ಹೆಚ್ಚುತ್ತಿರುವ ಆರ್ಥಿಕ ಸಂಸ್ಥೆಗಳು ಹಾಗೂ ಸ್ಪರ್ಧಾತ್ಮಕ ಬೆಳವಣಿಗೆಯ ನಡುವೆಯೂ ಪ್ರಸಕ್ತ ಸಾಲಿನಲ್ಲಿವಿಕಾಸ ಬ್ಯಾಂಕ್ 72.91 ಲಕ್ಷ ರೂ., ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.ಪಟ್ಟಣದಲ್ಲಿಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.
‘‘ಬ್ಯಾಂಕ್ ಒಟ್ಟು 11,027 ಸದಸ್ಯರನ್ನು ಹೊಂದಿದ್ದು, ಶೇರು ಬಂಡವಾಳ ರೂ. 989.76 ಲಕ್ಷ, ಕಾಯ್ದಿಟ್ಟ ನಿಧಿ ಮತ್ತು ಇತರೇ ನಿಧಿಗಳು ರೂ. 1145.83 ಲಕ್ಷ ಇರುತ್ತದೆ. ಬ್ಯಾಂಕಿನ ಠೇವುಗಳು 20428.98 ಲಕ್ಷ ರೂ. ಇದ್ದು, ಕಳೆದ ಸಾಲಿಗಿಂತ ಶೇ.13.37 ಪ್ರಮಾಣದ ಹೆಚ್ಚಳ ಸಾಧಿಸಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.92.60 ಇದ್ದು, ನಿವ್ವಳ ಎನ್ ಪಿಎ ಪ್ರಮಾಣ ಶೇ.7.27ರಷ್ಟಿದೆ. ತಾಂತ್ರಿಕತೆಯ ಅಳವಡಿಕೆಯಲ್ಲಿಬ್ಯಾಂಕ್ ಮುಂಚೂಣಿಯಲ್ಲಿದ್ದುಬ್ಯಾಂಕಿನ ಗ್ರಾಹಕರು ಎಟಿಎಂ, ಸಿಡಿಎಂ ಇ-ಕಾಮರ್ಸ್ , ಪಿಒಎಸ್ ., ಮೊಬೈಲ್ ಬ್ಯಾಂಕಿಂಗ್ ಮುಂತಾದ ಡಿಜಿಟಲ್ ಸೇವೆಗಳನ್ನು ಬಳಸುತ್ತಿದೆ. ಯುಪಿಐ ಸೇವೆ ನೀಡಲು ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆ ಆ. 27ರ ಸಂಜೆ 4ಕ್ಕೆ ಪಟ್ಟಣದ ಅಡಕೆ ಭವನದಲ್ಲಿನಡೆಯಲಿದೆ’’ ಎಂದರು.
ಬ್ಯಾಂಕಿನ ಉಪಾಧ್ಯಕ್ಷ ನರಸಿಂಹ ಬೋಳಪಾಲ್ , ನಿರ್ದೇಶಕರಾದ ಡಿ .ಶಂಕರ ಭಟ್ಟ, ಸದಾನಂದ ಭಟ್ಟ, ಎಸ್ ಕೆ ಭಾಗ್ವತ, ಎಸ್ .ಎಂ ಭಟ್ಟ ,ರಾಜೇಂದ್ರ ಬದ್ದಿ, ಲೋಕೇಶ್ ಗಿಡ್ಡನ್ , ವಿಜಯಶ್ರೀ ವೈದ್ಯ, ಪ್ರಿಯಾ ವಿ. ಗಾಂವ್ಕರ, ರವಿ ಹುಳ್ಸೆ, ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ರಾಜೇಶ ಪಿ .ಬಿಳಗೀಕರ್ ಇದ್ದರು.
24ಎಸ್ಸಾರೆಸ್ 2
ಯಲ್ಲಾಪುರದಲ್ಲಿವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಮಾಹಿತಿ ನೀಡಿದರು.