ಬ್ಲಾಕ್ ಕಾಂಗ್ರೆಸ್ ನಿಂದ ಅರಸು ಜನ್ಮದಿನಾಚರಣೆ

Contributed bybasavarajskprnews@gmail.com|Vijaya Karnataka
celebration of arasu and rajiv gandhis birth anniversary held in shikarpur
ಬ್ಲಾಕ್ ಕಾಂಗ್ರೆಸ್ ನಿಂದ ಅರಸು ಜನ್ಮದಿನಾಚರಣೆ

ವಿಕ ಸುದ್ದಿಲೋಕ ಶಿಕಾರಿಪುರ
ಬ್ಲಾಕ್ ಕಾಂಗ್ರೆಸ್ ಹಾಗು ಈಶ್ವರ್ ಫೌಂಡೇಶನ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿ ವೈದ್ಯರನ್ನು ಸನ್ಮಾನಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರಿವಾಳ ಶಿವರಾಮ್ ಮಾತನಾಡಿ, ದೇಶ ಕಂಡಂತಹ ಅಪರೂಪದ ರಾಜಕಾರಣಿ ದೇವರಾಜ್ ಅರಸು ಅವರು, ಉಳುವವನೆ ಹೊಲದೊಡೆಯ ಕಾನೂನು ತರುವ ಮೂಲಕ ಬಡವರೂ ಸಹ ಜಮೀನಿನ ಮಾಲೀಕರಾಗುವಂತೆ ಮಾಡಿದ ವ್ಯಕ್ತಿ ಎಂದರು.

ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಪಂಚಾಯತ್ ರಾಜ್ ಜಾರಿ ಮಾಡುವ ಮೂಲಕ ಕೇವಲ ಅಡುಗೆ ಮನೆಗೆ ಸೀಮಿತರಾಗಿದ್ದ ಮಹಿಳೆಯರಿಗೆ ಅಧಿಕಾರ ನೀಡಿದ ಅಪರೂಪದ ರಾಜಕಾರಣಿ ರಾಜೀವ್ ಗಾಂಧಿಯವರು ಎಂದರು.

ಕಾಂಗ್ರೆಸ್ ಮುಖಂಡ ಎನ್ .ವಿ.ಈರೇಶ್ ಮಾತನಾಡಿರು. ಪುರಸಭೆ ಮಾಜಿ ಸದಸ್ಯ ಉಳ್ಳಿ ದರ್ಶನ್ , ನಗರಾಧ್ಯಕ್ಷ ರೋಹನ್ , ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯಕ್ , ಎನ್ ಎಸ್ ಯುಐ ಅಧ್ಯಕ್ಷ ಸಮೀರ್ , ಚರಣ್ , ಆಹ್ಮದ್ ಖಾನ್ , ಶಿವುಕುಮಾರ್ ಸಂದಿಮನಿ, ಮಹೇಂದ್ರಣ್ಣ, ನಗರದ ಮಾಲತೇಶ್ , ಗಿರೀಶ್ ದುರ್ಗಾವರ್ ಹಾಗು ವೈದ್ಯರಾದ ಪ್ರಕಾಶ್ , ವಿನಯ್ ಕುಮಾರ್ , ಪೂಜಾ, ಗೀತಾ, ಮತ್ತು ನರ್ಸ್ ಭಾಗೀರಥಿ ಉಪಸ್ಥಿತರಿದ್ದರು.

21 ಎಸ್ ಕೆ ಪಿ 1 : ಶಿಕಾರಿಪುರದಲ್ಲಿಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನ್ಮ ದಿನಾಚರಣೆ ನಡೆಯಿತು.