ವ್ಯಕ್ತಿ ಬಿದ್ದಾಗ ಸೋಲಲ್ಲ, ಮತ್ತೊಮ್ಮೆ ಪುಟಿದೇಳಲು ಮರೆತಾಗ ಸೋಲೋದು: ಅಭಿನಂದನ್ ಶೆಟ್ಟಿ

Contributed byvkkarkala@gmail.com|Vijaya Karnataka
falling is not failing forgetting to rise again is the real failure abhinandan shetty
ವಿಕ ಸುದ್ದಿಲೋಕ ಕಾರ್ಕಳ

ಸಿಕ್ಕಿದ ಅವಕಾಶವನ್ನು ನೈಜರೂಪಕ್ಕೆ ತಂದು ಅದನ್ನು ಯಶಸ್ವಿ ಮಾಡಬೇಕು. ಇಲ್ಲಿನಮ್ಮ ಜಾಣ್ಮೆ, ನಿರಂತರ ಪ್ರಯತ್ನ ಮತ್ತು ಬುದ್ಧಿವಂತಿಕೆ ಮುಖ್ಯ. ವ್ಯಕ್ತಿ ಬಿದ್ದಾಗ ಸೋಲಲ್ಲ. ಮತ್ತೊಮ್ಮೆ ಪುಟಿದೇಳಲು ಮರೆತಾಗ ಸೋಲೋದು. ಸೋಲು, ಹಿನ್ನಡೆಗಳು ಬದುಕಿನ ಒಂದು ಭಾಗ. ಜೀವನದಲ್ಲಿಗ್ಯಾರಂಟಿ ಮತ್ತು ವ್ಯಾರಂಟಿ ಇರುವುದಿಲ್ಲ. ಇಲ್ಲೇನದರೂ ಎರಡು ವಿಚಾರಗಳು ಇದ್ದರೇ ಸಾಧ್ಯತೆಗಳು ಮತ್ತು ಅವಕಾಶಗಳು ಮಾತ್ರ ಎಂದು ಪಿಎಚ್ ಎಫ್ ಅಭಿನಂದನ್ ಶೆಟ್ಟಿ ಹೇಳಿದ್ದಾರೆ.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿಶ್ರೀಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-51ರಲ್ಲಿಭವಿಷ್ಯದ ನಿರೀಕ್ಷೆ ಮತ್ತು ಸವಾಲುಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಅನಿಲ್ ಕುಮಾರ್ ಜೈನ್ , ಉಪಪ್ರಾಂಶುಪಾಲ ಸಾಹಿತ್ಯ, ಪಿ.ಆರ್ .ಒಜ್ಯೋತಿ ಪದ್ಮನಾಭ ಭಂಡಿ, ಸಂಸ್ಥೆಯ ಹಿತೈಷಿ ಉಪೇಂದ್ರ ವಾಗ್ಲೆಉಪಸ್ಥಿತರಿದ್ದರು.

ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

(ಫೊಟೋ:24ಕೆವಿ-ಅಭಿನಂದನ್ ಶೆಟ್ಟಿ)