ಸಾಂಸ್ಕೃತಿಕ ಮೌಲ್ಯ ಯುವ ಪೀಳಿಗೆಯಿಂದ ದೂರವಾಗದಿರಲಿ

Contributed byprakashvkhsn@gmail.com|Vijaya Karnataka
the importance of religious values to the youth shambhunath swamiji
ಕಾರ ್ಯಕ್ರಮದಲ್ಲಿಶ್ರೀಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಹೇಳಿಕೆ

ವಿಕ ಸುದ್ದಿಲೋಕ ಹಾಸನ
ಆಧುನಿಕ ಯುಗದಲ್ಲಿಯುವಪೀಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ದೂರವಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹಾಸನದ ಶ್ರೀಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದರು.

ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಜವನೇಹಳ್ಳಿ ಮಠದಲ್ಲಿಆಯೋಜಿಸಲಾಗಿದ್ದ ತ್ರಿಮೂರ್ತಿ ಗದ್ದುಗೆ ಸ್ಮರಣೋತ್ಸವ ಸಮಾರಂಭದಲ್ಲಿಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘‘ಗುರು ಮತ್ತು ಭಕ್ತರ ನಡುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು, ಹಿರಿಯರು ಮಕ್ಕಳಿಗೆ ನಮ್ಮ ಪರಂಪರೆ, ಧಾರ್ಮಿಕ ಆಚರಣೆಗಳು ಹಾಗೂ ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ಕಲಿಸಬೇಕು.ಭಾರತೀಯ ಸಂಸ್ಕೃತಿಯಲ್ಲಿಗುರು-ಶಿಷ್ಯ ಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಗುರುಗಳು ಕೇವಲ ಧಾರ್ಮಿಕ ಬೋಧನೆ ಮಾಡುವವರಲ್ಲ, ಸಮಾಜವನ್ನು ಸರಿಯಾದ ದಾರಿಯಲ್ಲಿಮುನ್ನಡೆಸುವ ಮಾರ್ಗದರ್ಶಕರು ಮತ್ತು ಸಂಸ್ಕಾರದ ದೀಪ ಬೆಳಗಿಸುವ ಶಕ್ತಿಯಾಗಿದ್ದಾರೆ,’’ಎಂದರು.

‘‘ಗುರು ಮತ್ತು ಭಕ್ತರ ನಡುವಿನ ಸಂಬಂಧ ಹಾಲು ಮತ್ತು ಸಕ್ಕರೆಯಂತೆ ಒಂದಕ್ಕೊಂದು ಬೆರೆತು ಮಧುರತೆಯನ್ನು ಪಸರಿಸುವಂತಿರಬೇಕು. ಹಾಲಿನಲ್ಲಿಸಕ್ಕರೆ ಬೆರೆತಾಗ ಅದರ ಸಿಹಿ ಹಾಲಿನ ಪ್ರತಿಯೊಂದು ಭಾಗದಲ್ಲೂಹರಡುವಂತೆ, ಗುರುಗಳ ಮಾರ್ಗದರ್ಶನ ಮತ್ತು ಭಕ್ತರ ನಿಷ್ಠೆ ಒಂದಾದಾಗ ಸಮಾಜದಲ್ಲಿಉತ್ತಮ ಸಂಸ್ಕಾರ, ಸದಾಚಾರ ಹಾಗೂ ಧಾರ್ಮಿಕ ಮೌಲ್ಯಗಳು ಬೆಳೆಯಲು ಸಾಧ್ಯವಾಗುತ್ತದೆ,’’ಎಂದು ಹೇಳಿದರು.

‘‘ಗುರು ಮತ್ತು ಭಕ್ತರ ನಡುವೆ ಪರಸ್ಪರ ವಿಶ್ವಾಸ, ಗೌರವ ಹಾಗೂ ಆತ್ಮೀಯತೆ ಇರಬೇಕು. ಭಕ್ತರು ಕೇವಲ ಸಂಕಷ್ಟದ ಸಂದರ್ಭದಲ್ಲಿಮಾತ್ರ ದೇವರು ಮತ್ತು ಗುರುಗಳನ್ನು ನೆನೆಯದೆ, ಜೀವನದ ಪ್ರತಿಯೊಂದು ಹಂತದಲ್ಲೂಧರ್ಮ, ಸಂಸ್ಕಾರ ಮತ್ತು ಸತ್ಪಥದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಆಗ ಮಾತ್ರ ಮಾನವ ಜೀವನ ಸಾರ್ಥಕವಾಗಲು ಸಾಧ್ಯ,’’ಎಂದು ತಿಳಿಸಿದರು.

