ನಾಳೆಯಿಂದ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

Contributed bychandruhiremath06@gmail.com|Vijaya Karnataka
ganesh idol making workshop starts tomorrow
*ಚಿತ್ರ:ಗಣೇಶ*

**
ನಾಳೆಯಿಂದ ಗಣೇಶ ಮೂರ್ತಿ ತಯಾರಿಕೆ ಕಾರ್ಯಾಗಾರ

ವಿಕ ಸುದ್ದಿಲೋಕ ಕಲಬುರಗಿ

ನಗರದ ಎನ್ ವಿ ಪದವಿ ಮಹಾವಿದ್ಯಾಲಯದ ಲಲಿತಕಲಾ ವಿಭಾಗದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟ ಕಾರ್ಯಾಗಾರವನ್ನು ಆ.27 ಮತ್ತು 28ರಂದು ಕಾಲೇಜಿನ ಗ್ರಂಥಾಲಯದ ಕೊಠಡಿಯಲ್ಲಿಆಯೋಜಿಸಲಾಗಿದೆ. ಆ.27ರಂದು ಬೆಳಗ್ಗೆ 11ಕ್ಕೆ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಎನ್ ವಿ ಸಂಸ್ಥೆಯ ಕ್ರೀಡಾ ಸಮಿತಿ ಅಧ್ಯಕ್ಷ ಸುಹಾಸ್ ಖಣಗೆ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಶಿಲ್ಪಕಲಾವಿದ ರಮೇಶ ಪಿ.ಬಡಿಗೇರ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಪ್ರಾಚಾರ್ಯ ಡಾ.ದಯಾನಂದ ಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದು, ಮಹಾವಿದ್ಯಾಲಯದ ನಿರ್ದೇಶಕ ಗೋವಿಂದ ಪೂಜಾರ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.