ಬಿಸಿಯೂಟ ತಯಾರಿಸುವಾಗ ನಿರ್ಲಕ್ಷ್ಯ ಸಲ್ಲ

Contributed bymudholvk@gmail.com|Vijaya Karnataka
childrens health at risk due to negligence
ಬಿಸಿಯೂಟ ತಯಾರಿಸುವಾಗ ನಿರ್ಲಕ್ಷ್ಯ ಸಲ್ಲ

ವಿಕ ಸುದ್ದಿಲೋಕ ಮುಧೋಳ
‘‘ಸರಕಾರಿ, ಅನುದಾನಿತ ಶಾಲೆಗಳಲ್ಲಿಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಶಿಕ್ಷಕರು, ಸಿಬ್ಬಂದಿ ನಿರ್ಲಕ್ಷ್ಯವಹಿಸಬೇಡಿ,’’ ಎಂದು ತಹಸೀಲ್ದಾರ್ ಡಾ.ಚಿಕ್ಕಪ್ಪ ಎಂ.ನಾಯಕ ಹೇಳಿದರು.

ನಗರದ ಬವಿವ ಸಂಘದ ಆರ್ ಎಂಜಿ ಸಂಯುಕ್ತ ಪಿಯು ಕಾಲೇಜಿನಲ್ಲಿತಾಲೂಕು ಮಟ್ಟದ ಪೋಷಣ ಶಕ್ತಿ ಯೋಜನೆಯಡಿ ಅಡುಗೆ ಸಿಬ್ಬಂದಿಗೆ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿಮಾತನಾಡಿದರು. ‘‘ಶಾಲೆಯ ಪ್ರತಿಯೊಬ್ಬ ಮಗು ತಮ್ಮ ಮಕ್ಕಳೆಂದು ಭಾವಿಸಿ ಆಹಾರ ತಯಾರಿಸಿ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎಚ್ಚರ ವಹಿಸಬೇಕು. ಅಡುಗೆ ಮಾಡುವಾಗ 10 ಸುರಕ್ಷತೆ ಕ್ರಮಗಳನ್ನು ಪಾಲಿಸಬೇಕು,’’ ಎಂದು ಸಲಹೆ ನೀಡಿದರು.

ತಾಪಂ ಇಒ ರಾಘವೇಂದ್ರ ಕಳ್ಳಿಮನಿ ಮಾತನಾಡಿ, ‘‘ಮುಗಳಖೋಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಆಗಿರುವ ನಿರ್ಲಕ್ಷತ್ರ್ಯದಿಂದ ಮಕ್ಕಳು ಅಸ್ವಸ್ಥರಾಗುವಂತಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಶಾಲೆ ಆವರಣದಲ್ಲಿವಿಷಕಾರಿ ಮರಗಳು ಇರದಂತೆ ನೋಡಿಕೊಳ್ಳಬೇಕು ಎಂದರು.

ಬಿಇಒ ಎಸ್ .ಎಂ.ಮುಲ್ಲಾ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಹಣಮಂತ ಅರಕೇರಿ ಮಾತನಾಡಿದರು. ಎಸ್ .ಎ.ಮೋದಿ ಇತರರು ಇದ್ದರು.

ಫೋಟೊ 11 ಎಂಡಿಎಲ್ 5

ಬಿಸಿಯೂಟದ ಸುರಕ್ಷತೆ ಕುರಿತು ಮುಧೋಳದಲ್ಲಿಅಕ್ಷರ ದಾಸೋಹ ಸಿಬ್ಬಂದಿಗೆ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಬಿಇಒ ಎಸ್ .ಎಂ.ಮುಲ್ಲಾಮಾತನಾಡಿದರು.