‘‘ದೈವ, ಗುರು ಮತ್ತು ತೀರ್ಥ ಕ್ಷೇತ್ರಗಳು ನೆಲೆಸಿರುವ ಸ್ಥಳಗಳಿಗೆ ಸದಾ ವಿಶೇಷ ಮಹತ್ವವಿರುತ್ತದೆ. ಇಂತಹ ಪವಿತ್ರ ಸ್ಥಳಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿ ಮಾತ್ರವಲ್ಲದೆ, ಸಮಾಜದಲ್ಲಿಶಾಂತಿ, ಸೌಹಾರ್ದತೆ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಕಾಲ ಬದಲಾದರೂ ನಮ್ಮ ಧಾರ್ಮಿಕ ಪರಂಪರೆ, ಮಠ-ಮಂದಿರಗಳ ಮೇಲಿನ ಭಕ್ತಿ ಹಾಗೂ ಹಿರಿಯರು ಹಾಕಿಕೊಟ್ಟಿರುವ ಸಂಸ್ಕಾರದ ಹಾದಿಯನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ,’’ಎಂದು ಹೇಳಿದರು.

‘‘ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಸಂಗಮೇಶ್ವರ ತ್ರಿಮೂರ್ತಿ ಗದ್ದುಗೆಗೂ ತನ್ನದೇ ಆದ ವಿಶಿಷ್ಟ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವಿದೆ. ಪುರಾತನ ಇತಿಹಾಸ ಹೊಂದಿರುವ ಶ್ರೀಕ್ಷೇತ್ರ ಸಂಗಮೇಶ್ವರ ಮಠದ ಅಭಿವೃದ್ಧಿಗೆ ಭಕ್ತರ ಸಹಕಾರ ಅತ್ಯಗತ್ಯವಾಗಿದೆ,’’ಎಂದು ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಜವನೇಹಳ್ಳಿ ಮಠದ ಶ್ರೀಸಂಗಮೇಶ್ವರ ಸ್ವಾಮೀಜಿ ವಹಿಸಿದ್ದರು. ತ್ರಿಮೂರ್ತಿ ಗದ್ದುಗೆ ಸ್ಮರಣೋತ್ಸವ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ ್ಯಕ್ರಮಗಳು ಹಾಗೂ ಭಕ್ತರ ಸಮಾಗಮ ನಡೆಯಿತು.

ಕಂಪ್ಲಿಮಠದ ಶ್ರೀಗಳು, ಬನವಾಸಿ ಶ್ರೀಗಳು, ಶ್ರೀಅಭಿನವ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಧಾರ್ಮಿಕ ಮುಖಂಡರು ಭಾಗವಹಿಸಿ ಆಶೀರ್ವಚನ ನೀಡಿದರು.

ಇದೇ ವೇಳೆ ಮಾಜಿ ಶಾಸಕ ಹಾಗೂ ಎಂಸಿಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಆರ್ . ಗುರುದೇವ್ , ಕಸಾಪ ಮಾಜಿ ಅಧ್ಯಕ್ಷ ಎಚ್ .ಬಿ. ಮದನ್ ಗೌಡ, ಶ್ರೀಮಠದ ಸಮಿತಿ ಅಧ್ಯಕ್ಷ ಉಮೇಶ್ , ಕಟ್ಟಾಯ ಶಿವಕುಮಾರ್ , ಕಂಚಮಾರನಹಳ್ಳಿ ಕಾಂತರಾಜ್ , ಜೆ.ಆರ್ .ಕೆಂಚೇಗೌಡ, ರವಿನಾಕಲಗೂಡು, ಶೋಭನ್ ಬಾಬು, ಯು.ಎಸ್ . ಬಸವರಾಜು, ಉಮೇಶ್ , ಸುರೇಂದ್ರ ಕುಮಾರ್ , ಮಲ್ಲಿಕಾರ್ಜುನ್ , ಮಹಾನಗರ ಪಾಲಿಕೆ ಮಾಜಿ ಮೇಯರ್ ಚಂದ್ರೇಗೌಡ, ನೀತು ಜೈನ್ ಮತ್ತಿತರರು ಹಾಜರಿದ್ದರು.