗಿನ ಜಾವ ಅಗ್ನಿ ತುಳಿಯುವ ಕಾರ್ಯಕ್ರಮ ನಡೆಯಿತು.

