- ಅಧಿಕಾರಿಗಳ ಜತೆಗಿನ ಸಭೆಯಲ್ಲಿಉಪವಿಭಾಗಾಧಿಕಾರಿ ನಟೇಶ್ ಪ್ರಕಟಣೆ
ವಿಕ ಸುದ್ದಿಲೋಕ ತರೀಕೆರೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಮುಗಿದಿದ್ದು, ತರೀಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿಶಾಶ್ವತ ಸ್ಥಳಾಂತರ, ಮರಣ, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಒಟ್ಟು 19,781 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಉಪವಿಭಾಗಾಧಿಕಾರಿ ಎನ್ .ವಿ.ನಟೇಶ್ ಹೇಳಿದರು.
ಅವರು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿಸೋಮವಾರ ಎಸ್ ಐಆರ್ ಕುರಿತು ನಡೆದ ಅಧಿಕಾರಿಗಳ ಸಭೆಯಲ್ಲಿಮಾಹಿತಿ ನೀಡಿದರು.
ಕಳೆದ ಪರಿಷ್ಕರಣೆ ಸಂದರ್ಭದಲ್ಲಿ229 ಮತಗಟ್ಟೆಗಳಿದ್ದು, ಈಗಿನ ಪರಿಷ್ಕರಣೆ ಕಾರ್ಯದಲ್ಲಿತರೀಕೆರೆಯಲ್ಲಿ4, ಅಜ್ಜಂಪುರದಲ್ಲಿ4 ಒಟ್ಟು 8 ಮತಗಟ್ಟೆಗಳು ಹೆಚ್ಚಾಗಿವೆ. ಅರ್ಹ ಮತದಾರರು ಗಾಬರಿಯಾಗುವ ಅವಶ್ಯಕತೆಯಿಲ್ಲ. ಎಲ್ಲತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮತ್ತು ಹೊಸದಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿಮತದಾರರ ದಾಖಲೆಗಳ ಆಧಾರದ ಮೇಲೆ ಪರಿಶೀಲಿಸಿ, ವಿಚಾರಣೆ ನಡೆಸಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ನೋಂದಣಿಯಾದ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿ ಒದಗಿಸಲಾಗುವುದು ಎಂದರು.
ತಹಸೀಲ್ದಾರ್ ಎಚ್ .ಜೆ.ರಶ್ಮಿ, ತಾ.ಪಂ. ಇಒ ಡಾ.ಆರ್ .ದೇವೇಂದ್ರಪ್ಪ, ಸಹಾಯಕ ಕೃಷಿ ನಿರ್ದೇಶಕ ಮಹೇಶ್ , ಎಪಿಎಂಸಿ ಕಾರ್ಯದರ್ಶಿ ಮೋಹನ್ , ಪುರಸಭೆ ಮುಖ್ಯಾಧಿಕಾರಿ ತಾಹೆರತಸ್ನೀಮ್ , ಚುನಾವಣಾ ಶಿರಸ್ತೇದಾರ್ ಕೃಷ್ಣಮೂರ್ತಿ, ಉಪಪ್ರಾಚಾರ್ಯ ಶಿವಪ್ರಸಾದ್ ಹಾಗೂ ಇತರರಿದ್ದರು.
24ತರೀಕೆರೆ2 :
ತರೀಕೆರೆಯಲ್ಲಿಉಪವಿಭಾಗಾಧಿಕಾರಿ ಕಚೇರಿಯಲ್ಲಿಎಸಿ ಎನ್ .ವಿ.ನಟೇಶ್ ಅಧ್ಯಕ್ಷತೆಯಲ್ಲಿಸೋಮವಾರ ಎಸ್ ಐಆರ್ ಕುರಿತು ಅಧಿಕಾರಿಗಳ ಸಭೆ ನಡೆಸಲಾಯಿತು. ತಹಸೀಲ್ದಾರ್ ಎಚ್ .ಜೆ.ರಶ್ಮಿ ಇತರರು ಇದ್ದರು.