ಓದುಗರಿಗೆ ವಿಕ ಕರೆ ಉದ್ಯಾನಗಳು ಮತ್ತು ತೋಟಗಾರಿಕೆ ಫಾಮ್ ರ್ ಗಳ ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಹಾಗೂ ಇತರ ಉದ್ದೇಶಗಳಿಗೆ ಪರಭಾರೆ ಮಾಡಲು ಅವಕಾಶ ಕಲ್ಪಿಸುವ ವಿಧೇಯಕಕ್ಕೆ ಸರಕಾರ ಯಾವುದೇ ಚರ್ಚೆಯಿಲ್ಲದೆ ಅನುಮೋದನೆ ಪಡೆದುಕೊಂಡಿದೆ. ಪಾರ್ಕ್ಗಳ ಶೇ.5 ರಷ್ಟು ಭೂಮಿಯನ್ನು ಮಾರಾಟ ಮಾಡಲು ಗೇಣಿ, ದೇಣಿಗೆ, ವಿನಿಮಯ, ಅಡಮಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿಸಾರ್ವಜನಿಕ ಹಿತಾಸಕ್ತಿ ಇದೆ ಎಂಬುದು ಸರಕಾರದ ವಾದವಾದರೆ, ಬೆಂಗಳೂರಿನಲ್ಲಿವಿಶಾಲವಾಗಿರುವ ಪಾರ್ಕ್ಗಳÜನ್ನು ಸ್ವಾಹಾ ಮಾಡುವುದು ಸರಕಾರದ ಉದ್ದೇಶ ಎಂಬುದು ಪ್ರತಿಪಕ್ಷಗಳ ಆತಂಕ. ಈ ಕುರಿತು ನಿಮಗೇನು ಅನಿಸುತ್ತದೆ ?ಹಸಿರು ವಲಯದ ರಕ್ಷಣೆ ಕುರಿತು ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು 50 ರಿಂದ 100 ಪದಗಳ ಮಿತಿಯಲ್ಲಿ, ನಿಮ್ಮ ಹೆಸರು, ಫೋಟೊ ಮತ್ತು ವಿಳಾಸದೊಂದಿಗೆ ನಮಗೆ ಬರೆದು ಕಳುಹಿಸಿ.