ಮುದಗಲ್ -ಅಕ್ರಮ ಮರಳು ಸಾಗಣೆ: 45,400 ರೂ. ದಂಡ

Contributed bydnkodihal@gmail.com|Vijaya Karnataka
illegal sand transportation in mudgal fine of rs 45400
ಅಕ್ರಮ ಮರಳು ಸಾಗಣೆ : 45,400 ರೂ. ದಂಡ

ವಿಕ ಸುದ್ದಿಲೋಕ ಮುದಗಲ್
ಪಟ್ಟಣ ಹೊರವಲಯದಿಂದ ಲಿಂಗಸುಗೂರಿಗೆ ಸೋಮವಾರ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ತಡೆದು ಪರಿಶೀಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಲಾರಿ ಮಾಲೀಕ ಬಸವರಾಜ ಅವರಿಗೆ 45,400 ರೂ. ದಂಡ ವಿಧಿಸಿದ್ದಾರೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸನೀತ್ ನೇತೃತ್ವದಲ್ಲಿಕಾರ್ಯಾಚರಣೆ ನಡೆಸಲಾಗಿದೆ. ‘‘ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಗೆ ನಂಬರ್ ಪ್ಲೇಟ್ ಇಲ್ಲದಿರುವುದು ಕೂಡ ಗಮನಕ್ಕೆ ಬಂದಿದ್ದು, ಈ ಕುರಿತು ಆರ್ ಟಿಒ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಪಟ್ಟಣದ ಮೂಲಕ ನೆರೆಯ ಜಿಲ್ಲೆಗಳಿಗೆ ಪರವಾನಗಿ ಇಲ್ಲದೇ ಅಕ್ರಮವಾಗಿ ಕಲ್ಲುಸಾಗಣೆ ಮಾಡುತ್ತಿರುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು, ಕಲ್ಲುಸಾಗಣೆಗೆ ಕಡಿವಾಣ ಹಾಕಲು ಇಲಾಖೆಯಿಂದ ನಿರಂತರ ತಪಾಸಣೆ ಹಾಗೂ ಕಾನೂನು ಕ್ರಮ ಮುಂದುವರಿಸಲಾಗುವುದು,’’ ಎಂದು ಅಧಿಕಾರಿ ಸನೀತ್ ತಿಳಿಸಿದ್ದಾರೆ.

* ಪೋಟೋ(ಆರ್ .ಸಿ.ಹೆಚ್ 24ಮುದಗಲ್ 02)

ಮುದಗಲ್ ಹೊರವಲಯದಿಂದ ಲಿಂಗಸುಗೂರು ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ತಡೆದು ಪರಿಶೀಲಿಸಿದರು.