ಮೂಢನಂಬಿಕೆ ತೊರೆದು ಅನ್ನದ ಮಹತ್ವ ಅರಿಯಿರಿ

Contributed byvenkatesh.narasappa@timesgroup.com|Vijaya Karnataka
importance of nutrition understanding the need for increased focus on womens health
ಚಿತ್ರ: 13ಜಿಎಲ್ ಬಿ31

‘‘ ಮಹಿಳಾ ಆರೋಗ್ಯ ಮತ್ತು ಪೌಷ್ಟಿಕ ಆಹಾರ ’’ ಕುರಿತು ಉಪನ್ಯಾಸ ಕಾರ್ಯಕ್ರಮ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆಯಿತು.
**

ರೆಡ್ ಕ್ರಾಸ್ ಸಮಿತಿ ಸಂಚಾಲಕ ಡಾ.ಪದ್ಮಾವತಿ ಧನ್ನಿ ಹೇಳಿಕೆ | ಮಹಿಳಾ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕುರಿತು ಉಪನ್ಯಾಸ

ಮೂಢನಂಬಿಕೆ ತೊರೆದು ಅನ್ನದ ಮಹತ್ವ ಅರಿಯಿರಿ

ವಿಕ ಸುದ್ದಿಲೋಕ ಕಲಬುರಗಿ

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಲಬುರಗಿ, ರೆಡ್ ಕ್ರಾಸ್ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆ ಆಶ್ರಯದಲ್ಲಿಬಸವ ಪಂಚಮಿ ಅಂಗವಾಗಿ ‘‘ಮಹಿಳಾ ಆರೋಗ್ಯ ಮತ್ತು ಪೌಷ್ಟಿಕ ಆಹಾರ’’ ಕುರಿತು ಉಪನ್ಯಾಸ ಕಾರ್ಯಕ್ರಮ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಆಯೋಜಿಸಲಾಯಿತು.

ರೆಡ್ ಕ್ರಾಸ್ ಸಮಿತಿ ಸಂಚಾಲಕ ಡಾ.ಪದ್ಮಾವತಿ ಧನ್ನಿ ಪ್ರಾಸ್ತಾವಿಕ ಮಾತನಾಡಿ, ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವ ಅಗತ್ಯವಿದೆ. ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಗಡಿಕೇಶ್ವರ ಚಿಂಚೋಳಿ ವಿಭಾಗದ ಮುಖ್ಯದಂತ ಆರೋಗ್ಯ ಅಧಿಕಾರಿ ಡಾ.ಸಂಧ್ಯಾ ಎಸ್ .ಕಾನೆಕರ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಹಾಗೂ ಗರ್ಭಿಣಿಯರಲ್ಲಿರಕ್ತಹೀನತೆ ಸಮಸ್ಯೆ ಹೆಚ್ಚಾಗಿದ್ದು, ಪೌಷ್ಟಿಕ ಆಹಾರದ ಕೊರತೆ ಇದಕ್ಕೆ ಪ್ರಮುಖ ಕಾರಣಗಳಲ್ಲಿಒಂದಾಗಿದೆ. ದೈನಂದಿನ ಆಹಾರದಲ್ಲಿಕಬ್ಬಿಣಾಂಶ, ಪ್ರೊಟೀನ್ , ಜೀವಸತ್ವಗಳು ಸೇರಿ ಅಗತ್ಯ ಪೋಷಕಾಂಶಗಳನ್ನು ಒಳಗೊಂಡ ಆಹಾರ ಸೇವಿಸುವಂತೆ ಸಲಹೆ ನೀಡಿದರು.

ವೇದಿಕೆಯ ವಿಭಾಗ ಸಂಚಾಲಕ ಸುನಿಲ ಮಾರುತಿ ಮಾನಪಡೆ, ಜಿಲ್ಲಾ ಸಂಚಾಲಕ ನಾಗೇಂದ್ರ ಜವಳಿ, ಪ್ರಾಚಾರ್ಯ ಡಾ.ಪ್ರಕಾಶ್ ಮೋರಗೆ ಮಾತನಾಡಿದರು.

ಅಂಬಿಕಾ, ಅಶ್ವಿನಿ, ಸಂಗಮೇಶ, ಡಾ.ಜ್ಯೋತಿ ಬಾಳೆಗಾರ, ಡಾ.ಮೀನಾಕ್ಷಿ ವಿಜಯಕುಮಾರ, ಡಾ.ಕನ್ಯಾಕುಮಾರಿ, ಡಾ.ಸುನಂದಾ ಭತಾಷೆ, ಡಾ.ಬಸಮ್ಮ, ಡಾ.ಶಶಿಕಾಂತ ಎಸ್ .ಪಾಟೀಲ ಇತರರಿದ್ದರು.