ಎಲ್ಲಿಏನು ? ಶುಕ್ರವಾರ

Contributed bysuresha.yg@timesgroup.com|Vijaya Karnataka
programs on womens safety and contemporary issues on friday
ಲೊಯೋಲ ಪದವಿ ಕಾಲೇಜು: ಸಮಕಾಲೀನ ಮಹಿಳೆಯರ ಸುರಕ್ಷತೆ ಕುರಿತು ಕಾರ್ಯಕ್ರಮ. ಮುಖ್ಯ ಅತಿಥಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ. ಅಧ್ಯಕ್ಷತೆ : ಕಾಲೇಜು ಪ್ರಾಂಶುಪಾಲ ಫಾದರ್ ಡಾ.ಅಲ್ಫೋನ್ಸ್ ಫೆರ್ನಾಂಡಿಸ್ ಎಸ್ .ಜೆ.

ಸ್ಥಳ : ಕಾಲೇಜು ಆವರಣ, ಎಸ್ ಒಎಸ್ ಪೋಸ್ಟ್ , ಕಾಳೇನ ಅಗ್ರಹಾರ, ಬನ್ನೇರುಘಟ್ಟ ರಸ್ತೆ. ಮಧ್ಯಾಹ್ನ 1.30
ಹಿಂದು ಜಾಗರಣ ವೇದಿಕೆ : ಅಖಂಡ ಭಾರತ ಸಂಕಲ್ಪ ದಿನ. ಅಧ್ಯಕ್ಷತೆ : ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಜ್ಞ ಡಾ.ಕೆ.ಜೆ.ಪುರುಷೋತ್ತಮ್ . ಮುಖ್ಯ ವಕ್ತಾರ : ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್ . ಸಂತೋಷ್ , ಮುಖ್ಯ ಅತಿಥಿ : ಬೆಂಗಳೂರು ಕಿಡ್ನಿ ಸ್ಟೋನ್ ಆಸ್ಪತ್ರೆಯ ಯುರೋಲೋಜಿಸ್ಟ್ ಡಾ.ಎಚ್ .ಕೆ.ನಾಗರಾಜ್ .

ಸ್ಥಳ: ಬನಪ್ಪ ಪಾರ್ಕ್, ಹಲಸೂರು ಗೇಟ್ ಪೊಲೀಸ್ ಠಾಣೆ ಹತ್ತಿರ, ಕೆಂಪೇಗೌಡ ರಸ್ತೆ. ರಾತ್ರಿ 12.

ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್: ಯಕ್ಷಗಾನದ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ. ಉಪನ್ಯಾಸಕರು : ವಿದುಷಿ ಅನ್ನಪೂರ್ಣೇಶ್ವರಿ ಕಟೀಲು.

ಸ್ಥಳ : ಅಚ್ಯುತ ಪಾರ್ಟಿ ಹಾಲ್ , ಶ್ರೀನಿವಾಸನಗರ. ಸಂಜೆ 5.30.