(ಮಸ್ಟ್ ಬಳಸಿ..) ಪ್ರತ್ಯೇಕ ಮೈಸೂರು ರಾಜ್ಯ ರಚನೆಗೆ ಒತ್ತಾಯಿಸಿ ಪ್ರತಿಭಟನೆ (ಫೋಟೊಗಳು ನ್ಯೂಸ್ ರಾರ ಯಪ್ ನಲ್ಲಿವೆ)

Contributed bypunyavathi.hp@timesgroup.com|Vijaya Karnataka
protest demanding separate mysore state in the capital city
ವಿಕ ಸುದ್ದಿಲೋಕ ಬೆಂಗಳೂರು

ರಾಜ್ಯದ ಕೆಲ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಮೈಸೂರು ರಾಜ್ಯ ರಚಿಸಬೇಕು ಎಂದು ಒತ್ತಾಯಿಸಿ ಉದ್ದೇಶಿತ ಪ್ರತ್ಯೇಕ ಮೈಸೂರು ರಾಜ್ಯ ಪುನರ್ರಚನಾ ಅಭಿಯಾನ ಕೇಂದ್ರ ಸಮಿತಿ ವತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ರಾಮನಗರ (ಬೆಂಗಳೂರು ದಕ್ಷಿಣ), ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಕಾರವಾರ ಜಿಲ್ಲೆಗಳನ್ನು ಮೈಸೂರು ರಾಜ್ಯವಾಗಿ ರಚಿಸಬೇಕು. ಉತ್ತರ ಕರ್ನಾಟಕದ 14 ಜಿಲ್ಲೆಗಳನ್ನು ಒಳಗೊಂಡ ಮತ್ತೊಂದು ರಾಜ್ಯ ರಚಿಸುವುದು ಅತ್ಯಂತ ಸೂಕ್ತ ಎಂದು ಸಮಿತಿಯ ರಾಜ್ಯಾಧ್ಯಕ್ಷ ಮರಿಮಲ್ಲಯ್ಯ ಒತ್ತಾಯಿಸಿದರು.

ಜನಸಂಖ್ಯೆ ಪ್ರಕಾರ ಆಡಳಿತದ ದೃಷ್ಟಿಯಿಂದ ಸುಮಾರು 3.5 ಕೋಟಿಗೆ ಅನ್ವಯವಾಗುವಂತೆ ರಾಜ್ಯವನ್ನು ಸ್ಥಾಪನೆ ಮಾಡುವುದು ಸಮಂಜಸ. ಹಾಗೆಯೇ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೂ ಮುನ್ನ ಅಂದರೆ 2028ರೊಳಗೆ ಕ್ಷೇತ್ರಗಳ ಮರು ವಿಂಗಡಣೆ ಮಾಡಬೇಕಿದೆ. ಈ ಪ್ರಕ್ರಿಯೆಗೂ ಮೊದಲೇ ಪ್ರತ್ಯೇಕ ರಾಜ್ಯ ರಚನೆ ಮಾಡಿದರೆ ರಾಜ್ಯ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿಆಗ್ರಹಿಸಿದ್ದಾರೆ.

ಏಕೀಕೃತ ಕರ್ನಾಟಕ ದಲ್ಲಿಎರಡು ಪ್ರತ್ಯೇಕ ರಾಜ್ಯಗಳನ್ನಾಗಿ ರಚಿಸುವುದು ಸೂಕ್ತ. ಇದರಿಂದ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕ ಸಮಗ್ರ ಯೋಜನೆ ರೂಪಿಸಲು ಸಾಧ್ಯವಾಗಲಿದೆ ಎಂದರು. ಪ್ರತಿಭಟನೆಯಲ್ಲಿಸಮಿತಿ ಕಾರ್ಯದರ್ಶಿ ಎಚ್ . ರಮೇಶ್ ಮತ್ತಿತರರು ಪಾಲ್ಗೊಂಡಿದ್ದರು.