ಕೆ.ಆರ್ .ಪೇಟೆ/ ಎರಡನೇ ಪುಟಕ್ಕೆ ಲೀಡ್

Contributed byballekeremanju@gmail.com|Vijaya Karnataka
sanitation workers unpaid crisis in kr pet
ಸಂಕಷ್ಟದಲ್ಲಿಸ್ವಚ್ಛತಾ ಕಾರ್ಮಿಕರು

- ಸಕಾಲದಲ್ಲಿಸಿಗದ ವೇತನ | ಸಂಬಳಕ್ಕಾಗಿ ಅಲೆಯುತ್ತಿರುವ ನೌಕರರು
ಬಳ್ಳೇಕೆರೆ ಮಂಜುನಾಥ್ ಕೆ.ಆರ್ .ಪೇಟೆ

ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರು ಸಕಾಲಿಕವಾಗಿ ವೇತನ ಸಿಗದೆ ಕಂಗಲಾಗಿದ್ದಾರೆ.

ಪ್ರತಿ ತಿಂಗಳು ನಿಯಮಿತವಾಗಿ ವೇತನ ಬಾರದೇ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು, ವೇತನಕ್ಕಾಗಿ ಅಲೆಯುವುದು ಸಾಮಾನ್ಯವಾಗಿದೆ.

ಪ್ರತಿ ದಿನ ಮನೆ ಮನೆಯಿಂದ ಕಸ ಸಂಗ್ರಹಿಸುವುದರೊಂದಿಗೆ ಪಟ್ಟಣದ ಎಲ್ಲಾರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ವೇತನ ಬಂದಿಲ್ಲ. ಸಕಾಲಿಕವಾಗಿ ವೇತನ ನೀಡದ ಪುರಸಭೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕೆಲಸಕ್ಕೆ ತಕ್ಕ ಕೂಲಿ ನೀಡುವಲ್ಲಿವಿಳಂಬವೇಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪುರಸಭೆಯಲ್ಲಿ36 ಮಂದಿ ಪೌರ ಕಾರ್ಮಿಕರಿದ್ದು, ಅದರದಲ್ಲಿ25 ಮಂದಿ ಕಾಯಂ ನೌಕರರು ಇದ್ದಾರೆ. ಪುರಸಭೆಯ ಕ್ಷೇಮಾಭಿವೃದ್ಧಿ ನಿಧಿಯಿಂದ 9 ದಿನಗೂಲಿ ನೌಕರರಿಗೆ ವೇತನ ನೀಡಲಾಗುತ್ತಿದೆ. ಹಾಲಿ ಇರುವ 25 ಮಂದಿ ಕಾಯಂ ನೌಕರರಲ್ಲಿ8 ಮಂದಿಗೆ ಮಾತ್ರ ಸರಕಾರದಿಂದ ಪೂರ್ಣ ವೇತನ ಸಿಗುತ್ತಿದೆ, ಉಳಿದ 16 ಮಂದಿ ನೌಕರರಿಗೆ ಸರಕಾರ ಮಾಸಿಕ 18 ಸಾವಿರ ರೂ. ನೀಡಿದರೆ ಉಳಿಕೆ ಹಣವನ್ನು ಪುರಸಭೆಯಿಂದ ಭರಿಸಬೇಕಿದೆ. ಇದರೊಂದಿಗೆ ದಿನಗೂಲಿ ನೌಕರರಿಗೂ ಪುರಸಭೆಯ ನಿಧಿಯಿಂದಲ್ಲೇ ವೇತನ ನೀಡಬೇಕಿದೆ. ಆದರೆ ಪುರಸಭೆಯಿಂದ ಸಕಾಲಿಕವಾಗಿ ವೇತನ ಬಿಡುಗಡೆಯಾಗದೇ ಇರುವುದೇ ಸಮಸ್ಯೆಯಾಗಿದೆ.

ಪ್ರತಿ ತಿಂಗಳು ಸಮರ್ಪಕವಾಗಿ ವೇತನ ನೀಡದೇ ಮೂರು ಅಥವಾ ಆರು ತಿಂಗಳಿಗೊಮ್ಮೆ ವೇತನ ನೀಡುತ್ತಿರುವುದರಿಂದ ಸ್ವಚ್ಛತಾ ಕಾರ್ಮಿಕರಿಗೆ ಜೀವನ ನಡೆಸುವುದೇ ಕಷ್ಟಕರವಾಗಿದೆ ಎನ್ನುತ್ತಾರೆ ಪೌರ ಕಾರ್ಮಿಕರು.

