ಗ್ರಾಮದ ಪೊಲೀಸ್ ಠಾಣೆ ವ್ಯಾಪ್ತಿಯ ಮುರನಾಳ ಪು.ಕೇಂ. ಬಳಿ ಮುಖ್ಯರಸ್ತೆಯಲ್ಲಿದರೋಡೆಗೆ ಹೊಂಚು ಹಾಕಿದ್ದ ಆರು ಜನ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬಾಗಲಕೋಟೆ ನವನಗರದ ಕುಮಾರ ಶಿವಾಳೆ, ಹಣಮಂತ ಗ್ವಾಡಿಕಟ್ಟಿಯವರ, ವಿದ್ಯಾಗಿರಿಯ ತೋಹಿದ ಸಾಸಬಾಳ, ವಿಜಯಪುರದ ಲಕ್ಷಿತ್ರ್ಮೕಕಾಂತ ಕಾಶಿನಾಥ, ಭೀಮಣ್ಣ ಚಲವಾದಿ, ಹುನಗುಂದದ ಪರಶುರಾಮ ಭಜಂತ್ರಿ ಬಂಧಿತ ಆರೋಪಿಗಳು. ಕಾರ್ , ಬೈಕ್ , ಮೊಬೈಲ್ ಸೇರಿದಂತೆ ಒಟ್ಟು ಅಂದಾಜು 5 ಲಕ್ಷತ್ರರೂ. ಮೌಲ್ಯದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ , ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ., ಡಿವೈಎಸ್ ಪಿ ಗಜಾನನ ಸುತಾರ, ಸಿಪಿಐ ಆರ್ .ಎಸ್ .ಬಿರಾದಾರ ಮಾರ್ಗದರ್ಶನದಲ್ಲಿಕಲಾದಗಿ ಪಿಎಸ್ ಐ ಪ್ರವೀಣ ಬೀಳಗಿ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಬಂಧಿಸಿದೆ. ತಂಡದ ಕಾರ್ಯಕ್ಕೆ ಎಸ್ ಪಿ ನಗದು ಬಹುಮಾನ ಘೋಷಿಸಿದ್ದಾರೆ.
------------
ಕೆಎಲ್ ಡಿಜಿ-24-2
ದರೋಡೆಕೋರರಿಂದ ವಶಪಡಿಸಿಕೊಂಡ ವಸ್ತುಗಳೊಂದಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ.