ಅಡಕೆ ಉಪ ಉತ್ಪನ್ನ ನಿಷೇಧ ಆದೇಶ ರದ್ದತಿಗೆ ಆಗ್ರಹ

Contributed bymkrtth@gmail.com|Vijaya Karnataka
farmers protest against banana product ban order
ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಲದಿಂದ ಸಿಎಂಗೆ ಮನವಿ

ಅಡಕೆ ಉಪ ಉತ್ಪನ್ನ ನಿಷೇಧ ಆದೇಶ ರದ್ದತಿಗೆ ಆಗ್ರಹ
ವಿಕಸುದ್ದಿಲೋಕ ತೀರ್ಥಹಳ್ಳಿ (ಶಿವಮೊಗ್ಗ)

ರಾಜ್ಯವು ದೇಶದಲ್ಲಿಶೇ .60ಕ್ಕಿಂತ ಹೆಚ್ಚು ಅಡಕೆ ಬೆಳೆಯುವ ಪ್ರದೇಶ ಹೊಂದಿದ್ದು, ಅಡಕೆ ಉಪ ಉತ್ಪನ್ನಗಳನ್ನು ನಿಷೇಧಿಸುವ ರಾಜ್ಯ ಸರಕಾರದ ಆದೇಶದಿಂದ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾಮಂಡಲ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

ರಾಜ್ಯದ 144 ತಾಲೂಕುಗಳ 5.51ಲಕ್ಷ ಎಕರೆ ಪ್ರದೇಶದಲ್ಲಿಅಡಕೆ ಬೆಳೆಯಲಾಗುತ್ತಿದೆ. ಸುಮಾರು 5 ಲಕ್ಷ ಕುಟುಂಬಗಳು ನೇರವಾಗಿ, ಇತರೆ ಅವಲಂಬಿತ 10 ಲಕ್ಷ ಕುಟುಂಬಗಳ ಬದುಕಿಗೆ ಅಡಕೆ ಆಧಾರವಾಗಿದೆ. ಅಡಕೆ ಬೆಳೆಯುವ ರೈತರ ಕುರಿತು ರಾಜ್ಯ ಸರಕಾರ ವಿಶೇಷ ಗಮನಹರಿಸಿ ಆದೇಶ ವಾಪಸ್ ಪಡೆಯಬೇಕು ಎಂದು ನಿಯೋಗ ಆಗ್ರಹಿಸಿತು.

ಈ ಸಂದರ್ಭ ಅಡಕೆ ಬೆಳೆಯುವ ಪ್ರದೇಶದ ಶಾಸಕರಾದ ವಿ.ಸುನಿಲ್ ಕುಮಾರ್ , ಗುಬ್ಬಿ ಶ್ರೀನಿವಾಸ್ , ಕೋನರೆಡ್ಡಿ, ಡಿ.ಜಿ.ಶಾಂತನಗೌಡ, ಕಿರಣ್ ಕುಮಾರ್ ಕೊಡ್ಗಿ, ವೇದವ್ಯಾಸ್ ಕಾಮತ್ , ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.

13ತೀರ್ಥ-4-

ತೀರ್ಥಹಳ್ಳಿ ಶಾಸಕ, ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾ ಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿಗುರುವಾರ ಬೆಂಗಳೂರಿನಲ್ಲಿಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.