ಸೆ.4ರಂದು ವಾಸ್ತುಶಾಂತಿ, ಜಾತ್ರಾ ಮಹೋತ್ಸವ

Contributed byjagadeeshkhobri2010@gmail.com|Vijaya Karnataka
grand festival and vastu shanti ceremony on september 4th
ತೆಲಸಂಗ: ಗ್ರಾಮದ ಏಳು ಮಕ್ಕಳ ತಾಯಿ ದೇವಸ್ಥಾನದ ನೂತನ ಕಟ್ಟಡದ ವಾಸ್ತುಶಾಂತಿ ಹಾಗೂ ಜಾತ್ರಾ ಮಹೋತ್ಸವ ಸೆ.4 ರಂದು ಜರುಗಲಿದೆ.

ಈ ಪ್ರಯುಕ್ತ ಬೆಳಗ್ಗೆ ಹೋಮ- ಹವನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇವಸ್ಥಾನದ ಅರ್ಚಕಿ ಸರೋಜಿನಿ ಡೆಂಗಿ ಅವರ ನಿವಾಸದಿಂದ ಏಳು ಮಕ್ಕಳ ತಾಯಿಯ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿದಡ್ಡಿ ಗ್ರಾಮದ ಶ್ರೀ ದುರ್ಗಾದೇವಿ ಪಲ್ಲಕ್ಕಿಯೊಂದಿಗೆ ಏಳು ಮಕ್ಕಳ ತಾಯಿಯ ಪಲ್ಲಕ್ಕಿ ಭೇಟಿ ನಡೆಯಲಿದೆ.
ಮಧ್ಯಾಹ್ನ 12ರಿಂದ ಇಡೀ ದಿನ ಭಕ್ತರಿಗೆ ಮಹಾ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಡೊಳ್ಳಿನ ಹಾಡು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅರ್ಚಕರು ತಿಳಿಸಿದ್ದಾರೆ.

-24ತೆಲಸಂಗ1

ಏಳು ಮಕ್ಕಳ ತಾಯಿಯ ಪಲ್ಲಕ್ಕಿ.