ಭಾರತೀನಗರ/ ಚಿಕ್ಕರಸಿನಕೆರೆಯಲ್ಲಿಸಮುದಾಯ ಜೀವನ ಶಿಬಿರ

Contributed bysathyasathish2014@gmail.com|Vijaya Karnataka
community education camp inaugurated by minister in bharatinagar
ಶಿಕ್ಷಣದಿಂದ ಶಿಸ್ತು, ಸಂಸ್ಕಾರ

ಸಮುದಾಯ ಜೀವನ ಶಿಬಿರ ವಿಧಾನ ಪರಿಷತ್ ಸದಸ್ಯ ರಘು ಆರ್ .ಕೌಟಿಲ್ಯ ಸಲಹೆ
ವಿಕ ಸುದ್ದಿಲೋಕ ಭಾರತೀನಗರ

ಪ್ರಶಿಕ್ಷಣಾರ್ಥಿಗಳು ಭವಿಷ್ಯದಲ್ಲಿಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ರಘು ಆರ್ . ಕೌಟಿಲ್ಯ ಕರೆ ನೀಡಿದರು.

ಸಮೀಪದ ಚಿಕ್ಕರಸಿನಕೆರೆ ಸಮುದಾಯ ಭವನದಲ್ಲಿಭಗವಾನ್ ಬುದ್ಧ ಶಿಕ್ಷಣ ಮಹಾವಿದ್ಯಾನಿಲಯದ ವತಿಯಿಂದ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

‘‘ಶಿಕ್ಷಕರು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೇ ಮಕ್ಕಳಲ್ಲಿಉತ್ತಮ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸಬೇಕು,’’ಎಂದರು.

‘‘ ಇಂದಿನ ವಿದ್ಯಾರ್ಥಿಗಳೇ ನಾಳಿನ ಸಮಾಜದ ನಿರ್ಮಾತೃಗಳಾಗಿದ್ದು, ಅವರಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ಮೌಲ್ಯಗಳನ್ನು ನೀಡುವುದು ಅಗತ್ಯವಾಗಿದೆ,’’ಎಂದು ಹೇಳಿದರು.

‘‘ಸಮುದಾಯ ಜೀವನ ಶಿಬಿರಗಳು ವಿದ್ಯಾರ್ಥಿಗಳಲ್ಲಿಸಾಮಾಜಿಕ ಅರಿವು ಮೂಡಿಸುವುದರ ಜತೆಗೆ ವಿವಿಧ ವರ್ಗಗಳ ಜನರೊಂದಿಗೆ ಬೆರೆಯುವ ಅವಕಾಶ ಕಲ್ಪಿಸುತ್ತವೆ. ಇದರಿಂದ ಗ್ರಾಮೀಣ ಜನರ ಜೀವನ, ಅವರ ಸಮಸ್ಯೆಗಳು, ಅಗತ್ಯಗಳು ಹಾಗೂ ಸವಾಲುಗಳನ್ನು ಹತ್ತಿರದಿಂದ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ,’’ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನ ಮಾಜಿ ಸದಸ್ಯ ಡಾ. ಈ.ಸಿ.ನಿಂಗರಾಜೇಗೌಡ ಮಾತನಾಡಿ,‘‘ಶಿಕ್ಷಕರ ಹುದ್ದೆ ಬಹಳ ಪವಿತ್ರವಾಗಿದೆ. ಹಾಗಾಗಿ ಪ್ರಶಿಕ್ಷಣಾರ್ಥಿಗಳು ಮಕ್ಕಳಿಗೆ ಜವಾಬ್ದಾರಿತನದಿಂದ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳು ಕೂಡ ಸತ್ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ,’’ಎಂದರು.

‘‘ಸಮುದಾಯ ಜೀವನವು ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವುದರ ಜತೆಗೆ, ಸಮಾಜದಲ್ಲಿಪರಸ್ಪರ ವಿಶ್ವಾಸ, ಸಹಕಾರ ಹಾಗೂ ಸಾಮರಸ್ಯವನ್ನು ಬೆಳೆಸುವಲ್ಲಿಪ್ರಮುಖ ಪಾತ್ರ ವಹಿಸುತ್ತದೆ,’’ ಎಂದು ಹೇಳಿದರು.

ಭಗವಾನ್ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಯಮದೂರು ಸಿದ್ದರಾಜು ಮಾತನಾಡಿ, ‘‘ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮನೋಭಾವವನ್ನು ಬೆಳೆಯುತ್ತದೆ,’’ಎಂದರು.

ಇದೇ ವೇಳೆ ಮೋರಾರ್ಜಿ ದೇಸಾಯಿ ವಸತಿ ವಿಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ಲೋಕೇಶ್ ಹಾಗೂ ಪರಿಸರ ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್ ಅವರನ್ನು ಕಾರ್ಯಕ್ರಮದಲ್ಲಿಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವಮೈತ್ರಿ ಬುದ್ಧ ವಿಹಾರ ಡಾ.ಕಲ್ಯಾಣ ಸಿರಿ ಭಂತೇಜಿ, ಕನ್ನಡ ಸಾಹಿತ್ಯ ಪರಿಷತ್ ನ ಮಳವಳ್ಳಿ ಘಟಕದ ಅಧ್ಯಕ್ಷ ಡಾ.ಎಲ್ .ಚೇತನ್ ಕುಮಾರ್ , ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ನ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ, ಪ್ರಾಂಶುಪಾಲ ಡಾ.ಎನ್ .ಬಾಲಸುಬ್ರಮಣ್ಯ, ಪ್ರಾಧ್ಯಾಪಕರಾದ ಬಿ.ಸಿದ್ದನಂಜ, ಕೆ.ಅನುರಾಧ ಇದ್ದರು.

-------------

ಫೋಟೋ23ಬಿಟಿಜಿ1-

ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಸಮುದಾಯ ಭವನದಲ್ಲಿಭಗವಾನ್ ಬುದ್ಧ ಶಿಕ್ಷಣ ಮಹಾವಿದ್ಯಾನಿಲಯ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ರಘು ಆರ್ . ಕೌಟಿಲ್ಯ ಉದ್ಘಾಟಿಸಿದರು.