ಶ್ರೀ ನಾರಾಯಣಗುರು ಜಯಂತಿ ಪೂರ್ವಭಾವಿ ಸಭೆ

Contributed bynmanjaguni@gmail.com|Vijaya Karnataka
shri narayanaguru jayanti the preliminary meeting was held with enthusiasm
ವಿಕ ಸುದ್ದಿಲೋಕ ಅಂಕೋಲಾ

ಬ್ರಹ್ಮಶ್ರೀ ನಾರಾಯಣಗುರು ಅವರ 172 ನೇ ಜನ್ಮದಿನಾಚರಣೆ ಆ.28 ರಂದು ನಡೆಯಲಿದ್ದು, ತನ್ನಿಮಿತ್ತ ತಹಸೀಲ್ದಾರ್ ಕಚೇರಿಯಲ್ಲಿಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷತೆವಹಿಸಿದ್ದ ತಹಸೀಲ್ದಾರ್ ಎನ್ .ಎಫ್ .ನರೋನಾ ಮಾತನಾಡಿ, ‘‘ಪ್ರತಿವರ್ಷದಂತೆ ಈ ವರ್ಷವೂ ನಾರಾಯಣಗುರು ಜಯಂತಿಯನ್ನು ಸಂಭ್ರಮದಿಂದ ಆಚರಿಸೋಣ’’ ಎಂದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷ ದಾಮೋದರ ಜಿ.ನಾಯ್ಕ ಮಾತನಾಡಿ, ‘‘ಭಾರತ ಕಂಡ ಹಲವು ಹೋರಾಟಗಾರರಿಗೆ ನಾರಾಯಣ ಗುರುಗಳ ಪಾತ್ರ ಕೂಡ ಮಹತ್ವವಾದದ್ದು. ಅಸ್ೊ್ರಶ್ಯತೆಯ ವಿರುದ್ಧ ಹೋರಾಟ ಮಾಡಿ ನ್ಯಾಯ ಸಿಗುವಂತೆ ಮಾಡಿದವರು. ಇಂಥವರ ಆಚರಣೆ ವಿದ್ಯಾರ್ಥಿಗಳ ಎದುರು ನಡೆದರೆ ಅವರಿಗೆ ನಾರಾಯಣ ಗುರುಗಳ ಸಂದೇಶ ತಲುಪಿಸಿದಂತಾಗುತ್ತದೆ’’ ಎಂದರು.

ಚರ್ಚೆಯ ಬಳಿಕ ಆ.28 ರಂದು ಬೆಳಗ್ಗೆ 11ಕ್ಕೆ ಕೆಎಲ್ ಇ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿಜಯಂತಿ ಆಚರಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿಶಿರಸ್ತೇದಾರ ಗಿರೀಶ ಬಾನಾವಳಿಕರ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಉಪಾಧ್ಯಕ್ಷ ರಮೇಶ ಎನ್ . ನಾಯ್ಕ, ರಮೇಶ ಎಸ್ . ನಾಯ್ಕ, ಏಕನಾಥ ನಾಯ್ಕ, ಉಮೇಶ ಎನ್ . ನಾಯ್ಕ, ಮಂಜುಳಾ ನಾಯ್ಕ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಜೀವನ ನಾಯ್ಕ, ನಾಗರಾಜ ಮಂಜಗುಣಿ, ಸಿಬ್ಬಂದಿ ತೇಜಸ್ ನಾಯಕ ಇದ್ದರು.

25ಅಂಕೋಲಾ6

ಅಂಕೋಲಾದ ತಹಸೀಲ್ದಾರ್ ಕಚೇರಿಯಲ್ಲಿ ನಾರಾಯಣಗುರು ಜಯಂತಿಯ ಪೂರ್ವಭಾವಿ ಸಭೆ ನಡೆಯಿತು.