ಸ್ಮಶಾನವಿಲ್ಲ: ಕಳೆದ ಎರಡು ತಿಂಗಳಲ್ಲಿನಾಲ್ವರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ. ಪೌರ ಕಾರ್ಮಿಕರ ಅಂತ್ಯಕ್ರಿಯೆಗೆ ಸೂಕ್ತ ಸ್ಥಳವು ಇಲ್ಲವಾಗಿದ್ದು, ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸಬೇಕಿದೆ ಎನ್ನುತ್ತಾರೆ ಪೌರ ಕಾರ್ಮಿಕರೋಬ್ಬರು.

ಜಾಗೃತಿ ಕೊರತೆ: ಸ್ವಚ್ಛತಾ ಕಾರ್ಯದಲ್ಲಿರುವ ಪೌರ ಕಾರ್ಮಿಕರಿಗೆ ಕೈಗವಸು, ಮಾಸ್ಕ್ ಸೇರಿದಂತೆ ಅಗತ್ಯ ಸ್ವಚ್ಛತಾ ಪರಿಕರಗಳನ್ನು ನೀಡಲಾಗಿದ್ದರೂ ಸಾಕಷ್ಟು ಮಂದಿ ಬಳಕೆ ಮಾಡದೇ ಇರುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೇ ಪುರಸಭೆಯಿಂದ ನಡೆಯಬೇಕಾದ ಆರೋಗ್ಯ ಶಿಬಿರಗಳು ಕೇವಲ ದಾಖಲೆಯಲ್ಲಿಮಾತ್ರ ಇರುವುದರಿಂದ ಪೌರ ಕಾರ್ಮಿಕರಿಗೆ ಯಾವುದೇ ಪ್ರಯೋಜನವಾಗದಂತೆ ಆಗಿದೆ.

ಕೋಟ್ ..

ಪಟ್ಟಣದಲ್ಲಿಕೆಲಸ ಮಾಡುವ ಪೌರ ಕಾರ್ಮಿಕರ ಸ್ಥಿತಿಯನ್ನು ನೋಡಿದರೆ ನಮಗೆ ಕನಿಕರವಾಗುತ್ತದೆ. ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ನಾಗರಿಕ ಸಮಾಜದಲ್ಲಿಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕು.

-ನಾಗರಾಜು, ಮಾಜಿ ಅಧ್ಯಕ್ಷರು, ಪುರಸಭೆ, ಕೆ.ಆರ್ .ಪೇಟೆ.

ಇತ್ತೀಚೆಗೆ ಕರ್ತವ್ಯದ ವೇಳೆ ಪೌರ ಕಾರ್ಮಿಕ ಶ್ರೀನಿವಾಸ್ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಸರಕಾರಿ ಉದ್ಯೋಗ ಕೊಡಬೇಕು. ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು.

-ಕೆ.ಆರ್ .ಬನ್ನಾರಿ, ಅಧ್ಯಕ್ಷರು, ತಾಲೂಕು ಅರುಂಧತಿಯಾರ್ ಸಮಾಜ ಕ್ಷೇಮಾಭಿವೃದ್ಧಿ ಸಂಘ.

ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ವೇತನವನ್ನು ನೀಡಲು ಪುರಸಭೆ ನಿಧಿಯಿಂದ ಹಣವನ್ನು ಒದಗಿಸಬೇಕಾಗುತ್ತದೆ. ಹಿಂದೆ ಸರಿಯಾದ ರೀತಿಯಲ್ಲಿಪ್ರತಿ ತಿಂಗಳು ಸಂಬಳವನ್ನು ನೀಡಿರಲಿಲ್ಲ. ಶೀಘ್ರವಾಗಿ ವೇತನ ನೀಡುತ್ತೇವೆ

-ಅಶೋಕ್ , ಮುಖ್ಯಾಧಿಕಾರಿ, ಪುರಸಭೆ.

ಪೋಟೋ ಇದೆ

ಚಿತ್ರಶೀರ್ಷಿಕೆ: ಋಈ್ಗ22ಅಖಿಎಓ್ಕP1ಧಿ- ಪುರ ಸಭೆಯ ಪೌರ ಕಾರ್ಮಿಕ ಮೃತ ಶ್ರೀನಿವಾಸ ಅವರ ಪ್ರಾರ್ಥಿವ ಶರೀರಕ್ಕೆ ಅಂತಿನ ನಮನ ಸಲ್ಲಿಸುತ್ತಿರುವ ಪುರಸಭೆಯ ಆರೋಗ್ಯಾಧಿಕಾರಿ ಅಶೋಕ್ .