ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿಸಾಧನೆ ಮಾಡಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಅರಸೀಕೆರೆ ತಾಲೂಕು ಜೇನುಕಲ್ ಕ್ರೀಡಾಂಗಣದಲ್ಲಿಅರಸೀಕೆರೆಯ ತರಳಬಾಳು ಪದವಿ ಪೂರ್ವ ಕಾಲೇಜಿನ ಅತಿಥ್ಯದಲ್ಲಿನಡೆದ 2026-27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿಭಾಗವಹಿಸಿ ವಿಜೇತರಾಗಿ ಹಾಸನ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಹಾಗೂ ಬಾಲಕರ ವಿಭಾಗದ ಖೋ ಖೋ ಪಂದ್ಯದಲ್ಲಿಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಅಥ್ಲೆಟಿಕ್ ವಿಭಾಗದಲ್ಲಿಖುಷಿ ಎನ್ .ಆರ್ . ಜಾವೆಲಿನ್ ಎಸೆತದಲ್ಲಿಪ್ರಥಮ ಸ್ಥಾನ, ವಿದ್ಯಾಶ್ರೀ ಜೆ.ಎಂ ಡಿಸ್ಕ್ ಸ್ ಥೋನಲ್ಲಿಮತ್ತು ಹ್ಯಾಮರ್ ಎಸೆತದಲ್ಲಿಪ್ರಥಮ ಸ್ಥಾನ. ಸಿಂಚನಾಎಲ್ .ಯು . 100 ಮೀಟರ್ ಓಟದಲ್ಲಿದ್ವಿತೀಯ ಸ್ಥಾನ ಹಾಗೂ ಲೋಲಾಕ್ಷಿ 400 ಮೀಟರ್ ಓಟದ ಸ್ಪರ್ಧೆಯಲ್ಲಿದ್ವಿತೀಯ ಸ್ಥಾನ ಪಡೆದುಕೊಂಡರು.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿಅತ್ಯುತ್ತಮ ಸಾಧನೆ ತೋರಿದ ವಿಜೇತ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ ಉಪನ್ಯಾಸಕರಾದ ಹರೀಶ್ ಎ.ಎಂ. ಅವರಿಗೆ ಶಾಸಕ ಎಚ್ .ಕೆ.ಸುರೇಶ್ , ಕಾಲೇಜು ಪ್ರಾಂಶುಪಾಲ ಉಮೇಶ್ ಹೊಸಹಳ್ಳಿ, ಉಪನ್ಯಾಸಕರು, ಸಿಬಿಸಿ ಸಮಿತಿಯವರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.
24 ಫೋಟೋ 01:- ಜಾವಗಲ್ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಸಂಭ್ರಮಿಸಿದರು.