ನಾರಾಯಣ ಗುರು ಯುವ ವೇದಿಕೆ ಮಂಗಳೂರಿನ 27ನೇ ವರ್ಷದ ಬ್ರಹ್ಮಶ್ರೀ ಬಂಗಾರದ ಪದಕ ಪ್ರದಾನ, ಸಾಧನಶೀಲರಿಗೆ ಸನ್ಮಾನ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರದ ಕಾರ್ಯಕ್ರಮ ಆ.16ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗಾರಾವ್ ಪುರಭವನದಲ್ಲಿನಡೆಯಲಿದೆ.ವೇದಿಕೆ ಅಧ್ಯಕ್ಷ ನವೀನ್ ಅಮೀನ್ ಅಧ್ಯಕ್ಷತೆಯಲ್ಲಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಕೃತಿನ್ ಅಮೀನ್ ಉದ್ಘಾಟಿಸುವರು. ಬೆಂಗಳೂರಿನ ಫ್ರಾಮ್ ್ಕ ಸೂಪರಿಂಟೆಂಡಿಂಗ್ ಎಂಜಿನಿಯರ್ ಗೋಕುಲ್ ದಾಸ್ ಬ್ರಹ್ಮಶ್ರೀ ಬಂಗಾರದ ಪದಕ ವಿತರಿಸುವರು. ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ ವಿದ್ಯಾರ್ಥಿವೇತನ ವಿತರಣೆ ಮಾಡುವರು. ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ , ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಪಿ.ವಿ.ಮೋಹನ್ , ಶಾಸಕ ಡಿ. ವೇದವ್ಯಾಸ ಕಾಮತ್ , ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ . ಪೂಜಾರಿ, ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಟ್ರಸ್ಟ್ ಸಂಚಾಲಕ ಸದಾನಂದ ಪೂಜಾರಿ, ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಮೂಳೆ ರೋಗ ತಜ್ಞ ಡಾ. ಉಜ್ವಲ್ ಸುವರ್ಣ, ಕನ್ನಡ, ಹಿಂದಿ ಚಲನಚಿತ್ರ ನಟ ಶಿತಿಲ್ ಪೂಜಾರಿ, ಬಂಗಾರದ ಪದಕ ಪ್ರಾಯೋಜಕ ರತೀಂದ್ರನಾಥ್ ಎಚ್ . ಅತ್ತಾವರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಾಹಿತಿ, ಸಮಾಜ ಸೇವಕ ಆರ್ .ಕೆ.ಬಂಗೇರ, ನಾಟಿ ವೈದ್ಯ ಜನಾರ್ದನ ಎಚ್ .ಎನ್ .ಕೊಳ್ತಮಜಲ್ ಅವರಿಗೆ ವಿಶೇಷ ಸನ್ಮಾನ, ಯಕ್ಷಗಾನ ಕಲಾವಿದೆ ಮತ್ತು ಅಧ್ಯಾಪಕಿ ಮಾಲಿನಿ ಅಂಚನ್ , ಬಹುಮುಖ ಪ್ರತಿಭೆ ಹವೀಶ್ ಆರ್ . ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.